Asianet Suvarna News Asianet Suvarna News

ಇಂದಿನಿಂದ ಜ. 28ರವರೆಗೆ ಬೆಂಗಳೂರಿನ ಈ ಪ್ರದೇಶದ ಸುತ್ತ ನಿತ್ಯ 2 ತಾಸು ವಿದ್ಯುತ್‌ ಇರಲ್ಲ..!

ಟಿ.ಜೆ.ಹಳ್ಳಿ ಹಾಗೂ ವಿ.ಜಿ. ದೊಡ್ಡಿಯ 66 ಕೆ.ವಿ. ಮಾರ್ಗದಲ್ಲಿ ಟವರ್‌ ಮತ್ತು ವೈರ್‌ ಅಳವಡಿಸುವ ಕಾರ್ಯದ ಹಿನ್ನೆಲೆಯಲ್ಲಿ ತಾವರೆಕೆರೆ, ಕೊಡಿಗೇಹಳ್ಳಿ ಮತ್ತು ಟಿ.ಜಿ ಹಳ್ಳಿ ಉಪ ಕೇಂದ್ರದ ಎಲ್ಲಾ 11 ಕೆ.ವಿ. ಮಾರ್ಗಗಳಲ್ಲಿ 1ರಿಂದ 2 ಗಂಟೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

No Electricity Around Tavarakere for 2 Hours Every Day in Bengaluru grg
Author
First Published Jan 13, 2023, 12:21 PM IST

ಬೆಂಗಳೂರು(ಜ.13): ಬೆಸ್ಕಾಂ ಮಾಗಡಿ ವಿಭಾಗದ ತಾವರೆಕೆರೆ ಉಪ ವಿಭಾಗ ವ್ಯಾಪ್ತಿಯಲ್ಲಿನ ತಾವರೆಕೆರೆ, ಕೊಡಿಗೇಹಳ್ಳಿ ಹಾಗೂ ಟಿ.ಜಿ. ಉಪ ಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಇಂದಿನಿಂದ(ಜ.13ರಿಂದ ಜ.28)ರವರೆಗೆ ನಿತ್ಯ 1 ಅಥವಾ 2 ಗಂಟೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಟಿ.ಜೆ.ಹಳ್ಳಿ ಹಾಗೂ ವಿ.ಜಿ. ದೊಡ್ಡಿಯ 66 ಕೆ.ವಿ. ಮಾರ್ಗದಲ್ಲಿ ಟವರ್‌ ಮತ್ತು ವೈರ್‌ ಅಳವಡಿಸುವ ಕಾರ್ಯದ ಹಿನ್ನೆಲೆಯಲ್ಲಿ ತಾವರೆಕೆರೆ, ಕೊಡಿಗೇಹಳ್ಳಿ ಮತ್ತು ಟಿ.ಜಿ ಹಳ್ಳಿ ಉಪ ಕೇಂದ್ರದ ಎಲ್ಲಾ 11 ಕೆ.ವಿ. ಮಾರ್ಗಗಳಲ್ಲಿ 1ರಿಂದ 2 ಗಂಟೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

Electricity Bill: ಡಿಜಿಟಲ್‌ ಮೀಟರ್‌ ಅಳವಡಿಸಿಕೊಳ್ಳುವ ಗ್ರಾಹಕರೇ ಎಚ್ಚರ: ವಿದ್ಯುತ್ ಬಿಲ್ ದುಪ್ಪಟ್ಟಾದ ಅಳಲು ಕೇಳಿ

ಇದರಿಂದ ಮಾಚೋಹಳ್ಳಿ ಕೈಗಾರಿಕಾ ಪ್ರದೇಶ, ಕಾಚೋಹಳ್ಳಿ, ಫಾರೆಸ್ಟ್‌ ಗೇಟ್‌, ಬೈಯಂಡನಹಳ್ಳಿ, ಸೀಗೆಹಳ್ಳಿ, ರಾಶಿ ರೆಸಿಡೆನ್ಸಿ, ಕಡಬಗೆರೆ, ಬೈಲಾಕೋನೇನಹಳ್ಳಿ, ತಾವರೆಕೆರೆ, ಚೆನ್ನೇನಹಳ್ಳಿ ಇಂಡಸ್ಟ್ರಿಯಲ್‌ ಏರಿಯಾ, ಯರ್ರಪ್ಪ ಇಂಡಸ್ಟ್ರಿಯಲ್‌ ಏರಿಯಾ, ಹೊನಗನಹಟ್ಟಿ, ಗಾಣಕಲ್‌ ಇಂಡಸಟ್ರಿಯಲ್‌ ಏರಿಯಾ, ತಾವರೆಕೆರೆ, ಜಟ್ಟಿಪಾಳ್ಯ, ಚನ್ನೇನಹಳ್ಳಿ, ಹೊನಗನಹಟ್ಟಿ, ಗಾಣಕಲ್‌ ಕೈಗಾರಿಕಾ ಪ್ರದೇಶ, ಬಸವನಪಾಳ್ಯ, ವರ್ತೂರು, ಮೇಟಿಪಾಳ್ಯ, ಗಂಗೇನಹರ್ಳಳಿ, ಲಕ್ಕುಪ್ಪೆ, ಪುಟ್ಟಯ್ಯನಪಾಳ್ಯ, ಟಿ.ಜೆ.ಹಳ್ಳಿ, ಕುರುಬರಹಳ್ಳಿ, ಮಾದಪಟ್ಟಣ ಕೈಗರಿಕಾ ಪ್ರದೇಶ, ಕಡಬಗೆರೆ, ದೇವಮಾಚೋಹಳ್ಳಿ, ಚೋಳನಾಯಕನಹಳ್ಳಿ, ಜೋಗೇರಹಳ್ಳಿ, ಗಂಗಪನಹಳ್ಳಿ, ಯಲ್ಲಪ್ಪನ ಪಾಳ್ಯ, ಪೆದ್ದನಪಾಳ್ಯ, ಕೆಂಪಗೊಂಡನಹಳ್ಳಿ, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ತಾವರೆಕೆರೆ ಬೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios