Asianet Suvarna News Asianet Suvarna News

ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿ​ನಂದನಾ ಪತ್ರ ಬರೆದ ಶಿಕ್ಷಣ ಸಚಿವ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ರೇಷ್ಮಾ ಬರೆದ ‘ಗುರು ಕಾಣಿಕೆ’ ಕವನ ಪುಸ್ತಕವನ್ನು ಮೆಚ್ಚಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅಭಿನಂದನಾ ಪತ್ರ ಬರೆದಿದ್ದಾರೆ.

Education minister suresh kumar writes appreciation letter to student
Author
Bangalore, First Published May 27, 2020, 2:13 PM IST

ಮಂಗಳೂರು(ಮೇ 27): ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ರೇಷ್ಮಾ ಬರೆದ ‘ಗುರು ಕಾಣಿಕೆ’ ಕವನ ಪುಸ್ತಕವನ್ನು ಮೆಚ್ಚಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅಭಿನಂದನಾ ಪತ್ರ ಬರೆದಿದ್ದಾರೆ.

ಪ್ರೌಢ ಶಾಲೆಯಲ್ಲಿರುವಾಗಲೇ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಕವನಗಳ ರೂಪದಲ್ಲಿ ವ್ಯಕ್ತ ಪಡಿಸಿ ಕಾವ್ಯ ಲೋಕಕ್ಕೆ ತನ್ನ ಕಾಣಿಕೆ ಅರ್ಪಿಸುತ್ತಿರುವುದು ಖುಷಿಯ ಸಂಗತಿಯಾಗಿದೆ. ನಾಡು, ನುಡಿ, ರಾಷ್ಟ್ರ, ಗುರುಗಳು, ತಂದೆ, ತಾಯಿ ಹಾಗೂ ಪ್ರಕೃತಿ ಪ್ರೇಮದ ಕುರಿತ ಸಾಲುಗಳು ಮೆಚ್ಚುವಂತದ್ದು ಎಂದು ತಿಳಿ​ಸಿ​ದ್ದಾ​ರೆ.

ಗುಜರಾತಿಂದ ಬಿಹಾರಕ್ಕೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಬೆಂಗಳೂರಿಗೆ!

ನಿನ್ನ ಲೇಖನಿ ಹೀಗೆಯೇ ಸಾಥ್‌ ನೀಡುವ ಮೂಲಕ ನಿನ್ನ ಕಾವ್ಯ ಕೃಷಿ ಮುಂದುವರಿದು ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಕೃತಿಗಳು ಸಮರ್ಪಿತವಾಗಲಿ ಎಂದು ಹಾರೈಸುವೆ. ನಿನ್ನನ್ನು ಪ್ರೋತ್ಸಾಹಿಸುವ ಮೂಲಕ ನಿನ್ನೊಂದಿಗೆ ಬೆನ್ನೆಲುಬಾಗಿ ನಿಂತ ನಿನ್ನ ತಂದೆ ತಾಯಿ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪುಸ್ತಕ ಮುದ್ರಣಕ್ಕೆ ಕಾರಣರಾದ ಶಿಕ್ಷಕ ರಾಜೇಶ್‌ ಸವಣಾಲು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು ಎಂದು ತಾವು ಬರೆದ ಅಭಿನಂದನಾ ಪತ್ರದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದ್ದಾರೆ. ಈಕೆ ಬೆಳಾಲು ಗ್ರಾಮದ ಕೆರೆಕೋಡಿ ಮನೆಯ ದುಗ್ಗಣ್ಣ ಮಲೆಕುಡಿಯ- ವಿಮಲ ದಂಪತಿ ಪುತ್ರಿ.

Follow Us:
Download App:
  • android
  • ios