ಕೊರೋನಾಗೆ ಶಿವಮೊಗ್ಗ ನಗರದಲ್ಲಿ ವೃದ್ದ ಬಲಿ..!
ಬೆಂಗಳೂರಿನಿಂದ ಹಿಂದಿರುಗಿದ್ದ ಶಿವಮೊಗ್ಗ ನಗರದ ರವಿವರ್ಮ ಬೀದಿ ನಿವಾಸಿ 60 ವರ್ಷದ ವೃದ್ಧನಿಗೆ ಸೋಂಕು ಕಂಡುಬಂದಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಜು.4 ರಂದು ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.09): ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಬುಧವಾರ ಮತ್ತೊಬ್ಬರು ಬಲಿಯಾಗಿದ್ದಾರೆ ಎಂಬ ಸುದ್ದಿ ದಟ್ಟವಾಗಿದ್ದು, ಜಿಲ್ಲಾಡಳಿತ ಇದುವರೆಗೆ ಇದನ್ನು ದೃಢಪಡಿಸಿಲ್ಲ. ಆದರೆ ಮೃತ ದೇಹವೊಂದರ ದಹನಕ್ಕೆ ರೋಟರಿ ಚಿತಾಗಾರವನ್ನು ಪಾಲಿಕೆ ವತಿಯಿಂದ ನ್ಯಾನಿಟೈಸ್ ಮಾಡಿ ಸಿದ್ಧಗೊಳಿಸುವ ವೇಳೆ ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ಹಿಂದಿರುಗಿದ್ದ ನಗರದ ರವಿವರ್ಮ ಬೀದಿ ನಿವಾಸಿ 60 ವರ್ಷದ ವೃದ್ಧನಿಗೆ ಸೋಂಕು ಕಂಡುಬಂದಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಜು.4 ರಂದು ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬೆನ್ನಲ್ಲೇ ಇಲ್ಲಿನ ರಾಜೀವ್‌ಗಾಂಧಿ ಬಡಾವಣೆ ಪಕ್ಕದಲ್ಲಿರುವ ರೋಟರಿ ಚಿತಾಗಾರದಲ್ಲಿ ಮೃತಪಟ್ಟವ್ಯಕ್ಯಿಯ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಕೈಗೊಳ್ಳುತ್ತಿದ್ದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
Breaking: ಮತ್ತೋರ್ವ ಶಾಸಕನಿಗೆ ಕೊರೋನಾ: ಬೆಚ್ಚಿಬಿದ್ದ ಕರ್ನಾಟಕದ ರಾಜಕೀಯ ನಾಯಕರು
ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಲು ಮುಂದಾದಾಗ ಚಿತಾಗಾರದಲ್ಲಿ ಕರೋನಾ ಸೋಂಕಿತರ ಶವ ಸುಡುವುದು ಬೇಡ ಎಂದು ಸ್ಥಳೀಯರು ಕೆಲ ಸಮಯ ಅಡ್ಡಿ ಪಡಿಸಿದರು. ಬಳಿಕ ಸ್ಥಳೀಯರ ಮನವೊಲಿಸಿ ವೃದ್ಧನ ಅಂತ್ಯಸಂಸ್ಕಾರ ಮಾಡಲಾಯಿತು.
ಮಾರ್ಕೆಟ್ ಬಂದ್:
ಜಿಲ್ಲೆಯಲ್ಲಿ ಕೊರೋನಾ ವೇಗವಾಗಿ ಹರಡುತ್ತಿರುವುದರಿಂದ ನಗರದ ಗಾಂಧಿ ಬಜಾರ್‌ನ ಬಟ್ಟೆಮಾರ್ಕೆಟ್ ಜವಳಿ ವರ್ತಕರ ಸಂಘವು ಒಂದು ವಾರಗಳ ಕಾಲ ಸಂಪೂರ್ಣ ಮಾರ್ಕೆಟ್ ಬಂದ್ ಮಾಡಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಿನದಲ್ಲಿ 50 ಕ್ಕೂ ಅಧಿಕ ಕೊರೋನ ಪ್ರಕರಣ ಕಂಡು ಬಂದಿವೆ. ಅಲ್ಲದೆ ಗಾಂಧಿ ಬಜಾರ್, ಸಿನಿಮಾ ರಸ್ತೆಯ ಬಟ್ಟೆಮಾರ್ಕೆಟ್ ಪಕ್ಕದ ಅಶೋಕ ರಸ್ತೆ, ಉಪ್ಪಾರಕೇರಿ, ಮಂಜುನಾಥ್ ಟಾಕೀಸ್ ಪಕ್ಕದ ಏರಿಯಾಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಗಾಂಧಿ ಬಜಾರ್‌ನ ಬಟ್ಟೆಮಾರ್ಕೆಟ್ ಜವಳಿ ವರ್ತಕರ ಸಂಘ ಒಂದು ವಾರಗಳ ಕಾಲ ಸಂಪೂರ್ಣ ಮಾರ್ಕೆಟ್ ಬಂದ್ ಮಾಡಲು ನಿರ್ಧರಿಸಿದೆ. ಇಲ್ಲಿ 200ಕ್ಕೂ ಅಧಿಕ ಬಟ್ಟೆಮಳಿಗೆಗಳಿವೆ. ಪ್ರತಿನಿತ್ಯ ಸಾವಿರಾರು ಜನರು ವ್ಯಾಪಾರ ವಹಿವಾಟಿಗೆಂದು ಇಲ್ಲಿಗೆ ಬರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಬಟ್ಟೆಮಾರ್ಕೆಟ್ ಬಂದ್ ಮಾಡಲು ನಿರ್ಧರಿಸಿದ್ದಾರೆ.