Asianet Suvarna News Asianet Suvarna News

ಕೊಡಗಿಗೆ ನಿರಾಸೆ ತಂದ ಬಜೆಟ್: ಕಾಫಿ ಬೆಳೆಗಾರರ ಸಾಲ ಮನ್ನಾ ಇಲ್ಲ

ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿಲ್ಲ. ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ, ಕಾಡಾನೆಗಳ ಹಾವಳಿಯ ನಡುವೆಯೂ ಬೆಳೆಗಾರರು ಕಾಫಿ ಕೃಷಿ ಮಾಡುತ್ತಿದ್ದಾರೆ. ಆದರೆ ಈ ಬಜೆಟ್‌ನಲ್ಲಿ ಯಾವುದೇ ವಿಷಯದ ಪ್ರಸ್ತಾಪ ಮಾಡದಿರುವುದು ಬೆಳೆ​ಗಾ​ರ​ರಿಗೆ ಬೇಸರ ತರಿಸಿದೆ.

 

No Coffee growers Loan Waiver in Karnataka budget 2020
Author
Bangalore, First Published Mar 6, 2020, 10:09 AM IST

ಮಡಿಕೇರಿ(ಮಾ.06): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ರಾಜ್ಯ ಬಜೆಟ್‌ ಮಂಡಿಸಿದ್ದು, ಕೊಡಗಿನ ಮಟ್ಟಿಗೆ ನಿರಾಶಾದಾಯಕ ಬಜೆಟ್‌ ಎಂಬ ಅಭಿ​ಪ್ರಾಯ ವ್ಯಕ್ತ​ವಾ​ಗಿದೆ. ಜಿಲ್ಲೆಯ ಇಬ್ಬರು ಶಾಸಕರು ಇತ್ತೀಚೆಗೆ ಮುಖ್ಯಮಂತ್ರಿಗೆ ಕೊಡ​ಗಿನ ಕುರಿತು ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದರು. ಆದರೆ ಶಾಸಕರ ಹಾಗೂ ಜನರ ಬೇಡಿಕೆಗಳು ಈಡೇರದೆ ಹುಸಿಯಾಗಿದ್ದು, ಮುಖ್ಯಮಂತ್ರಿಗಳು ನಿರಾಸೆ ಮೂಡಿಸಿದ್ದಾರೆ.

ಸಣ್ಣ ಮಧ್ಯಮ, ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್‌ ವಾಪಸ್‌ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದನ್ನು ಹೊರತುಪಡಿಸಿದರೆ ರಾಜ್ಯದಲ್ಲಿ 10 ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಗೋಣಿಕೊಪ್ಪದಲ್ಲಿ ಹೊಸ ಠಾಣೆ ಆಗಲಿದೆ.

ಮಂಗಳೂರು-ಲಕ್ಷದ್ವೀಪ ಮಧ್ಯೆ ಪ್ಯಾಸೆಂಜರ್‌ ಹಡಗು ಪುನಾರಂಭ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ಸಹಯೋಗದೊಂದಿಗೆ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ಮೂರು ಕೋಟಿ ರು.ವೆಚ್ಚದಲ್ಲಿ ಸಿಮ್ಯುಲೇಷನ್‌ ಲ್ಯಾಬ್‌ಗಳನ್ನು ಮತ್ತು ತಲಾ ರು.30 ಲಕ್ಷ ವೆಚ್ಚದಲ್ಲಿ ಮಾಲಿಕ್ಯುಲಾರ್‌ ಬಯಾಲಜಿ ಲ್ಯಾಬ್‌ಗಳನ್ನು ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಈ ಯೋಜನೆ ಬರಲಿದೆ.

ರಾಜ್ಯದಲ್ಲಿ 2019ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಹಾನಿಗೊಂಡಿರುವ 842 ಅಂಗನವಾಡಿ ಕೇಂದ್ರಗಳ ಪುನರ್‌ ನಿರ್ಮಾಣವನ್ನು 138 ಕೋಟಿಯಲ್ಲಿ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಲಿದ್ದು, ಕೊಡಗಿನ ಅಂಗನವಾಡಿಗಳೂ ದುರಸ್ತಿಯಾಗುವ ಸಾಧ್ಯತೆಯಿದೆ.

ಗೃಹ ಸಚಿವ ಬೊಮ್ಮಾಯಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ

ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿಲ್ಲ. ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ, ಕಾಡಾನೆಗಳ ಹಾವಳಿಯ ನಡುವೆಯೂ ಬೆಳೆಗಾರರು ಕಾಫಿ ಕೃಷಿ ಮಾಡುತ್ತಿದ್ದಾರೆ. ಆದರೆ ಈ ಬಜೆಟ್‌ನಲ್ಲಿ ಯಾವುದೇ ವಿಷಯದ ಪ್ರಸ್ತಾಪ ಮಾಡದಿರುವುದು ಬೆಳೆ​ಗಾ​ರ​ರಿಗೆ ಬೇಸರ ತರಿಸಿದೆ.

ಬಿಜೆಪಿ ಭದ್ರಕೋಟೆಯಾಗಿರುವ ಕೊಡಗಿಗೆ ವಿಶೇಷ ಯೋಜನೆ ಪ್ರಕಟಿಸದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಮಲತಾಯಿ ಧೋರಣೆ ಎಂದು ಕೆಲವರು ಆರೋಪಿಸಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮಕ್ಕೂ ಯಾವುದೇ ವಿಶೇಷ ಅನುದಾನ ಪ್ರಕಟಿಸಿಲ್ಲ. ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಕೂಡ ಇಲ್ಲದಂತಾಗಿದೆ. ಇದು ಉತ್ತಮ ಬಜೆಟ್‌ ಎಂದು ಆಡಳಿತ ಪಕ್ಷದವರು ಸಮರ್ಥಿಸಿಕೊಂಡರೆ, ವಿರೋಧ ಪಕ್ಷದವರು ಇದು ನಿರೀಕ್ಷಿತ ಬಜೆಟ್‌ ಅಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios