ಅಧಿಕಾರಿಗಳ ದಾಳಿಯಲ್ಲಿ ಬಯಲಾಯ್ತು ಅಕ್ರಮ ಪಡಿತರ ದಾಸ್ತಾನು. ನ್ಯಾಯಬೆಲೆ ಅಂಗಡಿಯಲ್ಲೇ ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿ ಹಾಗು ರಾಗಿ. ಬಡವರಿಗೆ ವಿತರಣೆಯಾಗಬೇಕಿದ್ದ   ಅಕ್ಕಿ ಹಾಗು ರಾಗಿ ವಿತರಣೆಯಾಗದೇ ಕಾಳಸಂತೆಗೆ ಹೋಗಲು  ಸಿದ್ಧವಾಗಿತ್ತು. 

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಆ.6): ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಅಕ್ಕಿ ಹಾಗು ರಾಗಿ ಇನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸೂಕ್ತವಾಗಿ ವಿತರಣೆಯಾಗುತ್ತಿಲ್ಲ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ಪಡಿತರ ವಿತರಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ.ಜನರಿಗೆ ವಿತರಣೆಯಾಗುವ ಅಕ್ಕಿ ಹಾಗು ರಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳು ಎಷ್ಟೇ ಬ್ರೇಕ್ ಹಾಕಿದ್ರು ಅದರ ದಂಧೆ ಜೋರಾಗಿದೆ ಎಂಬುದಕ್ಕೆ ದಾವಣಗೆರೆಯಲ್ಲಿ ನಡೆದ ರೈಡ್ ಸಾಕ್ಷಿಯಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಆಧೀಕ್ಷಕರು ಕನ್ನಿಕಾ ಸಿಕ್ರಿವಾಲ್ , ಆಹಾರ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ನಜ್ಮಾ, ಆಹಾರ ಇಲಾಖೆ ಸಿಬ್ಬಂದಿ , ಹರಿಹರ ತಹಶೀಲ್ದಾರ್ ಡಾ ಅಶ್ವತ್ ರ ತಂಡ ಸೇರಿ ಅಕ್ರಮ‌ ಪಡಿತರ ಅಡ್ಡೆ ಮೇಲೆ ದಾಳಿ ನಡೆಸಿ 178 ಕ್ವಿಂಟಾಲ್ ಆಪಾರ ಪ್ರಮಾಣದ ಪಡಿತರ ಅಕ್ಕಿ ಹಾಗು ರಾಗಿ ದಾಸ್ತಾನು ಜಪ್ತಿ ಮಾಡಿದ್ದಾರೆ. ಹರಿಹರದ ಇಂದಿರಾ ನಗರದ 2 ನೇ ಕ್ರಾಸ್ ನಲ್ಲಿ ಧರ್ಮರೆಡ್ಡಿ ಕಾರ್ಯದರ್ಶಿಯಾಗಿರುವ ಅಂಜನೇಯ ಬಳಕೆದಾರರ ಸಂಘದ ಕಾರ್ಯದರ್ಶಿ ಅಂಗಡಿ ಸಂಖ್ಯೆ 25 ರಲ್ಲಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಗ್ರಾಹಕರಿಗೆ ನೀಡಿದ್ದ ಪಡಿತರ ವಿತರಿಸದೇ ಹೆಚ್ಚಿನ ಪ್ರಮಾಣದಲಿ, ಸಂಗ್ರಹಿಸಿಟ್ಟುಕೊಂಡಿರುತ್ತಾನೆ.

ಈ ಮಾಹಿತಿ ಮೇರೆಗೆ ಸದರಿ ಸಹಾಯಕ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಉಪ ವಿಭಾಗ ಅವರೊಂದಿಗೆ 04-08-2022 ರಂದು ಆಹಾರ ನೀರಿಕ್ಷಕರಾದ ಶಿವಕುಮಾರ್ ಎಸ್‌ ಅವರು ಅಂಜನೇಯ ಬಳಕೆದಾರರ ಸಂಘದ ನ್ಯಾಯಬೆಲೆ ಅಂಗಡಿ ಸಂಖ್ಯೆ 25 ಕೆ ಹೋಗಿ ನೋಡಲಾಗಿ ನ್ಯಾಯಬೆಲೆ ಅಂಗಡಿಯಲ್ಲಿ, 99 ಕ್ವಿಂಟಾಲ್ ಪಡಿತರ ಅಕ್ಕಿ ಪಕ್ಕದ ಹೆಂಚಿನ ಮನೆಯಲ್ಲಿ 9 ಕ್ವಿಂಟಾಲ್ ಅಕ್ಕಿ ಇರುವುದು ಕಂಡುಬಂದಿದೆ.

 ನ್ಯಾಯಬೆಲೆ ಅಂಗಡಿಯಲಿ, 15 ಕಿಂಟಾಲ್ 84 ಕೆ.ಜಿ ಪಡಿತರ ರಾಗಿ ಹಾಗೂ ಪಕ್ಕದ ಹೆಂಚಿನ ಮನೆಯಲ್ಲಿ 71 ಕ್ವಿಂಟಾಲ್ ರಾಗಿ ಇರುವುದು ಕಂಡು ಬಂದಿತು, ಒಟ್ಟು 108 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 86 ಕ್ವಿಂಟಾಲ್ ಪಡಿತರ ರಾಗಿ ಇರುತ್ತದೆ.

ಬಿಪಿಎಲ್‌ ಕಾರ್ಡ್‌ ಬಳಕೆದಾರರ ಗಮನಕ್ಕೆ: ಅನ​ಧಿ​ಕೃತ ಪಡಿತರ ಚೀಟಿ ರದ್ದು..!

ದಿನಾಂಕ 01-08-2022 ರ ಸದರಿ ಪ್ರಕಾರ ಅಂಗಡಿಯಲಿ 10 ಕ್ವಿಂಟಾಲ್ ಪಡಿತರ ಅಕ್ಕಿ, ಮತ್ತು 6 ಕ್ವಿಂಟಾಲ್ 87 ಕೆಜಿ ಪಡಿತರ ರಾಗಿ ದಾಸ್ತಾನು ಇರಬೇಕಾಗಿದ್ದು, ಆದರೆ ಒಟ್ಟು 98 ಕಿಂಟಾಲ್ ಅಕ್ಕಿ ಹಾಗೂ 80 ಕ್ವಿಂಟಾಲ್ ಪಡಿತರ ರಾಗಿ ಹೆಚ್ಚುವರಿಯಾಗಿ ದಾಸ್ತಾನು ಇರುವುದು ಕಂಡು ಬಂದಿದೆ. ಹೆಚ್ಚುವರಿ 178 ಕ್ವಿಂಟಾಲ್ ಪಡಿತರ ಅಕ್ಕಿ ಹಾಗು ರಾಗಿ ದಾಸ್ತಾನನ್ನು ಕಾಳಸಂತೆಯಲಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಡಲಾಗಿತ್ತು.

One Nation One Ration Card ಯೋಜನೆಯಿಂದ ಅಂಗಡಿಗಳಿಗೆ ತಲೆಬಿಸಿ!

ಈ ದಾಸ್ತಾನು ಅಕ್ರಮ ಎಂದು ಪರಿಗಣಿಸಿ ಸದರಿ ಅಂಜನೇಯ ಬಳಕೆದಾರರ ಸಹಕಾರ ಸಂಘದ ಅಂಗಡಿ ಸಂಖ್ಯೆ 25 ರ ಕಾರ್ಯದರ್ಶಿ ಧರ್ಮರೆಡ್ಡಿ ಬಿನ್ ಅಡಿವಪ್ಪ ಈತನ ವಿರುದು ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಆಹಾರ ಇಲಾಖೆ ನಿರೀಕ್ಷಕರು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.