ಬಂದ್‌ಗೆ ಯಾವುದೇ ಬೆಂಬಲ ಇಲ್ಲದ ಕಾರಣ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿಲ್ಲ. ಹೀಗಾಗಿ ಜನಜೀವನ ಸಹಜ ಸ್ಥಿತಿಯಲ್ಲಿರಲಿದೆ.

ಮಡಿಕೇರಿ(ಸೆ.29):  ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರೆ ನೀಡಿರುವ ರಾಜ್ಯ ಬಂದ್‌ ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿರಲಿದೆ. ಕುಶಾಲನಗರದಲ್ಲಿ ಕರ್ನಾಟಕ ಕಾವಲುಪಡೆ ಪ್ರತಿಭಟನೆ ನಡೆಸಲು ಮುಂದಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಸಂಘಟನೆಗಳಿಂದ ಬೆಂಬಲ ಘೋಷಣೆಯಾಗಿಲ್ಲ.

ಬಂದ್‌ಗೆ ಯಾವುದೇ ಬೆಂಬಲ ಇಲ್ಲದ ಕಾರಣ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿಲ್ಲ. ಹೀಗಾಗಿ ಜನಜೀವನ ಸಹಜ ಸ್ಥಿತಿಯಲ್ಲಿರಲಿದೆ.

ಕಾವೇರಿಗಾಗಿ ಇಂದು ಕರ್ನಾಟಕ ಬಂದ್‌: ಏನೆಲ್ಲಾ ಇರುತ್ತೆ?, ಏನೆಲ್ಲಾ ಇರಲ್ಲ?

ರಾಜ್ಯ ಬಂದ್‌ಗೆ ಕರೆನೀಡುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಷ್ಟ. ಕಾರ್ಮಿಕರು, ಇತ್ಯಾದಿ ದಿನನಿತ್ಯ ದುಡಿದು ತಿನ್ನುವವರು ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಕಾವೇರಿ ವಿಚಾರವಾಗಿ ಹಲವು ದಿನಗಳಿಂದ ಕರವೇ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ನಡೆಸುತ್ತಿದೆ. ಮುಂದೆಯೂ ನಡೆಯುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಹೇಳಿಕೆ ನೀಡಿದ್ದಾರೆ.