1600 ವರ್ಷ ಹಿಂದೆ ರಾತ್ರೋ ರಾತ್ರಿ ಮರೆಯಾಗಿದ್ದ ಚರ್ಚ್ ಲಾಕ್‌ಡೌನ್ ನಡುವೆ ಪ್ರತ್ಯಕ್ಷ!

First Published Jun 13, 2020, 11:28 AM IST

ಇಡೀ ವಿಶ್ವದಲ್ಲಿ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ಆದರೆ ಪ್ರಕೃತಿ ವಿಚಾರಕ್ಕೆ ಬಂದರೆ ಕೊರೋನಾ ನಿಯಂತ್ರಿಸಲು ಹೇರಲಾದ ಲಾಕ್‌ಡೌನ್ ಧನಾತ್ಮಕ ಪರಿಣಾಮ ಬೀರಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಕಾರ್ಯ ಸ್ಥಗಿತಗೊಳಿಸಿರುವುದರಿಂದ ನದಿ, ಉಸಿರಾಡುವ ಗಾಳಿ ಶುದ್ಧವಾಗಿದೆ. ಮಾಲಿನ್ಯ ನದಿಗಳೆಂದು ಕುಖ್ಯಾತಿ ಗಳಿಸಿದ ನದಿಗಳ ನೀರು ಕುಡಿಯಲು ಯೋಗ್ಯವಾಗುವಷ್ಟು ಶುದ್ಧವಾಗಿವೆ. ಸರ್ಕಾರ ನದಿಗಳನ್ನು ಶುದ್ಧಗೊಳಿಸಲು ರಾಶಿ ರಾಶಿ ಹಣ ಸುರಿದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಲಾಕ್‌ಡೌನ್ ನಡುವೆ ಟರ್ಕಿಯಲ್ಲೊಂದು ಅಚ್ಚರಿ ನಡೆದಿದದೆ. ಇಲ್ಲಿ 1600 ವರ್ಷಗಳ ಹಿಂದೆ ರಾತ್ರೋ ರಾತ್ರಿ ಮುಳುಗಿದ್ದ ಚರ್ಚ್ ತನ್ನಿಂತಾನಾಗೇ ಮೇಲೆ ಬಂದಿದೆ.