ಜಿ20 ಸಭೆಗೆ ಆಹ್ವಾನವಿಲ್ಲ, ಕರೆಯದ ಹೋಗೋದು ಹೇಗೆ?: ಮಲ್ಲಿಕಾರ್ಜುನ ಖರ್ಗೆ
ಭಾರತ, ಇಂಡಿಯಾ ಎಂದು ಬಿಜೆಪಿ ಇದೀಗ ಇಲ್ಲದ ಗೊಂದಲ ಹುಟ್ಟುಹಾಕುತ್ತಿದೆ. ಇಂಡಿಯಾ ಹೆಸರು ಬೇಡ ಎನ್ನುವವರು ‘ಸ್ಟಾರ್ಟ್‌ಅಪ್ ಇಂಡಿಯಾ’ ಎಂದು ಹೆಸರಿಟ್ಟಿದ್ದಾರಲ್ಲ ಅದರ ಕಥೆ ಏನು ಹಾಗಾದರೆ? ಭಾರತ ಎಂಬ ಹೆಸರು ಸಂವಿಧಾನದಲ್ಲಿಯೇ ಇದೆ ಎಂದ ಮೇಲೆ ಇದರ ಬಗ್ಗೆ ಇಲ್ಲದ ಅರ್ಥ ಗಳನ್ನು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ಸಿಡಿಮಿಡಿಗೊಂಡ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ(ಸೆ.10): ದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಗೆ ತಮಗೆ ಆಹ್ವಾನ ಬಂದಿಲ್ಲ. ಹಾಗಂತ ಆಹ್ವಾನವೇ ಇಲ್ಲದೆ ಸಭೆಗೆ ಹೋಗುವುದು ಎಂದರೆ ಹೇಗೆ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರನ್ನು ಪ್ರಶ್ನಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ, ಇಂಡಿಯಾ ಎಂದು ಬಿಜೆಪಿ ಇದೀಗ ಇಲ್ಲದ ಗೊಂದಲ ಹುಟ್ಟುಹಾಕುತ್ತಿದೆ. ಇಂಡಿಯಾ ಹೆಸರು ಬೇಡ ಎನ್ನುವವರು ‘ಸ್ಟಾರ್ಟ್‌ಅಪ್ ಇಂಡಿಯಾ’ ಎಂದು ಹೆಸರಿಟ್ಟಿದ್ದಾರಲ್ಲ ಅದರ ಕಥೆ ಏನು ಹಾಗಾದರೆ? ಭಾರತ ಎಂಬ ಹೆಸರು ಸಂವಿಧಾನದಲ್ಲಿಯೇ ಇದೆ ಎಂದ ಮೇಲೆ ಇದರ ಬಗ್ಗೆ ಇಲ್ಲದ ಅರ್ಥ ಗಳನ್ನು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ಸಿಡಿಮಿಡಿಗೊಂಡರು.
ಜಿ20 ಔತಣಕ್ಕೆ ಖರ್ಗೆ ಕರೆಯದ್ದಕ್ಕೆ ಕಾಂಗ್ರೆಸ್ ಆಕ್ಷೇಪ
ಇವರು ಒಂದೆಡೆ ‘ಭಾರತ್ ಮಾತಾ ಕಿ ಜೈ’ ಅಂತಾರೆ. ಮತ್ತೊಂದೆಡೆ ‘ಸ್ಟಾರ್ಟ್ ಅಪ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಎಂದೂ ಇವರೇ ಹೆಸರಿಡುತ್ತಾರೆ. ‘ಭಾರತ್ ಜೋಡೋ’ ಎಂದು ನಾವು ಇಡೀ ದೇಶದಲ್ಲಿ ಪ್ರಚಾರ ಮಾಡಿದ್ದೇವೆ. ಈಗ ಇವರ ತಲೆಯಲ್ಲಿ ‘ಭಾರತ’ ಹುಟ್ಟಿಕೊಂಡಿದೆ ಎಂದು ಗೇಲಿ ಮಾಡಿದರು.