Davanagere: ನ.26ರಂದು ನಿವೃತ್ತ ಪಿಂಚಣಿ ನೌಕರರ ಸಮಾವೇಶ: ಕೆ.ಎಂ.ಮರುಳಸಿದ್ದಯ್ಯ
ರಾಷ್ಟ್ರೀಯ ಸಂಘರ್ಷ ಸಮಿತಿ ದಾವಣಗೆರೆ ವತಿಯಿಂದ ರಾಜ್ಯಮಟ್ಟದ ಇಪಿಎಸ್ -95 ನಿವೃತ್ತ ಪಿಂಚಣಿ ನೌಕರರ ಸಮಾವೇಶವನ್ನು ಇದೇ 26ರಂದು ಶನಿವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಎಂ.ಮರುಳಸಿದ್ದಯ್ಯ ತಿಳಿಸಿದರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ನ.24): ರಾಷ್ಟ್ರೀಯ ಸಂಘರ್ಷ ಸಮಿತಿ ದಾವಣಗೆರೆ ವತಿಯಿಂದ ರಾಜ್ಯಮಟ್ಟದ ಇಪಿಎಸ್ -95 ನಿವೃತ್ತ ಪಿಂಚಣಿ ನೌಕರರ ಸಮಾವೇಶವನ್ನು ಇದೇ 26ರಂದು ಶನಿವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಎಂ.ಮರುಳಸಿದ್ದಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಎನ್.ಎ.ಸಿ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ ರಾವತ್, ರಾಷ್ಟ್ರೀಯ ಕಾರ್ಯದರ್ಶಿ ವೀರೇಂದ್ರ ಸಿಂಗ್, ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ, ಎನ್.ಎಸಿ. ಐಟಿ ಸಂಯೋಜಕ ಸಿ.ಎಸ್.ಮಂಜುನಾಥ, ನಂಜುಂಡೇಗೌಡರು, ಜಿ.ಎಸ್.ಎಂ.ಸ್ವಾಮಿ, ಕೆ.ಎಂ.ಮರುಳಸಿದ್ಧಯ್ಯ, ಕೆ.ಎಸ್. ಗೋಪಾಲಕೃಷ್ಣ ಇತರರು ಆಗಮಿಸಲಿದ್ದಾರೆ ಎಂದು ಹೇಳಿದರು.
Davanagere: ದಿವಂಗತ ತಿಪ್ಪೇಸ್ವಾಮಿ ಸಮಾಧಿ ನಾಶಕ್ಕೆ ತೀವ್ರ ವಿರೋಧ: ಪ್ರತಿಭಟನೆ
ರಾಜಾದ್ಯಂತ ವಿವಿಧ ಜಿಲ್ಲಿಗಳಿಂದ ಇಪಿಎಸ್ 95 ನಿವೃತ್ತ ಪಿಂಚಣಿದಾರರು ಆಗಮಿಸಿ, ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳು, ದಾವಣಗೆರೆ ಎಲ್ಲಾ ಕಾಟನ್ ಮಿಲ್‌ಗಳು, ಡಿಸಿಸಿ ಬ್ಯಾಂಕ್, ಕೆಎಂಎಫ್, ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ, ದಾವಣಗೆರೆ ವೈರ್ ಕಂಪನಿಗಳು, ಆ್ಯಪಲ್ ಕಂಪನಿಗಳು ಮತ್ತು ಕುಮಾರಪಟ್ಟಣಂ ಗ್ರಾಸಿಮ್ ಇಂಡಸ್ಟಿಸ್, ಹರಿಹರ ಕಿರ್ಲೋಸ್ಕರ್ ಇನ್ನೂ ಅನೇಕ ಸಣ್ಣಪುಟ್ಟ ಕೈಗಾರಿಕೆಗಳು ಹಾಗೂ ಉದ್ಯಮದ ಇಪಿಎಸ್ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ಆಗಮಿಸಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
Uttara Kannada: ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್
ರಾಷ್ಟ್ರೀಯ ಭವಿಷ್ಯ ನಿಧಿ ಪಿಂಚಣಿ ಇಲಾಖೆಯಿಂದ ನಾವು ಪಿಂಚಣಿಯನ್ನು ಪಡೆಯುತ್ತಿದ್ದು, ಈ ಮೊತ್ತವು ಅತ್ಯಲ್ಪ ಆಗಿದೆ. ದುಬಾರಿ ಬೆಲೆಗಳ ಕಾಲದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಕಾರಣ ಅವೈಜ್ಞಾನಿಕ ಪಿಂಚಣಿ ವ್ಯವಸ್ಥೆ ವಿರೋಧಿಸಿ ಕನಿಷ್ಟ 7500 ಪಿಂಚಣಿ, ಡಿ.ಎ., ಆರೋಗ್ಯ ಸವಲತ್ತುಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾವೇಶದಲ್ಲಿ ಅಗ್ರಹಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಈಶಪ್ಪ, ಶಾಂತಪ್ಪ, ಮಂಜುನಾಥ್, ನಾಗರಾಜ್ ಇತರರು ಇದ್ದರು.