ತುಮಕೂರು (ಅ.30):  ಶಿರಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಪಕ್ಷದ ಅಭ್ಯರ್ಥಿ ಡಾ.ರಾಜೇಶಗೌಡರನ್ನು ಜನ ಗೆಲ್ಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಇಲ್ಲಿ ಮಾತನಾಡಿದ ಅವರು, ಶಿರಾದಲ್ಲಿ ನಮ್ಮ ಪಕ್ಷಕ್ಕೆ ಬೇಸ್‌ ಇರಲಿಲ್ಲ ಎನ್ನುವುದು ನಿಜ. ಆದರೆ, ಅಭಿವೃದ್ಧಿಗಾಗಿ ಈ ಕ್ಷೇತ್ರದಲ್ಲಿ ಈವರೆಗಿನ ಎಲ್ಲ ದಾಖಲೆ ಮೀರಿ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದರು.

ಶಿರಾ ಬೈ ಎಲೆಕ್ಷನ್: ಕೇಸರಿ ಮತಬೇಟೆ, ಟಗರು ಕ್ಯಾಂಪೇನ್, ದಳಪತಿ ಪ್ರಚಾರ .

ಬಿಜೆಪಿ ಜೆಡಿಎಸ್‌ ಜೊತೆ ಯಾವುದೇ ರೀತಿ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್‌, ಜೆಡಿಎಸ್‌ ಸೋಲು ಒಪ್ಪಿಕೊಂಡು ಹತಾಶೆ ವ್ಯಕ್ತಪಡಿಸುತ್ತಿವೆ ಎಂದು ಟೀಕಿಸಿದರು. 

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿಗೆ ಈ ಬಾರಿ ಜನಮತ ನೀಡುತ್ತಾರೆ. ಹಣ, ಹೆಂಡ ಹಂಚುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಸಂಸ್ಕೃತಿ. ನಮ್ಮ ಪಕ್ಷದ್ದಲ್ಲ ಎಂದು ತಿರುಗೇಟು ನೀಡಿದರು.