Asianet Suvarna News Asianet Suvarna News

ಸಾಲಮನ್ನಾದಿಂದ ಹುಣುಸೂರಿನಲ್ಲಿ 380 ರೈತರು ವಂಚಿತ

ರಾಜ್ಯ ಸರ್ಕಾರ ಸಾಲ ಮನ್ನಾ ಫಲಾನುಭವಿಗಳ ಅಯ್ಕೆಗೆ 2018ರ ಜು.10 ಅಂತಿಮ ದಿನವಾಗಿ ಘೋಷಣೆಯಾಯಿತು. ಈ ಸಂಘದಲ್ಲಿ ತಂಬಾಕು ಲೈಸೆನ್ಸ್ ಹೊಂದಿರುವ ರೈತರಿಗೆ ನಿಗದಿತ ಅವಧಿಯೊಳಗೆ ಸಾಲಮನ್ನಾ ಘೋಷಣೆ ಮಾಡಿದ್ದಾರೆ.

Not considering Hunusuru's 380 Farmers Loan waiver
Author
Bengaluru, First Published Oct 9, 2018, 3:52 PM IST

ಹುಣಸೂರು(ಅ.09): ತಾಲೂಕಿನ ಗಾವಡಗೆರೆ ರೈತಸೇವಾ ಸಹಕಾರ ಸಂಘದ ಇಬ್ಬಗೆ ನೀತಿಯಿಂದಾಗಿ 380 ರೈತ ಸದಸ್ಯರಿಗೆ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಆರೋಪಿಸಿದರು.

ಈ ಸಂಘವು 3600 ಷೇರುದಾರರೊಂದಿಗೆ ಕಳೆದ ಸಾಲಿನಲ್ಲಿ 1,250 ಮಂದಿ ರೈತರು ಸಾಲಸೌಲಭ್ಯ ಪಡೆದಿದ್ದರು. 2018-19ನೇ ಸಾಲಿಗಾಗಿ ರಾಜ್ಯಸರ್ಕಾರ ರೈತರ ಸಾಲಮನ್ನಾ ಯೋಜನೆ ಘೋಷಿಸಿದ್ದರೂ ಈ ಸಂಘದ 870 ತಂಬಾಕು ಬೆಳೆಯುವ ರೈತರು ಮಾತ್ರ ಸಾಲಮನ್ನಾದ ಸೌಲಭ್ಯ ಪಡೆದಿದ್ದು, ಮಿಕ್ಕ 380 ಮಂದಿ (ಒಟ್ಟು 2.30 ಕೋಟಿ) ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ರಾಜ್ಯ ಸರ್ಕಾರ ಸಾಲ ಮನ್ನಾ ಫಲಾನುಭವಿಗಳ ಅಯ್ಕೆಗೆ 2018ರ ಜು.10 ಅಂತಿಮ ದಿನವಾಗಿ ಘೋಷಣೆಯಾಯಿತು. ಈ ಸಂಘದಲ್ಲಿ ತಂಬಾಕು ಲೈಸೆನ್ಸ್ ಹೊಂದಿರುವ ರೈತರಿಗೆ ನಿಗದಿತ ಅವಧಿಯೊಳಗೆ ಸಾಲಮನ್ನಾ ಘೋಷಣೆ ಮಾಡಿದ್ದಾರೆ.

ನಂತರ ಉಳಿದ ಇತರ ರೈತರಿಗೆ ರಾಜ್ಯ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಕಾಲ ತಳ್ಳಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣಾಜಿರಾವ್ ಪವಾರ್, ದಲಿತ ಮುಖಂಡ ಎಚ್.ಎಸ್. ವರದರಾಜು ಇದ್ದರು.
 

Follow Us:
Download App:
  • android
  • ios