Asianet Suvarna News Asianet Suvarna News

ಕುಷ್ಟಗಿ: ಬದುಕಿಗೆ ಖಾತ್ರಿ ನೀಡಿದ ನರೇಗಾಕ್ಕೆ 17..!

ಗ್ರಾಮೀಣ ಭಾಗದ ಕೂಲಿಕಾರರು ಕೂಲಿ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿಯೇ 1 ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸಿ ಕೂಲಿ(ಪ್ರತಿದಿನಕ್ಕೆ 309ರಂತೆ) ಹಣ ಪಾವತಿಸುವುದು ನರೇಗಾ ಯೋಜನೆಯ ಉದ್ದೇಶ. ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ನೋಂದಣಿಯಾದರೆ ಅವರಿಗೂ 100 ದಿನಗಳ ಉದ್ಯೋಗ ನೀಡಲಾಗುತ್ತದೆ.

NREGA Completed 17 Years at Kushtagi in Koppal grg
Author
First Published Feb 3, 2023, 3:30 AM IST

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ(ಫೆ.03): ಗ್ರಾಮೀಣ ಜನರ ಉದ್ಯೋಗದಾತ ಯೋಜನೆಯಾಗಿರುವ ನರೇಗಾ ಜಾರಿಯಾಗಿ ಬರೋಬ್ಬರಿ 17 ವಸಂತಗಳನ್ನು ಪೂರೈಸಿದ್ದು, ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಯೋಜನೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ಭಾಗದ ಕೂಲಿಕಾರರು ಕೂಲಿ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿಯೇ 1 ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸಿ ಕೂಲಿ(ಪ್ರತಿದಿನಕ್ಕೆ 309ರಂತೆ) ಹಣ ಪಾವತಿಸುವುದು ನರೇಗಾ ಯೋಜನೆಯ ಉದ್ದೇಶ. ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ನೋಂದಣಿಯಾದರೆ ಅವರಿಗೂ 100 ದಿನಗಳ ಉದ್ಯೋಗ ನೀಡಲಾಗುತ್ತದೆ.

2005ರ ಫೆ. 2ರಂದು ನರೇಗಾ ಜಾರಿಗೆ ತರಲಾಯಿತು. ಆರಂಭದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಹೆಸರಿಸಲಾಯಿತು. 2009ರ ಅ. 2ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಬದಲಾಯಿಸಲಾಯಿತು.

ಬಾಗಿಲ ಬಳಿ ನಿಲ್ಲಬೇಡ ಅಂದಿದ್ದಕ್ಕೆ ಕಂಡಕ್ಟರ್‌, ಡ್ರೈವರ್‌ಗೆ ಥಳಿಸಿದ ಕಿಡಿಗೇಡಿಗಳು

ತಾಲೂಕಿನಾದ್ಯಂತ 86,806 ಖಾತ್ರಿಯ ಯೋಜನೆಯ ಕೂಲಿಕಾರರು ಇದ್ದಾರೆ. ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ 25- 30 ಜನ ಕೂಲಿಕಾರರಿಗೆ ಒಬ್ಬ ಕಾಯಕ ಬಂಧು ನೇಮಕ ಮಾಡಲಾಗುತ್ತದೆ. ತಾಲೂಕಿನಲ್ಲಿ 2711 ಕಾಯಕ ಬಂಧುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 1493 ಪುರುಷರು, 1218 ಮಹಿಳಾ ಕಾಯಕ ಬಂಧುಗಳು ಇದ್ದಾರೆ.

ಬಿಜಕಲ್‌ ಗ್ರಾಪಂನ ಕವಲಬೋದೂರು ತಾಂಡಾದಲ್ಲಿ ಐವರು ಮಂಗಳಮುಖಿಯರಿಗೆ ನರೇಗಾ ಯೋಜನೆಯಡಿ ಜಾಬ್‌ ಕಾರ್ಡ್‌ಗಳನ್ನು ವಿತರಿಸಿ ಕೆಲಸ ನೀಡಲಾಗಿದೆ ಹಾಗೂ ಅಂಗವಿಕಲರಿಂದ ಇಲ್ಲಿಯವರೆಗೆ 22934 ಮಾನವ ದಿನಗಳನ್ನು ಸೃಜಿಸಲಾಗಿದೆ.

ಆರೋಗ್ಯದ ಕಾಳಜಿಗಾಗಿ ಕಾಮಗಾರಿಯ ಸ್ಥಳದಲ್ಲಿ ತಪಾಸಣಾ ಶಿಬಿರ ಏರ್ಪಡಿಸಲಾಗುತ್ತಿದೆ. 195 ತಪಾಸಣಾ ಶಿಬಿರ ಏರ್ಪಡಿಸಿದ್ದು, 21432 ಕೂಲಿಕಾರರು ಪ್ರಯೋಜನ ಪಡೆದಿದ್ದಾರೆ. ದುಡಿಯೋಣ ಅಭಿಯಾನ, ಮನೆ ಮನೆಗೆ ಉದ್ಯೋಗ ಖಾತ್ರಿ, ರೋಜಗಾರ್‌ ದಿವಸ್‌, ರೈತ ಜಲ ಸಂಜೀವಿನಿ, ವಿಷಯಾಧಾರಿತ ತರಬೇತಿಗಳನ್ನು ಜರುಗಿಸಲು ತಂಡದ ಮೂಲಕ ಗ್ರಾಪಂನಲ್ಲಿ ಜಾಗೃತಿ ಮೂಡಿಸಲಾಗಿದೆ. ನರೇಗಾದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾಂಪೌಂಡ್‌, ಶೌಚಾಲಯ, ಅಡುಗೆ ಕೋಣೆ, ಕ್ರೀಡಾಂಗಣ, ಪೌಷ್ಟಿಕ ತೋಟ, ಮಳೆನೀರು ಕೊಯ್ಲು ಸೇರಿದಂತೆ ವಿವಿಧ ಒಟ್ಟು 154 ಕಾಮಗಾರಿ ಅನುಷ್ಠಾನ ಮಾಡಲಾಗಿದೆ.

ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್‌ ಸವಾಲ್: ಸೋಮಶೇಖರ್‌ರೆಡ್ಡಿ ವಿರುದ್ಧ ಜನಾರ್ಧನರೆಡ್ಡಿ ಪತ್ನಿ ಸ್ಪರ್ಧೆ

ತಾಲೂಕಿನಾದ್ಯಂತ ನಮೂನೆ- 6ರಲ್ಲಿ ಬೇಡಿಕೆ ಸಲ್ಲಿಸಿದ ಕುಟುಂಬಗಳಿಗೆ ಗ್ರಾಪಂನಿಂದ ಉದ್ಯೋಗ ಒದಗಿಸಲಾಗಿದೆ. ಕಳೆದ ಸಾಲಿನಲ್ಲಿ 22.80 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿತ್ತು. ತಾಂಡಾಗಳಿಗೆ, ಅಂಗವಿಕಲರಿಗೆ, ಮಂಗಳಮುಖಿಯರಿಗೂ ಕೆಲಸ ನೀಡಲು ಕ್ರಮವಹಿಸಿದೆ ಅಂತ ಕುಷ್ಟಗಿ ತಾಪಂ ಇಒ ಶಿವಪ್ಪ ಸುಬೇದಾರ್‌ ತಿಳಿಸಿದ್ದಾರೆ. 

ಬೇಸಿಗೆ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಇಲ್ಲದಿರುವುದರಿಂದ ನಮಗೆ ಕೆಲಸದ ಅವಶ್ಯಕತೆ ಇತ್ತು. ಕೆಲಸದ ಬೇಡಿಕೆಯನ್ನು ಗ್ರಾಪಂಗೆ ಅರ್ಜಿ ಸಲ್ಲಿಸಿ ಕೆರೆ, ನಾಲಾ ಹೂಳೆತ್ತುವ ಕಾಮಗಾರಿ ಮಾಡಿದ್ದೇವೆ. ಸಕಾಲದಲ್ಲಿ ಕೂಲಿ ಹಣ ಪಾವತಿಯಾಗಿದ್ದಕ್ಕೆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ.

Follow Us:
Download App:
  • android
  • ios