ಸಿಎಂಗೆ ಸಿಗ್ತಾ ಇದ್ಯಾ ಅಪಶಕುನದ ಮುನ್ಸೂಚನೆ, ಕಿತ್ತೂರು ಉತ್ಸವಕ್ಕೆ ಚಾಲನೆ ನೀಡುವಾಗ ಸಿದ್ದರಾಮಯ್ಯ ಬಟ್ಟೆಗೆ ತಾಕಿದ ಬೆಂಕಿ!
ಕಿತ್ತೂರು ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಣ್ಣ ಅವಗಢ ಸಂಭವಿಸಿದ್ದು, ಅಪಶಕುನದ ಚರ್ಚೆಗೆ ಕಾರಣವಾಗಿದೆ. ಜ್ಯೋತಿ ಬೆಳಗಿಸುವಾಗ ಅವರ ಬಟ್ಟೆಗೆ ಕಿಡಿ ತಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು (ಅ.2): ಕಳೆದ ಸಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಕಾರಿನ ಮೇಲೆ ಕಪ್ಪು ಕಾಗೆ ಕುಳಿತುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಕೊನೆಗೆ ಸಿದ್ದರಾಮಯ್ಯ ಈ ಕಾರ್‌ಅನ್ನೇ ಬದಲಾಯಿಸಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಮುಡಾ ಸಂಕಷ್ಟ ಎದುರಾಗಿದೆ. ಇದರ ನಡುವೆ ಅವರಿಗೆ ಕೆಲವು ಅಪಶಕುನದ ಮುನ್ಸೂಚನೆ ಸಿಗ್ತಾ ಇದ್ಯಾ ಎನ್ನುವ ಅನುಮಾನ ಕಾಡಿದೆ. ಅದಕ್ಕೆ ಕಾರಣವಾಗಿದ್ದು ಬುಧವಾರದ ಒಂದು ಘಟನೆ. ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಸಣ್ಣ ಪ್ರಮಾಣದ ಅವಗಢ ಸಂಭವಿಸಿದೆ. ಅವಗಢ ಸಣ್ಣದೇ ಆಗಿದ್ದರೂ, ಇದು ಅಪಶಕುನದ ಮುನ್ಸೂಚನೆ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ. ಜ್ಯೋತಿಗೆ ಚಾಲನೆ ನೀಡುವಾಗ ಸಿಎಂ ಅವರ ಬಟ್ಟೆಗೆ ಸಣ್ಣ ಬೆಂಕಿಯ ಕಿಡಿ ತಾಗಿದೆ. ಉತ್ಸವದ ಜ್ಯೋತಿ ಬೆಳಗುವ ವೇಳೆ ಸಿಎಂ ಬಟ್ಟೆಗೆ ಆಕಸ್ಮಿಕವಾಗಿ ಸಣ್ಣ ಕಿಡಿ ತಾಗಿದೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿಯನ್ನು ಆರಿಸಿದ್ದಾರೆ. ಇದರ ವಿಡಿಯೋಗಳು ಕೂಡ ವೈರಲ್ ಆಗಿವೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಸಂಕೇತ. ಬ್ರಿಟಿಷರು ವಿಧಿಸಿದ ತೆರಿಗೆಯನ್ನ ವಿರೋಧಿಸಿದ್ದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬುದನ್ನು ವಿರೋಧಿಸಿದರು. ತೆರಿಗೆಯನ್ನ ಕೊಡಲ್ಲ ಅಂತ ನೇರವಾಗಿ ಬ್ರಿಟಿಷರಿಗೆ ಹೇಳಿದ ದಿಟ್ಟ ಮಹಿಳೆ ಈಕೆ. ಸಂಗೊಳ್ಳಿ ರಾಯಣ್ಣ ಕೂಡ ಇವರ ಸೈನ್ಯದಲ್ಲಿದ್ದವರು. ಮೊದಲನೇ ಯುದ್ದದಲ್ಲಿ ಇವರಿಗೆ ಬ್ರಿಟಿಷರ ವಿರುದ್ದ ಜಯ ಗಳಿಸಿದ್ದರು ಎಂದು ಹೇಳದ್ದಾರೆ.
ಎರಡನೇ ಯುದ್ದದಲ್ಲಿ ಬ್ರಿಟಿಷರು ಗೆದ್ದು ಕಿತ್ತೂರನ್ನ ವಶಪಡಿಸಿಕೊಳ್ಳುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರಿಂದ ದೇಶಪ್ರೇಮ, ಸ್ವಾಭಿಮಾನ ಕಲಿಯಬೇಕಾಗುತ್ತದೆ. ನಮ್ಮ ದೇಶದ ಎಲ್ಲ ರಾಣಿಗಳ ಸಾಲಿನಲ್ಲಿ ಚೆನ್ನಮ್ಮ ಮೊದಲ ಸಾಲಿನಲ್ಲಿ ಇರುತ್ತಾರೆ. ರಾಜ್ಯ ಸರ್ಕಾರ ಕಿತ್ತೂರಿನ ಅಭಿವೃದ್ಧಿಗೆ ಎಲ್ಲ ರೀತಿ ಸಹಕಾರ ಕೊಡುತ್ತೇವೆ. ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅಭಿವೃದ್ಧಿಗೆ ಎಲ್ಲ ರೀತಿಯಾಗಿ ಶ್ರಮಿಸುತ್ತಿದ್ದಾರೆ. ಇವತ್ತು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಇವತ್ತು ಗಾಂಧಿ ಭವನದಿಂದ ವಿಧಾನಸೌಧದವರೆಗೆ ಬಂದಿದ್ದೇವೆ. ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.
ಮುಡಾ ಹಗರಣ: ಸೈಟ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ, ಸಿಎಂ ಪರ ಕಮಲ ಶಾಸಕನ ಬ್ಯಾಟಿಂಗ್!
ಬೆಳಗಾವಿಯಲ್ಲಿ 100 ವರ್ಷ ಸಂಭ್ರಮಾಚಣೆ ಆರಂಭವಾಗುತ್ತಿದೆ. ಹೆಚ್.ಡಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿದೆ. ಶಾಂತಿಯುತವಾಗಿ ಸತ್ಯಾಗ್ರಹದಿಂದ ಬ್ರಿಟಿಷರನ್ನ ದೇಶದಿಂದ ತೊಲಗಿಸಿ ಸ್ವತಂತ್ರ ತಂದು ಕೊಡಲಾಯಿತು. ಇದರ ಮುಂಚೂಣಿಯಲ್ಲಿ ನಾಯಕತ್ವವನ್ನು ಗಾಂಧಿ ವಹಿಸಿಕೊಂಡಿದ್ದರು. ಗಾಂಧಿಜೀ ಬಂದ ನಂತರ ಈ ದೇಶದಲ್ಲಿ ಬಂದೂಕು ಲಾಟಿ ಹಿಡಿದುಕೊಂಡು ಸಂಘರ್ಷ ರಕ್ತಪಾತ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧಿಜೀಯವರಿಗೆ ನಮನ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಮುಡಾ ಹಗರಣ: ನಾನು ಸಂಪತ್ತು ಬಯಸಿಲ್ಲ, ಈ ಸೈಟ್‌ಗಳು ತೃಣಕ್ಕೆ ಸಮ, ಸಿಎಂ ಪತ್ನಿ ಪಾರ್ವತಿ