Asianet Suvarna News Asianet Suvarna News

ಶಂಕರ್‌ ಹೊರತುಪಡಿಸಿ ಯಾರಿಗೂ ಟಿಕೆಟ್‌ ಭರವಸೆ ನೀಡಿಲ್ಲ ಎಂದು ಡಿಸಿಎಂ

ವಿಧಾನ ಪರಿಷತ್‌ನಲ್ಲಿ ಯಾರಿಗೂ ಟಿಕೆಟ್‌ ಕೊಡುವ ಭರವಸೆಯನ್ನು ನೀಡಿಲ್ಲ. ಪ್ರಬಲ ಆಕಾಂಕ್ಷಿತರನ್ನು ಪಕ್ಷಕ್ಕೆ ಕರೆತರುವ ಮುನ್ನ ಯಾವುದೇ ಭರವಸೆ ಕೊಟ್ಟಿರಲಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ್‌ ಶುಕ್ರವಾರ ಸ್ಪಷ್ಟಪಡಿಸಿದರು.

Not assured ticket to anyone says dcm ashwath narayan
Author
Bangalore, First Published Jun 13, 2020, 11:56 AM IST

ಮಂಡ್ಯ(ಜೂ.13): ವಿಧಾನ ಪರಿಷತ್‌ನಲ್ಲಿ ಯಾರಿಗೂ ಟಿಕೆಟ್‌ ಕೊಡುವ ಭರವಸೆಯನ್ನು ನೀಡಿಲ್ಲ. ಪ್ರಬಲ ಆಕಾಂಕ್ಷಿತರನ್ನು ಪಕ್ಷಕ್ಕೆ ಕರೆತರುವ ಮುನ್ನ ಯಾವುದೇ ಭರವಸೆ ಕೊಟ್ಟಿರಲಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ್‌ ಶುಕ್ರವಾರ ಸ್ಪಷ್ಟಪಡಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ಗೆ ಟಿಕೆಟ್‌ ಕೋರಿ ಆರ್‌. ಶಂಕರ್‌, ಎಚ್‌.ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌, ಸಿ.ಪಿ.ಯೋಗೇಶ್ವರ್‌ ಸೇರಿ ಹಲವರು ಪ್ರಬಲ ಪೈಪೋಟಿ ನಡೆಸಿದ್ದಾರೆ. ಆರ್‌. ಶಂಕರ್‌ ಹೊರತುಪಡಿಸಿ ನಾವು ಯಾರಿಗೂ ಮಾತು ಕೊಟ್ಟಿಲ್ಲ. ಶಂಕರ್‌ ಚುನಾವಣೆಗೆ ನಿಲ್ಲದೇ ಇರುವ ಕಾರಣ ಈ ಭರವಸೆ ನೀಡಲಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸುವವರು ಈ ಭರವಸೆಯಿಂದ ಹೊರತಾಗಿದ್ದಾರೆ ಎಂದರು.

1600 ವರ್ಷ ಹಿಂದೆ ರಾತ್ರೋ ರಾತ್ರಿ ಮರೆಯಾಗಿದ್ದ ಚರ್ಚ್ ಲಾಕ್‌ಡೌನ್ ನಡುವೆ ಪ್ರತ್ಯಕ್ಷ!

ಆರ್‌. ಶಂಕರ್‌ಗೆ ಬಹುತೇಕ ವಿಧಾನ ಪರಿಷತ್‌ ಟಿಕೆಟ್‌ ಖಚಿತ. ಉಳಿದವರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಪಕ್ಷದ ವಲಯದಲ್ಲಿ ಚುನಾವಣೆಗೆ ಸ್ಪರ್ಧಿಸಿದವರಿಗೆ ಇಲ್ಲಿ ಅವಕಾಶ ನೀಡುವ ಬಗ್ಗೆ ಸಾಕಷ್ಟುವಿರೋಧವಿದೆ. ಚುನಾವಣೆಯಲ್ಲಿ ನಿಂತು ಸೋತವರು ತಮಗೂ ಟಿಕೆಟ್‌ ನೀಡುವಂತೆ ಒತ್ತಾಯ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ನಿರ್ಧಾರ ಮಾತ್ರ ಪಕ್ಷದ ವರಿಷ್ಠರು ಮಾಡುತ್ತಾರೆ ಎಂದರು.

ಯೋಗೇಶ್ವರ್‌ ಗೆ ಮುನಿಸಿಲ್ಲ:

ಯೋಗೇಶ್ವರ್‌ ಅವರು ವಿಧಾನಪರಿಷತ್‌ ಟಿಕೆಟ್‌ ಸಿಗದಿರುವ ಕಾರಣಕ್ಕೆ ಮುನಿಸಿಕೊಳ್ಳುವ ಸಾಧ್ಯತೆ ಇದೆ ಅಥವಾ ಪಕ್ಷ ಬಿಟ್ಟುತ್ತಾರೆಂಬುದನ್ನು ತಳ್ಳಿ ಹಾಕಿದ ಅಶ್ವಥ್‌ ನಾರಾಯಣ್‌, ಯೋಗೇಶ್ವರ್‌ಗೆ ಯಾವುದೇ ಮುನಿಸಿಲ್ಲ. ಚುನಾವಣೆಯಲ್ಲಿ ಸೋತ ನಂತರವೂ ಸಹ ಸಕ್ರಿಯವಾಗಿ ಪಕ್ಷದೊಂದಿಗೆ ಇದ್ದಾರೆ. ಅವರು ಕೂಡ ವಿಧಾನ ಪರಿಷತ್‌ ಟಿಕೆಟ್‌ ಕೇಳಿದ್ದಾರೆ. ಪಕ್ಷ ಈ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಿದರು.

ವಿಜಯಪುರ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ 9 ಲಕ್ಷ ದೋಚಿದ ಖದೀಮರು

ನಮ್ಮ ಪಕ್ಷ ಈಗಾಗಲೇ ರಾಜ್ಯಸಭಾ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಿದೆ. ಅದರಂತೆ ವಿಧಾನ ಪರಿಷತ್‌ನಲ್ಲೂ ಸಹ ಯಾಕೆ ಸಾಮಾನ್ಯರನ್ನು ಗುರುತಿಸಿ ಅವಕಾಶ ಕೊಡಬಾರದು ಎಂದು ಪ್ರಶ್ನೆ ಮಾಡಿದರು. ಈ ವಿಷಯದ ಬಗ್ಗೆ ಪಕ್ಷದ ವಲಯದಲ್ಲಿ ಗಂಭೀರ ಚಿಂತನೆಗಳು ಸಹ ಆರಂಭವಾಗಿದೆ ಎಂದು ತಿಳಿಸಿದರು.

ದೇವೇಗೌಡರಿಗೆ ಬೆಂಬಲವಿಲ್ಲ:

ರಾಜ್ಯಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್‌ ಬೆಂಬಲಿಸುವುದಿಲ್ಲ. ದೇವೇಗೌಡರು ಈಗಾಗಲೇ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ದೇವೇಗೌಡರನ್ನು ಬೆಂಬಲಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಅವರಿಗೆ ನಮ್ಮ ಮತಗಳ ಅವಶ್ಯಕತೆ, ಅನಿವಾರ್ಯತೆಯೂ ಇಲ್ಲ ಎಂದು ಹೇಳಿದರು.

Follow Us:
Download App:
  • android
  • ios