Asianet Suvarna News Asianet Suvarna News

ಬೆಂಗ್ಳೂರಿನ ಎಲ್ಲ ಗುಂಡಿ ಮುಚ್ಚಲು ನ.5 ಗಡುವು..!

ರಸ್ತೆ ಗುಂಡಿಗಳನ್ನು ಮುಚ್ಚಲು ಈಗ ನೀಡಿರುವ ಕಾಲಮಿತಿಯ ಒಳಗಾಗಿ ಗುಂಡಿ ಮುಚ್ಚಲು ವಿಫಲರಾದ ಅಧಿಕಾರಿಗಳಿಗೆ ನ.6ರಂದು ನೋಟಿಸ್‌ ಜಾರಿ 

November 5th is the Deadline for Closure of All Road Potholes in Bengaluru grg
Author
First Published Oct 30, 2022, 9:30 AM IST

ಬೆಂಗಳೂರು(ಅ.30):  ನಗರದ ರಸ್ತೆ ಗುಂಡಿಗಳನ್ನು ನ.5ರ ಒಳಗಾಗಿ ಸಂಪೂರ್ಣವಾಗಿ ಮುಚ್ಚುವಂತೆ ಎಂಜಿನಿಯರ್‌ಗಳಿಗೆ ಬಿಬಿಎಂಪಿಯ ಮುಖ್ಯಆಯುಕ್ತ ತುಷಾರ್‌ ಗಿರಿನಾಥ್‌ ಗಡುವು ನೀಡಿದ್ದಾರೆ. ಕಳೆದೊಂದು ವಾರದಿಂದ ಮಳೆ ತಗ್ಗಿದ್ದರೂ ಗುಂಡಿ ಮುಚ್ಚುವಲ್ಲಿ ಪಾಲಿಕೆ ಎಂಜಿನಿಯರ್‌ಗಳು ವಿಫಲವಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವನ್ನು ನೋಡಿದ ಪಾಲಿಕೆ ಮುಖ್ಯ ಆಯುಕ್ತರು ರಸ್ತೆಗಳ ಗುಂಡಿಗಳನ್ನು ಮುಚ್ಚಲು ನ.5ರವರೆಗೆ ಗಡುವು ನೀಡಿ ಕಚೇರಿ ಆದೇಶ ಹೊರಡಿಸಿದ್ದಾರೆ.

ಅ.26ರಂದು ಕಚೇರಿ ಸುತ್ತೋಲೆಯನ್ನು ಹೊರಡಿಸಿದ್ದು, 10 ದಿನಗಳ ಒಳಗಿ ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗದ ಎಲ್ಲ ಹಂತದ ಎಂಜಿನಿಯರ್‌ಗಳಿಗೂ ಸುತ್ತೋಲೆ ತಲುಪಿಸಲು ಗಡುವು ನೀಡಲಾಗಿದೆ. ನಂತರದ ಅವಧಿಯಲ್ಲಿ ಸಮರೋಪಾದಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಪ್ರಧಾನ ಮತ್ತು ಮುಖ್ಯ ಎಂಜಿನಿಯರ್‌ಗಳು ತಮ್ಮ ಅಧೀನದ ಅಧೀಕ್ಷಕ ಅಭಿಯಂತರ, ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಸಹಾಯಕ ಅಭಿಯಂತರ ಅವರಿಗೆ ಸಂಬಂಧಪಟ್ಟಗುರಿಯನ್ನು ನೀಡಿ ಕೆಲಸ ಪೂರ್ಣಕ್ಕೆ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ.

ಕೆಟ್ಟರಸ್ತೆಗೆ ಟಾರ್‌ ಹಾಕೋವರೆಗೂ ಈ ಸಚಿವ ಚಪ್ಪಲಿ ಹಾಕಲ್ಲ!

ಶಿಸ್ತು ಕ್ರಮದ ಎಚ್ಚರಿಕೆ

ರಸ್ತೆ ಗುಂಡಿಗಳನ್ನು ಮುಚ್ಚಲು ಈಗ ನೀಡಿರುವ ಕಾಲಮಿತಿಯ ಒಳಗಾಗಿ ಗುಂಡಿ ಮುಚ್ಚಲು ವಿಫಲರಾದ ಅಧಿಕಾರಿಗಳಿಗೆ ನ.6ರಂದು ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಈ ನೋಟಿಸ್‌ಗೆ ಐದು ದಿನದ ಒಳಗಾಗಿ ಸೂಕ್ತ ಕಾರಣಗಳೊಂದಿಗೆ ಕಾರ್ಯದಲ್ಲಿ ವಿಫಲರಾಗಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಈ ವೇಳೆ ರಸ್ತೆಗುಂಡಿ ಮುಚ್ಚುವಲ್ಲಿ ಯಾವುದೇ ಸಕಾರಣಗಳಿಲ್ಲದೇ ನಿರ್ಲಕ್ಷ್ಯದಿಂದ ವಿಫಲ ಆಗಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ ನಾಗರಿಕ ಸೇವಾ ನಿಯಮಗಳು ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ವಲಯವಾರು ರಸ್ತೆ ಗುಂಡಿ ವಿವರ (ಮೇ 1-ಅ.27): ವಲಯ ಒಟ್ಟು ಗುಂಡಿ ಸಂಖ್ಯೆ ಮುಚ್ಚಿದ ಗುಂಡಿ ಬಾಕಿ ಇರುವ ಗುಂಡಿ

ಪೂರ್ವ 5,776 4,130 1,646
ದಕ್ಷಿಣ 1,915 1,514 401
ಪಶ್ಚಿಮ 4,501 4,079 422
ಬೊಮ್ಮನಹಳ್ಳಿ 1,409 1,090 319
ದಾಸರಹಳ್ಳಿ 1,918 601 1,317
ಮಹದೇವಪುರ 2,004 1,409 595
ಆರ್‌ಆರ್‌ ನಗರ 3,196 2,351 845
ಯಲಹಂಕ 1,015 592 423
ಮುಖ್ಯ ರಸ್ತೆ 3,233 1,556 1,677
ಒಟ್ಟು 24,967 17,322 7,645
 

Follow Us:
Download App:
  • android
  • ios