ಬೆಂಗಳೂರು(ಜು.22): ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹಗಲು-ಇರಳು ಲೆಕ್ಕಿಸದೆ ದುಡಿಯುತ್ತಿರುವ ಬಿಬಿಎಂಪಿ ಸಿಬ್ಬಂದಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಕೊರೋನಾ ಸೋಂಕಿಗೆ ತುತ್ತಾಗಿರುವ ಓರ್ವ ಬಿಬಿಎಂಪಿ ವರ್ಕ್ ಇನ್‌ಸ್ಪೆಕ್ಟರ್‌ ಆ್ಯಂಬುಲೆನ್ಸ್‌ ಸಿಗದೆ ದ್ವಿಚಕ್ರ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾಗಿರುವ ಘಟನೆಯೊಂದು ನಡೆದಿದೆ. ಇದು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದೊಡ್ಡ ನಿದರ್ಶನವಾಗಿದೆ.

ರಾಜ್ಯ ಸರ್ಕಾರದ ಗೈಡ್‌ಲೈನ್ಸ್ ಪ್ರಕಟ: ರಾತ್ರಿ ಕರ್ಫ್ಯೂ, ಸಂಡೇ ಲಾಕ್ಡೌನ್ ಮುಂದುವರಿಕೆ

ಪಾಲಿಕೆಯ ವಾರ್ಡ್‌ ಸಂಖ್ಯೆ 18 ಮತ್ತು 19ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ವರ್ಕ್ ಇನ್‌ಸ್ಪೆಕ್ಟರ್‌ ಕೀಳು ನೋವು ಹಾಗೂ ಒಳಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜು.16ರಂದು ಜೆ.ಸಿ.ರಸ್ತೆಯ ಪಾಲಿಕೆಯ ಫೀವರ್‌ ಕ್ಲಿನಿಕ್‌ನಲ್ಲಿ ಸ್ವಾಬ್‌ ಟೆಸ್ಟ್‌ ಮಾಡಿಸಿದ್ದಾರೆ. ನಾಲ್ಕು ದಿನ ಕಳೆದರೂ ವರದಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ವರ್ಕ್ ಇನ್‌ಸ್ಪೆಕ್ಟರ್‌ ಖುದ್ದು ತಾವೇ ಫೀವರ್‌ ಕ್ಲಿನಿಕ್‌ ಬಂದು ವರದಿ ಪಡೆದಿದ್ದಾರೆ. ಈ ವೇಳೆ ಸೋಂಕಿರುವುದು ದೃಢಪಟ್ಟಿದೆ. ತಕ್ಷಣ ತಮ್ಮ ಮೇಲಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರೂ ಪ್ರಯೋಜವಾಗಿಲ್ಲ.

ರಾಜ್ಯದ ಜನತೆಯನ್ನುದ್ದೇಶಿಸಿ ಸಿಎಂ ಮಾತು: ಮಹತ್ವದ ಮಾಹಿತಿ ಬಿಚ್ಚಿಟ್ಟ ಬಿಎಸ್‌ವೈ

ಆತಂಕದಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದ ಸೋಂಕಿತ ವರ್ಕ್ ಇನ್‌ಸ್ಪೆಪೆಕ್ಟರ್‌ ಅವರನ್ನು ಆಸ್ಪತ್ರೆಯವರು ಹಾಸಿಗೆ ಖಾಲಿ ಇಲ್ಲ ಎಂಬ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ಮತ್ತಷ್ಟುಹೆದರಿದ ಅವರು ಸ್ನೇಹಿತರ ನೆರವಿನಿಂದ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇರುವ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲಿ ತೆರಳಲೂ ಸಹ ಆ್ಯಂಬುಲೆನ್ಸ್‌ ಇಲ್ಲದೆ, ತಮ್ಮದೇ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ.

ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ!

ಆ ಆಸ್ಪತ್ರೆಯವರು .20 ಸಾವಿರ ಕಟ್ಟಿದರೆ ದಾಖಲು ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಮತ್ತೆ ಸ್ನೇಹಿತರ ನೆರವು ಕೇಳಿ .20 ಸಾವಿರ ಸಾಲ ಪಡೆದಿರುವ ವರ್ಕ್ ಇನ್‌ಸ್ಪೆಕ್ಟರ್‌, ಆಸ್ಪತ್ರೆಗೆ ಹಣ ಪಾವತಿಸಿ ದಾಖಲಾಗಿದ್ದಾರೆ. ಇಷ್ಟಾದರೂ ಮೇಲಾಧಿಕಾರಿಗಳು ಸಹಾಯಕ್ಕೆ ಬಂದಿಲ್ಲ.

ಬಿಬಿಎಂಪಿ ನೌಕರರಿಗೆ ಹೀಗೆ ಆದರೆ ಇನ್ನು ಜನಸಾಮಾನ್ಯರ ಕಥೆಯೇನು ಎಂದು ಸೋಂಕಿತ ವರ್ಕ್ ಇನ್‌ಸ್ಪೆಕ್ಟರ್‌ ಅವರ ಕುಟುಂಬದವರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.