Asianet Suvarna News Asianet Suvarna News

ಕೆಟ್ಟರಸ್ತೆಗೆ ಟಾರ್‌ ಹಾಕೋವರೆಗೂ ಈ ಸಚಿವ ಚಪ್ಪಲಿ ಹಾಕಲ್ಲ!

ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಯನ್ನು ತಾವೂ ಅನುಭವಿಸಬೇಕೆನ್ನುವ ನಿಟ್ಟಿನಲ್ಲಿ ಸಚಿವರು ಪಾದರಕ್ಷೆ ತ್ಯಾಗ ಮಾಡಿದ್ದಾರೆ. ಸರ್ಕಾರ ಹಣ ಮಂಜೂರು ಮಾಡಿದರೂ ಸ್ಥಳೀಯ ನಗರಪಾಲಿಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ರಸ್ತೆ ಕೆಲಸ ತಡವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

madhya pradesh minister sacrifices footwear walks barefoot on pothole ridden roads in gwalior ash
Author
First Published Oct 23, 2022, 12:32 PM IST

ಗ್ವಾಲಿಯರ್ (ಅಕ್ಟೋಬರ್ 23, 2022) ಬೆಂಗಳೂರಿನ (Bengaluru) ರಸ್ತೆ (Road) ಹದಗೆಟ್ಟಿದ್ದಾಯ್ತು. ರಸ್ತೆ ಗುಂಡಿಗೆ ಜನರು ಬಲಿಯಾಗಿದ್ದೂ ಆಯ್ತು. ಈಗ ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್‌ನದ್ದೂ (Gwalior) ಇದೇ ಸ್ಥಿತಿ. ಗ್ವಾಲಿಯರ್‌ನಲ್ಲಿ ರಸ್ತೆ ಹದಗೆಟ್ಟ ಹಿನ್ನಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರದ ಸಚಿವ ಪ್ರದ್ಯುಮನ್‌ ಸಿಂಗ್‌ ತೋಮರ್‌ (Pradhuman Singh Tomar) ಅವರು ರಸ್ತೆಗಳ ದುರಸ್ತಿಯಾಗುವವರೆಗೂ ಪಾದರಕ್ಷೆ (Footwear) ಧರಿಸದೆ ಬರಿಗಾಲಿನಲ್ಲಿ (Barefoot) ಓಡಾಡುವ ಪ್ರತಿಜ್ಞೆ ಮಾಡಿದ್ದಾರೆ. ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಯನ್ನು ತಾವೂ ಅನುಭವಿಸಬೇಕೆನ್ನುವ ನಿಟ್ಟಿನಲ್ಲಿ ಸಚಿವರು ಪಾದರಕ್ಷೆ ತ್ಯಾಗ ಮಾಡಿದ್ದಾರೆ. ಸರ್ಕಾರ ಹಣ ಮಂಜೂರು ಮಾಡಿದರೂ ಸ್ಥಳೀಯ ನಗರ ಪಾಲಿಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ರಸ್ತೆ ಕೆಲಸ ತಡವಾಗುತ್ತಿದೆ ಎಂದು ಪ್ರದ್ಯುಮನ್‌ ಸಿಂಗ್‌ ತೋಮರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು ತಮ್ಮ ಕ್ಷೇತ್ರ ಗ್ವಾಲಿಯರ್‌ನಲ್ಲಿ ತಮ್ಮ ಸ್ಥಿತಿ ಸುಧಾರಿಸುವವರೆಗೆ ಬರಿಗಾಲಿನಲ್ಲಿರಲು ಮತ್ತು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ (Pothole filled roads) ನಡೆಯಲು ಪ್ರತಿಜ್ಞೆ ಮಾಡಿದ್ದಾರೆ. ಗುರುವಾರ, ಪ್ರದ್ಯುಮನ್ ಸಿಂಗ್ ತೋಮರ್ ಅವರು ತಮ್ಮ ವಿಧಾನಸಭಾ ಕ್ಷೇತ್ರದ ರಸ್ತೆಗಳ ಪರಿಶೀಲನೆಗೆ ಸರ್‌ಪ್ರೈಸ್‌ ಭೇಟಿ ನೀಡಿದರು. ಅವರು ತಮ್ಮ ಪ್ರದೇಶದಲ್ಲಿನ ಹದಗೆಟ್ಟ ರಸ್ತೆಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಸಾರ್ವಜನಿಕರು ಈ ಭಾಗದ ರಸ್ತೆ ಹದಗೆಟ್ಟಿರುವುದರಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡರು.

ಇದನ್ನು ಓದಿ: Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಛೀಮಾರಿ ಹಾಕಿರುವುದಾಗಿ ಸಚಿವರಿಗೆ ತಿಳಿಸಿದರು. ಆದರೂ ರಸ್ತೆಗಳ ನಿರ್ಮಾಣ ದೂರದ ವಿಷಯವಾಗಿದ್ದು, ಗುಂಡಿಯನ್ನು ಕೂಡ ಮುಚ್ಚಿಸಿಲ್ಲ. ಈ ಹಿನ್ನೆಲೆ ಪ್ರದ್ಯುಮನ್ ಸಿಂಗ್ ತೋಮರ್ ಕೈಮುಗಿದು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿ ಪಾದರಕ್ಷೆಗಳನ್ನು ಧರಿಸಲ್ಲ ಎಂಬ ನಿರ್ಣಯ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗ್ಳೂರಿನ ವಿಧಾನಸೌಧದ ಮುಂದೆಯೇ ರಸ್ತೆ ಗುಂಡಿ..!

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮಧ್ಯಪ್ರದೇಶ ಸಚಿವರು, "ನಾನು ಪಾದರಕ್ಷೆಗಳನ್ನು ತ್ಯಾಗ ಮಾಡಿದ್ದೇನೆ, ಇದರಿಂದ ಇತರರು ಬರಿಗಾಲಿನಲ್ಲಿ ನಡೆಯುವಾಗ ಅನುಭವಿಸುವ ನೋವನ್ನು ನಾನು ಸಹ ಅನುಭವಿಸುತ್ತೇನೆ. ಗ್ವಾಲಿಯರ್ ವಿಧಾನಸಭಾ ಕ್ಷೇತ್ರದ ರಸ್ತೆಗಳ ಸ್ಥಿತಿ ಸುಧಾರಿಸದ ಹೊರತು ಚಪ್ಪಲಿ ಮತ್ತು ಶೂಗಳನ್ನು ನಾನು ಧರಿಸುವುದಿಲ್ಲ. ನಾನು ಬರಿಗಾಲಿನಲ್ಲಿಯೇ ಇರುತ್ತೇನೆ. ರಸ್ತೆಗಳ ಕೆಲಸವು ಶೀಘ್ರದಲ್ಲೇ ಮುಗಿಯುತ್ತದೆ ಎಂದು ನಾನು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತೇನೆ’’ ಎಂದೂ ಅವರು ಹೇಳಿದ್ದಾರೆ.

"ಈ ರಸ್ತೆಗಳ ದುರಸ್ತಿ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಲು ಮತ್ತು ಅವುಗಳನ್ನು ಜನರು ನಡೆದಾಡಲು ಸುಲಭವಾಗುವಂತೆ ಮಾಡಲು ನಾನು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ಈ ಬಗ್ಗೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದೂ ಮಧ್ಯ ಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Bengaluru city: ನಗರದಲ್ಲಿ ಈಗ ರಸ್ತೆ ಗುಂಡಿಗಳದ್ದೇ ಕಾರುಬಾರು!

Follow Us:
Download App:
  • android
  • ios