ಜುಲೈನಲ್ಲಿ ಕೊನೆಗೊಳ್ಳುತ್ತೆ ಎರಡನೇ ಅಲೆ, 3ನೇ ಅಲೆಯ ಸಮಯ ತಿಳಿಸಿದ ತಜ್ಞರು
- ಜುಲೈನಲ್ಲಿ ಕೊರೋನಾ ಎರಡನೇ ಅಲೆ ಕ್ಷೀಣ
- ಮೂರನೇ ಅಲೆ ಅಪ್ಪಳಿಸೋ ಸಮಯ ಅಂದಾಜು, ಹೀಗಿರಲಿದೆ ಪರಿಣಾಮ
ದೆಹಲಿ(ಮೇ.20): ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಈ ವರ್ಷದ ಜುಲೈ ವೇಳೆಗೆ ಕುಸಿಯುವ ಸಾಧ್ಯತೆಯಿದ್ದರೆ, ಮೂರನೇ ಅಲೆ ಸುಮಾರು ಆರರಿಂದ ಎಂಟು ತಿಂಗಳಲ್ಲಿ ದೇಶವನ್ನು ಮುಟ್ಟುವ ನಿರೀಕ್ಷೆಯಿದೆ ಎಂದು ಭಾರತ ಸರ್ಕಾರದ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಚಿಸಿದ ಸಮಿತಿಯ ಮೂರು ವಿಜ್ಞಾನಿಗಳ ತಂಡ ತಿಳಿಸಿದೆ.
ಮೂರನೇ ಅಲೆಯ ಕುರಿತು ಮಾತನಾಡಿದ ಐಐಟಿ ಕಾನ್ಪುರದ ಪ್ರೊಫೆಸರ್ ಮನೀಂದ್ರ ಅಗರ್ವಾಲ್ ಸಾಂಕ್ರಾಮಿಕ ರೋಗದ 3 ನೇ ಹಂತವು ಸ್ಥಳೀಕರಿಸಲ್ಪಡುತ್ತದೆ ಮತ್ತು ವ್ಯಾಕ್ಸಿನೇಷನ್ ನಿಂದ ಪ್ರತಿರಕ್ಷೆಯಿಂದಾಗಿ ಅನೇಕ ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಒಂದೇ ದಿನ ಐವರಿಗೆ ಬ್ಲ್ಯಾಕ್ ಫಂಗಸ್: ಹೆಚ್ಚಿದ ಆತಂಕ..!
ವಿಜ್ಞಾನಿಗಳು ಮೇ ತಿಂಗಳ ಅಂತ್ಯದ ವೇಳೆಗೆ ಭಾರತವು ಪ್ರತಿದಿನ 1.5 ಲಕ್ಷ ಪ್ರಕರಣಗಳನ್ನು ವರದಿ ಮಾಡುವ ನಿರೀಕ್ಷೆಯಿದೆ ಮತ್ತು ಜುಲೈ ಅಂತ್ಯದ ವೇಳೆಗೆ ಪ್ರಕರಣಗಳು ದಿನಕ್ಕೆ 20,000 / ಕ್ಕೆ ಇಳಿಯುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು COVID-19 ರ ಪಥವನ್ನು ಯೋಜಿಸಲು ಸಹಾಯ ಮಾಡುವ ಗಣಿತದ ಮಾದರಿಯ SUTRA (ಸಸ್ಸೆಪ್ಟಬಲ್, ಅನ್ಟೆಕ್ಟೆಡ್, ಟೆಸ್ಟೆಡ್ (ಪಾಸಿಟಿವ್) ಮತ್ತು ರಿಮೂವ್ಡ್ ಅಪ್ರೋಚ್) ಮಾದರಿಯನ್ನು ಆಧರಿಸಿದೆ.