ಬಿಪಿಎಲ್‌ ಕಾರ್ಡ್‌ ಬಳಕೆದಾರರ ಗಮನಕ್ಕೆ: ಅನ​ಧಿ​ಕೃತ ಪಡಿತರ ಚೀಟಿ ರದ್ದು..!

ಬಡ​ವರ ಅನ್ನಕ್ಕೆ ಕನ್ನ ಹಾಕು​ತ್ತಿದ್ದ ಶ್ರೀಮಂತರು ಮತ್ತು ಸರ್ಕಾರಿ ನೌಕ​ರರ ವಿರುದ್ಧ ಮುಂದು​ವ​ರೆ​ದ ಕಾರ್ಯಾ​ಚ​ರಣೆ

Cancellation of Unauthorized BPL Card in Ramanagara grg

ಎಂ.​ಅಫ್ರೋಜ್‌ ಖಾನ್‌

ರಾಮ​ನ​ಗರ(ಜು.28):  ಬಡ​ವರ ಅನ್ನಕ್ಕೆ ಕನ್ನ ಹಾಕು​ತ್ತಿದ್ದ ಶ್ರೀಮಂತರು ಮತ್ತು ಸರ್ಕಾರಿ ನೌಕ​ರರ ವಿರುದ್ಧ ಕಾರ್ಯಾ​ಚ​ರಣೆ ಮುಂದು​ವ​ರೆ​ಸಿ​ರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು 2019-20ರಿಂದ ಈವರೆಗೆ ಬರೋಬ್ಬರಿ 11.11 ಲಕ್ಷ ರು.ದಂಡ ವಸೂಲಿ ಮಾಡಿದ್ದಾರೆ. ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಅನುಕೂಲವಾಗಲಿ ಎಂದು ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಸೌಲಭ್ಯ ನೀಡಲಾಗಿದೆ. ಆದರೆ, ಬಡವರ ಹೆಸ​ರಿ​ನಲ್ಲಿ ಶ್ರೀ​ಮಂತರು ಮತ್ತು ಸರ್ಕಾರಿ ನೌಕ​ರರು ಅನ​ಧಿ​ಕೃ​ತ​ ಪಡಿ​ತರ ಚೀಟಿ ಹೊಂದಿ​ದ್ದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಬಡ​ವರ ಹೆಸ​ರಿ​ನಲ್ಲಿ ಅನ​ಧಿ​ಕೃ​ತ​ ಪಡಿ​ತರ ಚೀಟಿ ಹೊಂದಿದ್ದ ಶ್ರೀಮಂತರು ಮತ್ತು ಸರ್ಕಾರಿ ನೌಕ​ರರಿಂದ 2019-20ರಲ್ಲಿ 4,99,290 ರು., 2020-21ರಲ್ಲಿ 1,25,459 ರು. ಹಾಗೂ 2021-22ರಲ್ಲಿ 4,86,443 ರು. ಸೇರಿ 11.11 ಲಕ್ಷ ದಂಡ ವಸೂಲಿ ಮಾಡಿ​ದ್ದರೆ, ಒಟ್ಟು 6986 ಅನ​ಧಿ​ಕೃತ ಪಡಿ​ತರ ಚೀಟಿ​ ರದ್ದುಪಡಿ​ಸಿ​ದ್ದಾ​ರೆ.

ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ 5 ಲಕ್ಷವರೆಗೆ ಉಚಿತ ಚಿಕಿತ್ಸೆ

ರಾಜ್ಯ ಸರ್ಕಾರ ದಂಡ ಪ್ರಯೋ​ಗದ ಎಚ್ಚ​ರಿಕೆ ನೀಡಿದ ಹಿನ್ನೆಲೆ, ಕೆಲವರು ಪಡಿತರ ಚೀಟಿಗಳನ್ನು ಇಲಾಖೆಗೆ ವಾಪಸ್‌ ಮಾಡಿದ್ದಾರೆ. ಅವರಲ್ಲಿ ಕೆಲವರಿಗೆ ಎಪಿಎಲ್‌ ಕಾರ್ಡ್‌ಗೆ ಪರಿವರ್ತಿಸಿಕೊಡಲಾಗಿದೆ. ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಕಾರ್ಯಾಚರಣೆಗೆ ಆದ್ಯತೆ ಕೊಟ್ಟಿರಲಿಲ್ಲ. ಬಳಿಕ ತೀವ್ರಗೊಳಿಸಲಾಗಿದೆ.

ಅನ​ಧಿ​ಕೃತ ಕಾರ್ಡ್‌ ರದ್ದುಪಡಿಸುವ ಜೊತೆಗೆ ಅವರು ಈವರೆಗೆ ಪಡೆದಿರುವ ಆಹಾರ ಧಾನ್ಯದ ಮೌಲ್ಯವನ್ನು ಆಧರಿಸಿ ದಂಡ ವಿಧಿಸಲಾಗುತ್ತಿದೆ. ದಂಡ ಪಾವತಿಸಬೇಕಾದವರೂ ನೂರಾರು ಸಂಖ್ಯೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವರು ಅನರ್ಹರಿದ್ದರೂ ಅನ​ಧಿ​ಕೃ​ತ​ ಬಿಪಿಎಲ್‌ ಚೀಟಿ ಪಡೆದು, ಅದರ ಸವಲತ್ತು ಉಪಯೋಗಿಸುತ್ತಿರುವುದು ಕಂಡು ಬಂದಿದೆ. ಇದ​ರಲ್ಲಿ ಶಿಕ್ಷಕರು, ಬೆಸ್ಕಾಂ ಸೇರಿ​ದಂತೆ ಸರ್ಕಾರದ ವಿವಿಧ ಇಲಾಖೆಗಳ ನೌಕರರು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಗುರುತಿಸಲಾಗಿದೆ. 553 ಸರ್ಕಾರಿ ನೌಕ​ರರು ಅನ​ಧಿ​ಕೃ​ತ​ವಾಗಿ ಬಿಪಿ​ಎಲ್‌ ಚೀಟಿ ಹೊಂದಿ​ರು​ವು​ದನ್ನು ಪತ್ತೆ ಮಾಡ​ಲಾ​ಗಿ​ದೆ.

ಈವರೆಗೆ ಅನರ್ಹರಿಗೆ ಗರಿಷ್ಠ 45ಸಾವಿರದಿಂದ 50ಸಾವಿರದವರೆಗೆ ದಂಡ ವಿಧಿಸಿದ ಉದಾಹರಣೆಯೂ ಇದೆ. ಅಷ್ಟುಪ್ರಮಾಣದ ಅಕ್ಕಿಯನ್ನು ಪಡೆ​ದಿ​ರು​ವು​ದನ್ನು ಇಲಾ​ಖೆ​ಯ​ವರು ಪತ್ತೆ ಹಚ್ಚಿ​ದ್ದರು. ಅನರ್ಹರು ಯಾವಾಗಿನಿಂದ ಎಷ್ಟುಪ್ರಮಾಣದಲ್ಲಿ ಅಕ್ಕಿ ಅಥವಾ ಆಹಾರ ಧಾನ್ಯ ಪಡೆದಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಿ, ಪ್ರಸಕ್ತ ಮಾರುಕಟ್ಟೆದರದಂತೆ (ಅಕ್ಕಿಗಾದರೆ ಕೆ.ಜಿ.ಗೆ 23ರಂತೆ) ದಂಡ ವಿಧಿಸಲಾಗುತ್ತಿದೆ. ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ.
ಸರ್ಕಾರಿ ನೌಕರರಲ್ಲಿ ಅನ​ಧಿ​ಕೃತ ಚೀಟಿ ಸಿಕ್ಕವರಲ್ಲಿ ಕೆಲವರು, ಸ್ವಯಂಪ್ರೇರಣೆಯಿಂದ ವಾಪಸ್‌ ಮಾಡಿದ್ದಿದೆ. ಎಚ್‌ಆರ್‌ಎಂಎಸ್‌ (ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ) ಜಾರಿಯಾದ ಮೇಲೆ ಸರ್ಕಾರಿ ನೌಕರರ ಮಾಹಿತಿ ಸುಲಭವಾಗಿ ಸಿಗುತ್ತಿದೆ. ಇದು, ಕಾರ್ಯಾಚರಣೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಇಲಾಖೆ ಅಧಿ​ಕಾ​ರಿ​ಗ​ಳು.

2 ಲಕ್ಷ 97 ಸಾವಿರ ಆದ್ಯತಾ ಚೀಟಿ​ಗಳು

ಜಿಲ್ಲೆಯಲ್ಲಿ 561 ನ್ಯಾಯಬೆಲೆ ಅಂಗಡಿಗಳಿವೆ. 2,97,026 ಆದ್ಯತಾ (ಬಿಪಿಎಲ್‌- 2,77,923, ಅಂತ್ಯೋದಯ ಯೋಜನೆ-19,103) ಚೀಟಿಗಳಿವೆ. 16,691 ಎಪಿಎಲ್‌ ಚೀಟಿಗಳಿವೆ. ಹೊಸದಾಗಿ ಪಡಿತರ ಚೀಟಿ ಕೋರಿ 5727 ಅರ್ಜಿ​ಗಳು ಸಲ್ಲಿಕೆಯಾಗಿದ್ದು, ಆಹಾರ ನಿರೀ​ಕ್ಷ​ಕರು 3734 ಅರ್ಜಿ​ಗ​ಳಿಗೆ ಅನು​ಮೋ​ದನೆ ನೀಡಿ​ದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯುವುದಕ್ಕಾಗಿ ಬಿಪಿಎಲ್‌ ಪಡಿತರ ಚೀಟಿಯನ್ನು ಮಾನದಂಡವನ್ನಾಗಿ ಮಾಡಿದ್ದರಿಂದ, ಚೀಟಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Government Benefits : ರೇಷನ್ ಕಾರ್ಡ್ ಪಡೆಯೋ ಮೊದಲು ಅದರ ವಿಧ ತಿಳ್ಕೊಳ್ಳಿ

ಬಡತನ ರೇಖೆಗಿಂತ ಕೆಳಗಡೆ ಇರುವವರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ ಸೌಲಭ್ಯ ಪಡೆದುಕೊಳ್ಳುವ ಅರ್ಹತೆ ಇದೆ. ಆದರೆ, ಈ ಅರ್ಹತೆ ಇಲ್ಲದವರೂ ಅನಧಿಕೃತವಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವುದು ಗುಟ್ಟೇನಲ್ಲ. ಅದರಲ್ಲೂ ಸರ್ಕಾರಿ ನೌಕರರು ಕೂಡಾ ಅನಧಿಕೃತವಾಗಿ ಬಿಪಿಎಲ್‌ ಕಾರ್ಡ್‌ ಹೊಂದುವ ಮೂಲಕ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದಿರುವುದನ್ನು ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬಿಪಿಎಲ್‌ ಕಾರ್ಡ್‌ನ್ನು ಕುಟುಂಬ ಯಾವಾಗ ಪಡೆದಿದೆ ಎಂಬುದರ ಜತೆಗೆ ಸ​ರ್ಕಾ​ರದ ಸವಲತ್ತು ಉಪಯೋಗಿಸಿದನ್ವಯ ದಂಡ ವಿಧಿಸಲಾಗುತ್ತದೆ.

ಶ್ರೀಮಂತರು ಸುಳ್ಳು ಮಾಹಿತಿ ಕೊಟ್ಟು ಬಿಪಿಎಲ್‌ ಪಡಿತರ ಚೀಟಿ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅಂಥವರು ಕೂಡಲೇ ಚೀಟಿಗಳನ್ನು ಮರಳಿಸಬೇಕು. ಅನ​ಧಿ​ಕೃತ ಪಡಿ​ತರ ಚೀಟಿ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತಿದೆ. ಸರ್ಕಾರದ ಸೌಲಭ್ಯ ದುರ್ಬಳಕೆ ಸರಿಯಲ್ಲ ಎಂದು ತಿಳಿಸಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚಿನ ಜಮೀನು ಹೊಂದಿರುವವರು, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ ಅಂತ ರಾಮ​ನ​ಗರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ​ನಿ​ರ್ದೇ​ಶ​ಕಿ ಸೌಮ್ಯ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios