Asianet Suvarna News Asianet Suvarna News

ಮುತ್ತತ್ತಿಯನ್ನು ಮುಟ್ಟದ ಕೊರೋನಾ ಸೋಂಕು!

  • ತೀವ್ರಗತಿಯಲ್ಲಿ ವ್ಯಾಪಿಸಿರುವ ಕೊರೋನಾ ಎರಡನೇ ಅಲೆ
  • ಮಂಡ್ಯದಲ್ಲಿಯೂ ಕೋವಿಡ್ ಪ್ರಕರಣಗಳೂ ಭಾರಿ ಎರಿಕೆ
  • ಮುತ್ತತ್ತಿ ಹಳ್ಳಿಯನ್ನು ಮಾತ್ರ ಮುಟ್ಟದ ಕೊರೋನಾ ಸೋಂಕು
No Covid Cases Reported in mandya muttatti village snr
Author
Bengaluru, First Published May 20, 2021, 1:25 PM IST

ವರದಿ : ಎಚ್‌.ಎನ್‌.ಪ್ರಸಾದ್‌

 ಹಲಗೂರು (ಮೇ.20):  ಕೊರೋನಾ ಎರಡನೇ ಅಲೆ ತೀವ್ರಗತಿಯಲ್ಲಿ ವ್ಯಾಪಿಸುತ್ತಾ ಜನರನ್ನು ಬಲಿ ತೆಗೆದುಕೊಳ್ಳುತ್ತಾ, ಸಂಕಷ್ಟಕ್ಕೆ ದೂಡಿದ್ದರೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮವನ್ನು ಮುಟ್ಟುವುದಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಗ್ರಾಮದಲ್ಲಿರುವ ಜನರೆಲ್ಲರೂ ಸುರಕ್ಷಿತವಾಗಿದ್ದು, ಪ್ರಕೃತಿಯ ನಡುವೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಹಲಗೂರಿನಿಂದ ಇಪ್ಪತ್ತೆರಡು ಕಿಲೋಮೀಟರ್‌ ದೂರದಲ್ಲಿ ಹಚ್ಚ ಹಸಿರಿನಿಂದ ಕೂಡಿರುವ ದಟ್ಟಅರಣ್ಯದ ಮಧ್ಯ ಭಾಗದಲ್ಲಿರುವ ಮುತ್ತತ್ತಿ ಗ್ರಾಮದಲ್ಲಿ ವಾಸವಾಗಿರುವ ಗ್ರಾಮಸ್ಥರಿಗೆ ಸೋಂಕಿನ ಭಯ ಕಾಡುತ್ತಿಲ್ಲ. ಸೋಂಕು ಹರಡದಂತೆ ಊರ ಒಳಗೆ ಯಾರೂ ಬರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರ ಪಕ್ಕದಲ್ಲೇ ಸೋಂಕಿತರ ಚಿಕಿತ್ಸೆ, ಮಳವಳ್ಳಿ ಆಸ್ಪತ್ರೆಯ ಅವ್ಯವಸ್ಥೆ .

ಕೊರೋನಾ ಸೋಂಕಿನ ಬಗ್ಗೆ ನಾವು ಜಾಗೃತರಾಗಿರಬೇಕೆಂಬ ಕಾರಣಕ್ಕೆ ಎಲ್ಲರೂ ಸೇರಿ ಮಾತನಾಡಿದ್ದೇವೆ. ಪಟ್ಟಣ ಪ್ರದೇಶಗಳಿಂದ ಯಾರೂ ನಮ್ಮ ಗ್ರಾಮಕ್ಕೆ ಬರದಂತೆ ಹಾಗೂ ನಮ್ಮ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ನಾವೇ ನಿರ್ಬಂಧ ಮಾಡಿಕೊಂಡಿದ್ದೇವೆ. ಇದರಿಂದ ಸಹ ನಾವು ಸುರಕ್ಷಿತವಾಗಿ ಇರಲು ಸಾಧ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಜುಲೈನಲ್ಲಿ ಕೊನೆಗೊಳ್ಳುತ್ತೆ ಎರಡನೇ ಅಲೆ, 3ನೇ ಅಲೆಯ ಸಮಯ ತಿಳಿಸಿದ ತಜ್ಞರು

ಮುತ್ತತ್ತಿ ಗ್ರಾಮ 320 ಜನಸಂಖ್ಯೆ ಹೊಂದಿದೆ. ರಾಜ್ಯವ್ಯಾಪ್ತಿ ಲಾಕ್‌ ಡೌನ್‌ ಆಗಿರುವುದರಿಂದ ಮುತ್ತತ್ತಿಗೆ ಬರುವ ಪ್ರವಾಸಿಗರು ಇಲ್ಲದೆ ಇಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ತುಂಬಾ ತೊಂದರೆಯಾಗಿದೆ. ಇಲ್ಲಿ ವಾಸವಾಗಿರುವವರಿಗೆ ವ್ಯವಸಾಯ ಮಾಡಿಕೊಂಡು ಜೀವನ ನಡೆಸಲು ಜಮೀನು ಇಲ್ಲ. ಪಟ್ಟಣ ಪ್ರದೇಶಗಳಿಗೆ ಕೂಲಿ ಕೆಲಸಕ್ಕೆ ಹೋಗುವುದಕ್ಕೂ ಸಹ ಆಗುತ್ತಿಲ್ಲ. ಆದುದರಿಂದ ಇವರಿಗೆ ಸಹಾಯಹಸ್ತ ಬೇಕಾಗಿದೆ ಎಂದು ಬ್ಯಾಡರಹಳ್ಳಿ ಗ್ರಾಪಂ ಸದಸ್ಯ ರವಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios