ನನ್ನಿಂದ ಯಾವ ಖಾತೆಗೂ ಬೇಡಿಕೆ ಇಲ್ಲ : ಶಾಸಕ ಹೆಬ್ಬಾರ್

ಇನ್ನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದಾರೆ. ಸರ್ಕಾರ ನೀಡಿದ ಜವಾಬ್ದಾರಿ ನಿರ್ವಹಣೆ ಮಾಡುತ್ತೇವೆಯೇ ಹೊರತು ಇಂತದ್ದೇ ಖಾತೆ ಬೇಕೆಂದು ಲಾಭಿ ನಡಿಸುವುದಿಲ್ಲ ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

Okay With Any Dept Yellapur BJP MLA Shivaram Hebbar

ಶಿರಸಿ [ಜ.11]: ರಾಜಕಾರಣದಲ್ಲಿ ಆಸೆಗೊಂದು ಮಿತಿ ಇರಬೇಕು. ಆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಇಂತದ್ದೇ ನೀಡಬೇಕೆಂದು ಬೇಡಿಕೆ ಇಡಲ್ಲ. ಸರ್ಕಾರ ನೀಡಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಿ ಜಿಲ್ಲೆಗೊಂದು ನ್ಯಾಯ ಕೊಡಿಸುತ್ತೇವೆ ಎಂದು ಶಾಸಕ ಶಿವರಾಮ್‌ ಹೆಬ್ಬಾರ್‌ ಹೇಳಿದರು.

ತಾಲೂಕಿನ ಎಕ್ಕಂಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗಿರುವುದರಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ತಪ್ಪಿಲ್ಲ. ನಮ್ಮ ವೇಳೆ ಸರಿಯಿಲ್ಲದ ಕಾರಣ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದಾರೆ. ಸರ್ಕಾರ ನೀಡಿದ ಜವಾಬ್ದಾರಿ ನಿರ್ವಹಣೆ ಮಾಡುತ್ತೇವೆಯೇ ಹೊರತು ಇಂತದ್ದೇ ಖಾತೆ ಬೇಕೆಂದು ಲಾಭಿ ನಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದು ವಿರುದ್ಧ ಡಿಕೆ ಗೆಲವು: ಹಿಂದಿದೆ ಖತರ್ನಾಕ್ ಪ್ಲ್ಯಾನ್

ಅಧಿವೇಶನ ಆರಂಭಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಆಗದಿದ್ದರೆ ಉಪಚುನಾವಣೆಯ ಶಾಸಕರು ಅಧಿವೇಶನಕ್ಕೆ ಹೋಗುವುದಿಲ್ಲ ಎಂಬ ಮಾತು ಮಾಧ್ಯಮದ ಸೃಷ್ಟಿಯಾಗಿದೆಯೇ ಹೊರತು ಸತ್ಯದ ಸಂಗತಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿರಬೇಕೆಂಬ ಹಿನ್ನೆಲೆಯಲ್ಲಿ ಜನತೆ ತೀರ್ಪನ್ನು ನೀಡಿದ್ದಾರೆ. ಅಂತಹ ಜನಾದೇಶಕ್ಕೆ ವಿರುದ್ಧವಾಗಿ ಸರ್ಕಾರಕ್ಕೆ ಅಭದ್ರತೆಯನ್ನುಂಟು ಮಾಡುವ ಕೆಲಸವನ್ನು ಯಾವೊಬ್ಬ ಶಾಸಕರು ಮಾಡುವುದಿಲ್ಲ ಎಂದೂ ಹೇಳಿದರು.

ಸಂಪುಟ ಒತ್ತಡ: ಸಿಎಂ ವಿದೇಶ ಭೇಟಿ ರದ್ದು?...

ರಾಜಕಾರಣದಲ್ಲಿ ಆಸೆಗೆ ಒಂದು ಮೀತಿಯಿರಬೇಕು. ಕಾರ್ಯಕರ್ತರಿದ್ದಾಗ ಶಾಸಕರಾಗಬೇಕು, ಶಾಸಕರಾದ ಮೇಲೆ ಮಂತ್ರಿ ಆಗಬೇಕು, ಮಂತ್ರಿ ಆದ ಮೇಲೆ ಉತ್ತಮ ಖಾತೆ ಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಲು ಸಾಧ್ಯವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ ನೋಡಿ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕದಂಬೋತ್ಸವ ನಡೆಯಲಿದೆ

ಈ ವರ್ಷ ಬನವಾಸಿಯ ಕದಂಬೋತ್ಸವ ನಡೆಯುವುದಿಲ್ಲ ಎಂಬ ಸಂಶಯ ಯಾರಿಗೂ ಬೇಡ. ಫೆಬ್ರವರಿ ತಿಂಗಳಲ್ಲಿ ಕದಂಬೋತ್ಸವ ದಿನಾಂಕ ನಿಗದಿ ಮಾಡುತ್ತೇವೆ. ಕಳೆದೆರಡು ವರ್ಷದ ಪಂಪ ಪ್ರಶಸ್ತಿಯನ್ನೂ ಕದಂಬೋತ್ಸವ ವೇದಿಕೆಯಲ್ಲಿಯೇ ನೀಡಲಾಗುತ್ತದೆ. ಈ ಕುರಿತು ಸಚಿವ ಸಿ.ಟಿ. ರವಿ ಅವರ ಬಳಿಯೂ ಚರ್ಚೆ ನಡೆಸಿಯಾಗಿದೆ ಎಂದು ಹೆಬ್ಬಾರ್‌ ತಿಳಿಸಿದರು.

ಸಿಎಂ ದೆಹಲಿ ಪ್ರವಾಸ ರದ್ದು:

"

 

Latest Videos
Follow Us:
Download App:
  • android
  • ios