ವಂದೇ ಭಾರತ್ ಮಿಷನ್‌ನ 3ನೇ ಹಂತದಲ್ಲೂ ಮಂಗಳೂರಿಗೆ ವಿಮಾನ ಇಲ್ಲ
ವಂದೇ ಭಾರತ್ ಮಿಷನ್‌ನ ಮೂರನೇ ಹಂತದಲ್ಲೂ ವಿದೇಶದಿಂದ ಮಂಗಳೂರಿಗೆ ಕನ್ನಡಿಗರನ್ನು ಕರೆತರಲು ಯಾವುದೇ ವಿಮಾನ ಸಂಚಾರ ಇಲ್ಲ.
ಮಂಗಳೂರು(ಮೇ 27): ವಂದೇ ಭಾರತ್ ಮಿಷನ್‌ನ ಮೂರನೇ ಹಂತದಲ್ಲೂ ವಿದೇಶದಿಂದ ಮಂಗಳೂರಿಗೆ ಕನ್ನಡಿಗರನ್ನು ಕರೆತರಲು ಯಾವುದೇ ವಿಮಾನ ಸಂಚಾರ ಇಲ್ಲ. ಮೇ 26ರಿಂದ ಜೂ.4ರವರೆಗೆ ವಂದೇ ಭಾರತ್ ಮಿಷನ್ ಯೋಜನೆಯಲ್ಲಿ ವಿದೇಶದಿಂದ ಲಾಕ್‌ಡೌನ್ ಸಂತ್ರಸ್ತರನ್ನು ವಿಮಾನ ಮೂಲಕ ತಾಯ್ನಾಡಿಗೆ ಕರೆತರಲು ದಿನಾಂಕ ನಿಗದಿಯಾಗಿದೆ.
ಆದರೆ ಅದರಲ್ಲಿ ಮಂಗಳೂರಿನ ಹೆಸರು ಇಲ್ಲ. ಇದು ವಿದೇಶದಲ್ಲಿ, ಅದರಲ್ಲೂ ಗಲ್‌್ಫ ರಾಷ್ಟ್ರಗಳಲ್ಲಿರುವ ಕರಾವಳಿ ಕನ್ನಡಿಗರ ಅಚ್ಚರಿ ಹಾಗೂ ಬೇಸರಕ್ಕೆ ಕಾರಣವಾಗಿದೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ 19 ವಿಮಾನಗಳು ವಿದೇಶದಿಂದ ಆಗಮಿಸಲಿವೆ. ಲಕ್ಷಾಂತರ ಮಂದಿ ಕರಾವಳಿಗರು ಗಲ್‌್ಫ ರಾಷ್ಟ್ರಗಳಲ್ಲಿದ್ದರೂ ಮಂಗಳೂರಿಗೆ ವಿಮಾನ ಯಾನ ಇಲ್ಲ. ಕಣ್ಣೂರಿಗೆ ದುಬೈನಿಂದ 9, ಅಬುದಾಬಿಯಿಂದ 3, ದೋಹಾದಿಂದ 2 ಹಾಗೂ ಕುವೈಟ್, ಮಸ್ಕತ್ ಮತ್ತು ಸಲಾಲದಿಂದ ತಲಾ ಒಂದು ವಿಮಾನ ಆಗಮಿಸಲಿದೆ.
COVID19 ಹೆಚ್ಚುತ್ತಿರುವ ಹಿನ್ನೆಲೆ 30ರಂದು ವೈದ್ಯ, ಸಿಬ್ಬಂದಿ ನೇರ ಸಂದರ್ಶನ
ಈವರೆಗೆ ಮಂಗಳೂರಿಗೆ ದುಬೈನಿಂದ ಎರಡು ಹಾಗೂ ಮಸ್ಕತ್‌ನಿಂದ ಒಂದು ವಿಮಾನ ಆಗಮಿಸಿತ್ತು. ಬೇಡಿಕೆ ಇದ್ದರೂ ಮಂಗಳೂರಿಗೆ ವಿಮಾನ ಆಗಮಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಗಲ್‌್ಫ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದು, ಆದಷ್ಟುಶೀಘ್ರ ಕನ್ನಡಿಗರನ್ನು ತಾಯ್ನಾಡಿಗೆ ತಲುಪಿಸುವಂತೆ ಕೋರಿಕೊಂಡಿದ್ದಾರೆ. ಆದರೆ ಈ ಬಾರಿಯೂ ಕರಾವಳಿ ಕನ್ನಡಿಗರಿಗೆ ಮಂಗಳೂರಿಗೆ ವಿಮಾನ ಸಂಚಾರ ಕಲ್ಪಿಸಿಲ್ಲ. ಆದರೆ ಕೇರಳ ಸರ್ಕಾರದ ಬೇಡಿಕೆಗೆ ಸ್ಪಂದಿಸಿರುವುದು ಅನಿವಾಸಿ ಕರಾವಳಿ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಮಂಗಳವಾರ ಬೆಂಗಳೂರು-ಮಂಗಳೂರು ವಿಮಾನ ಮಾತ್ರ ಹಾರಾಟ
ದೇಶೀಯ ವಿಮಾನ ಹಾರಾಟ ಆರಂಭಗೊಂಡರೂ ಎರಡನೇ ದಿನ ಮಂಗಳವಾರ ಕೂಡ ಮಂಗಳೂರು-ಬೆಂಗಳೂರು ಮಧ್ಯೆ ಮಾತ್ರ ವಿಮಾನ ಸಂಚರಿಸಿದೆ. ಬೆಳಗ್ಗೆ ಬೆಂಗಳೂರಿನಿಂದ ಹೊರಟ ಸ್ಪೈಸ್ ಜೆಟ್ ಮಂಗಳೂರಿಗೆ ಆಗಮಿಸಿದ್ದು, ನಂತರ ಮಂಗಳೂರಿನಿಂದ ಹೊರಟು ಬೆಂಗಳೂರಿಗೆ ತೆರಳಿದೆ.
ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿನಂದನಾ ಪತ್ರ ಬರೆದ ಶಿಕ್ಷಣ ಸಚಿವ
ಅದೇ ರೀತಿ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ ವಿಮಾನ ಸಂಚಾರ ನಡೆಸಿದೆ. ಆದರೆ ಎರಡನೇ ದಿನವೂ ಪ್ಯಾಸೆಂಜರ್ ಇಲ್ಲದ ಕಾರಣಕ್ಕೆ ಮಂಗಳೂರಿನಿಂದ ಮುಂಬೈ, ಚೆನ್ನೈ ಹಾಗೂ ದೆಹಲಿಗೆ ವಿಮಾನ ಸಂಚರಿಸಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.