ಬಿಡಿಎಯಲ್ಲಿ ನಿವೃತ್ತ ಅಧಿಕಾರಿಗಳು ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡ್ತಿದ್ದಾರೆ. ಇದೇನು ಕಾನೂನು‌ಬಾಹಿರವಲ್ಲ. ಅದ್ರೇ ಅನುಭವದ ಕಾರಣಕ್ಕೋ, ಅಧಿಕಾರಿಗಳ ಅಭಾವಕ್ಕೋ ನಿವೃತ್ತರಾದ ನಂತರ ಗುತ್ತಿಗೆ, ಹೊರಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತಾರೆ. ಅದ್ರೇ ಈಗ ಈ ವಿಚಾರಕ್ಕೆ ಅಪಸ್ವರ ಕೇಳಿ ಬಂದಿದೆ. 

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಡಿ.06): ಬಿಡಿಎ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗ್ತಿದ್ಯಾ..!? ಬಿಡಿಎಯಲ್ಲಿ ಯಾವುದೇ ಕೆಲಸ ಆಗ್ಬೇಕು ಅಂದ್ರೇ ತುಂಬಾ ಟೈಂ ಬೇಕಾಗುತ್ತೆ. ಯಾವುದೂ ಸುಲಭಕ್ಕೆ ಆಗಲ್ಲ ಅನ್ನೊ‌ತರ ಆಗಿದೆ. ಇದರ ಜೊತೆಗೆ ಬಿಡಿಎ ಬಗ್ಗೆ ಈಗ ಮತ್ತೊಂದು ಅಪಸ್ವರ ಕೇಳಿ ಬಂದಿದೆ‌. 

ಹೌದು, ಬಿಡಿಎಯಲ್ಲಿ ನಿವೃತ್ತ ಅಧಿಕಾರಿಗಳು ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡ್ತಿದ್ದಾರೆ. ಇದೇನು ಕಾನೂನು‌ಬಾಹಿರವಲ್ಲ. ಅದ್ರೇ ಅನುಭವದ ಕಾರಣಕ್ಕೋ, ಅಧಿಕಾರಿಗಳ ಅಭಾವಕ್ಕೋ ನಿವೃತ್ತರಾದ ನಂತರ ಗುತ್ತಿಗೆ, ಹೊರಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತಾರೆ. ಅದ್ರೇ ಈಗ ಈ ವಿಚಾರಕ್ಕೆ ಅಪಸ್ವರ ಕೇಳಿ ಬಂದಿದೆ. ಆರು ತಿಂಗಳೋ ವರ್ಷವೋ ಅದ್ರೇ ಓಕೆ ಅದ್ರೇ ನಾಲ್ಕೈದು ವರ್ಷಗಳಾದ್ರೂ ನಿವೃತ್ತ ಅಧಿಕಾರಿಗಳು,ಸಿಬ್ಬಂದಿಗಳು ತಾವು ನಿವೃತ್ತಿಗೆ ಮೊದಲು‌ ಮಾಡುತ್ತಿದ್ದ ಕೆಲಸವನ್ನ ನಂತರವೂ ಮಾಡ್ತಿದ್ದಾರೆ. ಇವರು ತಮ್ಮ‌ಅನುಭವ ಬಳಸಿಕೊಂಡು ನಿಧಾನಗತಿ ಕೆಲಸಗಳಿಗೆ ಕಾರಣರಾಗುತ್ತಿದ್ದಾರಂತೆ.

ಬೆಂಗಳೂರು: ದೀಪಾವಳಿ ಹಬ್ಬದ ಬಳಿಕ ರೈತರಿಗೆ ಕಾರಂತ ಲೇಔಟ್‌ ಸೈಟ್‌..!

ಬಿಡಿನಲ್ಲಿ ನಿವೃತ್ತಿ ಪಡೆದು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು
ವಿ.ಮಂಜುನಾಥ್, ನಿವೃತ್ತ ಮೇಲ್ವಿಚಾರಕರು- ಸಧ್ಯ ಟಪಾಲ್ ವಿಭಾಗದಲ್ಲಿ ಅಭಿಯಂತರ ಸದಸ್ಯರಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ
ಸಂಪತ್ ಕುಮಾರ್- ನಿವೃತ್ತ ಮೇಲ್ವಿಚಾರಕರು- ಸಧ್ಯ ಬಿಡಿಎ ಅಧ್ಯಕ್ಷರ ಆಪ್ತ ಶಾಖೆಯಲ್ಲಿ ಗುತ್ತಿಗೆ ಕೆಲಸ
ಸುಬ್ಬರಾವ್- ನಿವೃತ್ತ ಮೇಲ್ವಿಚಾರಕರು- ಆಯುಕ್ತರ ಆಪ್ತ ಶಾಖೆ- ಗುತ್ತಿಗೆ
ಹೊಸಳಯ್ಯ- ನಿವೃತ್ತ ಕಂದಾಯ ನಿರೀಕ್ಷಕರು- ಸಧ್ಯ ಪಿ.ಆರ್.ಆರ್-ಹೊರಗುತ್ತಿಗೆ
ಚಿಕ್ಕೇಗೌಡ- ನಿವೃತ್ತ ಅಧಿಕಾರಿ- ಸಧ್ಯ ಪಿ.ಆರ್
ಆರ್ -ಹೊರಗುತ್ತಿಗೆ
ಶ್ರೀನಿವಾಸ್-ನಿವೃತ್ತ ಶಿಫ್ರ ಲಿಪಿಗಾರ/ ಸಧ್ಯ ನಗರ ಯೋಜನಾ ಸದಸ್ಯ/ ಹೊರಗುತ್ತಿಗೆ
ಪ್ರಕಾಶ್ ಡಿ.ಎನ್- ನಿವೃತ್ತ ಗ್ರೂಪ್ ಡಿ/ ವಾಹನ ಚಾಕಲ - ಹೊರಗುತ್ತಿಗೆ
ವೆಂಕಟಯ್ಯ/ ನಿವೃತ್ತ ಗ್ರೂಪ್ ಡಿ/ ಸಧ್ಯ ಮಾನ್ಯ ಆಯುಕ್ತರ ಆಪ್ತ ಶಾಖೆ- ಗುತ್ತಿಗೆ
ಲಿಂಗಯ್ಯ/ ನಿವೃತ್ತ ಡಿ ಗ್ರೂಪ್/ ಸಧ್ಯ ಕಾರ್ಯದರ್ಶಿಯವರ ಅಪ್ತ ಶಾಖೆ/ ಗುತ್ತಿಗೆ
ಶಿವಲಿಂಗಯ್ಯ/ ನಿವೃತ್ತ ಗ್ರೂಪ್ ಡಿ/ ಸಧ್ಯ ಕಾರ್ಯದರ್ಶಿಯವರ ಅಪ್ತ ಶಾಖೆ/ ಗುತ್ತಿಗೆ
ನಾರಾಯಣ ಸ್ವಾಮಿ/ ನಿವೃತ್ತ ಗ್ರೂಪ್ ಡಿ/ ಸಧ್ಯ ಆರ್ಥಿಕ ಸದಸ್ಯ/ ಗುತ್ತಿಗೆ

ಬಿಡಿಎ ಯಡವಟ್ಟಿಗೆ ಸೈಟ್ ಮಾಲೀಕ ಕಂಗಾಲು: ಸೈಟ್ ಮಾರಲಾಗದೆ, ಮನೆ ಕಟ್ಟಲಾಗದೆ ಪರದಾಟ !

ಇನ್ನು ಪ್ರತಿ ಫೈಲ್ ನಲ್ಲೂ ನಿವೃತ್ತ ನೌಕರರ ಕೈಚಳಕ ಆರೋಪ ಸಹ ಕೇಳಿಬಂದಿದೆ. ಇಲ್ಲಿ ಹೊಸಬರಿಗೆ‌ ಕೆಲಸ ಮಾಡಲು ಇವರು ಬಿಡುತ್ತಿಲ್ಲ ಅನ್ನೋ ಆರೋಪ ಇದೆ. ಬಿಡಿಎ ಅಂದ್ರೆ ಭ್ರಷ್ಟ ಅಧಿಕಾರಿಗಳ ತಾಣ ಎನ್ನುವಂತಾಗಿದೆ ಅಂತ ಸಾಮಾಜಕ ಕಾರ್ಯಕರ್ತ ತಾಯ್ನಾಡು ರಾಘವೇಂದ್ರ ಆರೋಪ ಮಾಡಿದ್ದಾರೆ. ಇವರ ರಕ್ಷಣೆ ಮಾಡ್ತಿರೋರು ಯಾರು. ಒಂದೇ ಸ್ಥಳದಲ್ಲೇ ವರ್ಷಗಟ್ಟಲೆ ಕೆಲಸ ಮಾಡಿ ನಿವೃತ್ತಿಯಾದ್ರು ಸಿಬ್ಬಂದಿಗಳು ವರ್ಷಾನುಗಟ್ಟಲೇ ಹೇಗೆ ಇರಲು ಸಾಧ್ಯ. ಇಲ್ಲಿ ಹೊಸಬರಿಗೆ‌ ಕೆಲಸ ಮಾಡಲು ಇವರು ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ.

ಆಲ್ಲದೆ ಬಿಡಿಎ ಅಂದ್ರೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಇಲ್ಲಿ ಸಿಬ್ಬಂದಿ, ಅಧಿಕಾರಿಗಳ ಅಭಾವ ಆಗದೇ, ನಿವೃತ್ತರಾದವರಿಗೆ ಮತ್ತೆ ಅದೇ ಜಾಗದಲ್ಲಿ ವರ್ಷಾನುಗಟ್ಟಲೇ ಕೂರಿಸದೇ ಹೊಸಬರು ಬಂದು ಅಂಟಿರುವ ಆರೋಪಗಳು ಕ್ಲೀನ್ ಆಗಲಿ ಅನ್ನೋದು ಏಷ್ಯಾನೆಟ್ ಸುವರ್ಣ ನ್ಯೂಸ್ ಆಶಯ