ಕೆ.ಆರ್‌.ಪೇಟೆ(ಮೇ 10): ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇದ್ದರೂ ಅದ​ನ್ನು ಲೆಕ್ಕಿಸದೇ ಮನೆಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿದ್ದ ಧರ್ಮಗುರುವೊಬ್ಬರನ್ನು ಸಾರ್ವಜನಿಕರೇ ಹಿಡಿದು ತಹಸೀಲ್ದಾರ್‌ಗೆ ಒಪ್ಪಿಸಿರುವ ಘಟನೆ ಇಲ್ಲಿ ನಡೆದಿದೆ.

ಇಲ್ಲಿ ತಾಲೂಕು ಕಚೇರಿ ರಸ್ತೆಯ ನಿವಾಸಿ ಮಹಮದ್‌ ರಫೀಕ್‌ ಎಂಬಾತ ಹಾಸನ, ಮೈಸೂರು ಮತ್ತು ಹುಣಸೂರಿನಿಂದ ಅಕ್ರಮವಾಗಿ ಪ್ರವೇಶಿಸಿರುವ ನಿವಾಸಿಗಳಿಗೆ ತಮ್ಮ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ನೀಡಿದ್ದು, ಇದನ್ನು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮೂವರು ಸೋಂಕಿತರು ಗುಣಮುಖ

ಆದರೆ, ಪೊಲೀಸರು ಯಾವುದೇ ಕ್ರಮಕೈಗೊಳ್ಳದೇ ಪರಿಣಾಮ ಆಕ್ರೋಶಗೊಂಡ ಜನರು ಅಲ್ಲಿಂದ ಓಡಿ ಹೋಗುತ್ತಿದ್ದ ಮಹಮದ್‌ ರಫಿಯನ್ನು ಹಿಡಿದು ತಹಸೀಲ್ದಾರ್‌ಗೆ ಒಪ್ಪಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.