Asianet Suvarna News Asianet Suvarna News

ಸಿಂಹ-ನನ್ನ ಮಧ್ಯೆ ಭಿನ್ನಾಭಿಪ್ರಾಯವಿಲ್ಲ ಎಂದ ಶಾಸಕ ರಾಮ್‌ದಾಸ್

ಸಂಸದ ಪ್ರತಾಪ್‌ ಸಿಂಹ ಅವರಿಗೂ ನನಗೂ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಅವರೇ ಹೇಳಿದಂತೆ ನಾನು ಅವರ ಸಹೋದರ. ಅವರು ದೆಹಲಿಯ ಪ್ರತಿನಿಧಿ, ರಾಷ್ಟ್ರೀಯ ನಾಯಕ. ನಾನು ಒಬ್ಬ ಸ್ಥಳೀಯ ಪ್ರತಿನಿಧಿ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್‌.ಎ. ರಾಮದಾಸ್‌ ಮಾರ್ಮಿಕವಾಗಿ ಹೇಳಿದ್ದಾರೆ.

 

No difference of opinion with pratap simha saya sa ramdas
Author
Bangalore, First Published May 10, 2020, 3:00 PM IST
  • Facebook
  • Twitter
  • Whatsapp

ಮೈಸೂರು(ಮೇ 10): ಸಂಸದ ಪ್ರತಾಪ್‌ ಸಿಂಹ ಅವರಿಗೂ ನನಗೂ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಅವರೇ ಹೇಳಿದಂತೆ ನಾನು ಅವರ ಸಹೋದರ. ಅವರು ದೆಹಲಿಯ ಪ್ರತಿನಿಧಿ, ರಾಷ್ಟ್ರೀಯ ನಾಯಕ. ನಾನು ಒಬ್ಬ ಸ್ಥಳೀಯ ಪ್ರತಿನಿಧಿ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್‌.ಎ. ರಾಮದಾಸ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಕಳೆದ 25 ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಯಾವುದೇ ಜಿಲ್ಲಾ ಮಂತ್ರಿ ಏನು ಪ್ರಗತಿ ಮಾಡಿಲ್ಲವೆಂದು ಮೂರು ಬಾರಿ ಹೇಳಿದ್ದಾರೆ. ಇದನ್ನು ಸಕಾರಾತ್ಮಕವಾಗಿ ಸ್ವಾಗತಿಸಿ, ದೂರದೃಷ್ಟಿಇರುವ ಸಂಸದರನ್ನೂ ಅವಶ್ಯಕತೆ ಬಂದಾಗ ಅವರ ಸಲಹೆ- ಸೂಚನೆಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಪಡೆದುಕೊಳ್ಳುತ್ತೇನೆ ಎಂದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರೂ ಆದ ರಾಮದಾಸ್‌ ತಿಳಿಸಿದ್ದಾರೆ.

ಕೆ ಆರ್‌ ಪುರಂನಲ್ಲಿ ಸಚಿವ ಭೈರತಿ ಬಸವರಾಜುವಿನಿಂದ ಫುಡ್ ಕಿಟ್ ವಿತರಣೆ

2010ರಲ್ಲಿ ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಜೆ.ಪಿ. ನಗರದ ಎಕ್ಸಲ್‌ ಪ್ಲಾಂಟ್‌ನಲ್ಲಿ ವಾಸನೆ ಬರುತ್ತಿದೆ ಎಂದು ಹೈ-ರೈಸ್‌ ಕರ್ಟನ್‌ ಹಾಕಲಾಯಿತು ಹಾಗೂ ಅಲ್ಲಿ ಬಿದ್ದಿದ್ದ 7.5 ಲಕ್ಷ ಟನ್‌ ಕಸವನ್ನು ಲ್ಯಾಂಡ್‌ ಫಿಲ್ಲಿಂಗ್‌ ಮಾಡಿ ಅದರ ಮೇಲೆ ಕ್ಯಾಪಿಂಗ್‌ ಮಾಡಿ 5000 ಗಿಡಗಳನ್ನು ನೆಡಲಾಯಿತು. ಅವು ಈಗ ಮರಗಳಾಗಿ ಬೆಳದಿವೆ. ನಮ್‌ರ್‍ ಯೋಜನೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಒಂದೊಂದು ಕಸ ವಿಂಗಡಣಾ ಘಟಕದ ಕೇಂದ್ರವನ್ನು ನಗರದ ಬೇರೆ ಬೇರೆ ಕಡೆ 9 ಕಸ ಸಂಸ್ಕರಣಾ ಘಟಕವನ್ನು ಮಾಡಲಾಯಿತು. ಇದರಿಂದ ಸೂಯೇಜ್‌ ಫಾರಂಗೆ ಬರುವ ಕಸವನ್ನು ನಿಯಂತ್ರಣ ಮಾಡಲಾಗಿತ್ತು. ಅಲ್ಲದೆ, ಶಾಶ್ವತ ಪರಿಹಾರಕ್ಕಾಗಿ ಕಸದ ಘಟಕಕ್ಕೆಂದು ರಾಯನಕೆರೆಯಲ್ಲಿ 110 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು ಮತ್ತು ಯೋಜನೆ ತಯಾರು ಮಾಡಲಾಯಿತು ಎಂದು ಅವರು ವಿವರಿಸಿದ್ದಾರೆ.

2017- 18ನೇ ಸಾಲಿನಲ್ಲಿ ಹೈ ಕೋರ್ಟ್‌ಗೆ ತಿಳಿಸಿದಂತೆ ಈ ಘಟಕವನ್ನು ರಾಯನ ಕೆರೆ ಜಾಗಕ್ಕೆ ಸ್ಥಳಾಂತರಿಸಬೇಕೆಂದು ನಾನು ಹೋರಾಟ ಮಾಡಿದ್ದೇನೆ. 2022ರ ಒಳಗೆ ಸೂಯೇಜ್‌ ಫಾರಂನಲ್ಲಿನ ಕಸ ಘಟಕವನ್ನು ಪೂರ್ಣವಾಗಿ ಮುಚ್ಚಬೇಕೆಂದು ಕೋರಿದ್ದೇವೆ. ಸಿಗ್ಮಾ ಕಂಪನಿಯು ಒಂದು ಸಾವಿರ ಟನ್‌ ಕಸ ವಿಲೇವಾರಿ ಮಾಡಲು 15 ಯಂತ್ರಗಳು ಅಳವಡಿಸಲು ಯೋಜಿಸಿದೆ. ಹಾಲಿ ಇರುವ ಕೇವಲ 200 ಟನ್‌ ಗೊಬ್ಬರ ಕೈಗಾರಿಕೆಯಿಂದ ನರಳುತ್ತಿರುವ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಮತ್ತೆ 400 ಟನ್‌ ಗೊಬ್ಬರದ ದುರ್ವಾಸನೆಯನ್ನು ಕುಡಿಯಬೇಕಾಗುತ್ತದೆ. ಎಲ್ಲಾ ಸಾರ್ವಜನಿಕರು ಮತ್ತು ಸೂಯೇಜ್‌ ಫಾರಂನ ಸುತ್ತಮುತ್ತಲು ಇರುವ ಎಲ್ಲಾ ಸಂಘ ಸಂಸ್ಥೆಗಳು ಒಪ್ಪಿದರೇ ಈ ಘಟಕವನ್ನು ಇಲ್ಲೇ ಪ್ರಾರಂಭಿಸಲು ನನ್ನ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತುಮಕೂರಿಗೆ ತಲೆಬಿಸಿ ತಂದ ತಬ್ಲಿಘಿಗಳು; ನಿನ್ನೆ 3 ಪಾಸಿಟೀವ್, ಇಂದು ಆತಂಕದಲ್ಲಿ ಜನ

ನಾಗಪುರಲ್ಲಿ ಇರುವಂತೆ ನಗರ ಪ್ರದೇಶದಿಂದ 10 ಕಿ.ಮೀ ದೂರದ ಹೊರವಲಯದಲ್ಲಿ 5 ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿರುವಂತೆ ಮೈಸೂರು ನಗರ ವ್ಯಾಪ್ತಿಯಿಂದ 8 ಕಿ.ಮೀ ದೂರದ ಹೊರವಲಯದ ರಾಯನ ಕೆರೆಯಲ್ಲಿ ಈಗಾಗಲೇ ಸ್ವಾಧೀನಕ್ಕೆ ತೆಗೆದುಕೊಂಡಿರುವ 110 ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿದರೇ ನಾನೇ ಗ್ರೀನ್‌ ಕೋರ್ಟ್‌ನಲ್ಲಿ ಒಪ್ಪಿಗೆ ಸೂಚಿಸಿ ಈ ಕಾರ್ಯಕ್ಕೆ ನನ್ನ ಪೂರ್ಣ ಸಹಕಾರವನ್ನು ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ನನಗೆ ಯಾವುದೇ ಕಂಪನಿ, ಹಣಕಾಸು ವ್ಯವಸ್ಥೆಗಳ ಬಗ್ಗೆಯಾಗಲೀ ಮತ್ತು ಇನ್ಯಾವುದರ ಬಗ್ಗೆಯೂ ತಕರಾರಿಲ್ಲ. ಸೂಯೇಜ್‌ ಫಾರಂನಿಂದ ಕಸ ವಿಲೇವಾರಿ ಘಟಕವನ್ನು ಬೇರೆಡೆಗೆ ವರ್ಗಾಯಿಸಿ ಅದನ್ನು ತೆರವು ಮಾಡಿಸಿ ಅಲ್ಲಿನ ಸುತ್ತಮುತ್ತಲಿನ ಬಡವಾಣೆಗಳಲ್ಲಿ ವಾಸಿಸುತ್ತಿರುವ ಜನರ ಮತ್ತು ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅವರಲ್ಲೇರ ಋುಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ.

ಲಾಕ್‌ಡೌನ್ ಮಧ್ಯೆ ಸಾಮೂಹಿಕ ಪ್ರಾರ್ಥನೆ: ಧರ್ಮಗುರುವನ್ನು ತಹಸೀಲ್ದಾರ್‌ಗೆ ಒಪ್ಪಿಸಿದ ಜನ

ಹೀಗಾಗಿ, ಈಗಾಗಲೇ ವಿವಿಧ ನ್ಯಾಯಾಲಯಗಳು, ಆಯೋಗಗಳಿಂದ ನೀಡಿರುವ ಆದೇಶ, ತೀರ್ಪುಗಳಂತೆ ಸೂಯೇಜ್‌ ಫಾರಂ ಕಸ ವಿಲೇವಾರಿ ಘಟಕವನ್ನು ರಾಯನಕೆರೆಗೆ ಸ್ಥಳಾಂತರಿಸುವಂತೆ ಸಂಸದರು, ಜಿಲ್ಲಾ ಮಂತ್ರಿಗಳು ಮತ್ತು ಸಂಬಂಧಪಟ್ಟಂತ ಎಲ್ಲಾ ವ್ಯಕ್ತಿಗಳಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios