ರಾಮ​ನ​ಗ​ರ [ಡಿ.26]: ರಾಮನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಲಾಗಿರುವ ‘ಒಕ್ಕಲಿಗ ಭವನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚುಂಚ​ನ​ಗಿರಿ ಮಠಾ​ಧೀಶ ನಿರ್ಮ​ಲಾ​ನಂದನಾಥ ಸ್ವಾಮೀಜಿ ಹಾಗೂ ಸ್ಫಟಿ​ಕ​ಪುರಿ ಮಹಾ ಸಂಸ್ಥಾ​ನ​ಮ​ಠದ ನಂಜಾ​ವ​ಧೂತ ಸ್ವಾಮೀಜಿ ಅವರು ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಮುಖ್ಯ​ಮಂತ್ರಿ ಗದ್ದುಗೆ ಅಲಂಕ​ರಿ​ಸಲಿ ಎಂದು ಶುಭ ಹಾರೈ​ಸಿ​ದರು.

ನಿರ್ಮ​ಲಾ​ನಂದನಾಥ ಸ್ವಾಮೀಜಿ ಮಾತ​ನಾಡಿ, ರಾಮ​ನ​ಗರ ಜಿಲ್ಲೆ​ಯಿಂದ ಕೆಂಗಲ್‌ ಹನು​ಮಂತಯ್ಯ, ಎಚ್‌.ಡಿ. ​ದೇ​ವೇ​ಗೌಡ ಹಾಗೂ ಎಚ್‌.ಡಿ. ​ಕು​ಮಾ​ರ​ಸ್ವಾಮಿ ಮುಖ್ಯ​ಮಂತ್ರಿ ಆಗಿ​ದ್ದಾರೆ. ಮುಂದೆ ಡಿ.ಕೆ. ​ಶಿ​ವ​ಕು​ಮಾರ್‌ ಅವರು ಮುಖ್ಯ​ಮಂತ್ರಿ​ಗ​ಳಾ​ಗು​ತ್ತಾರೆ. ಮುಂದೆ ಅವ​ರಿಗೆ ಏನೇನು ಬಾಕಿ ಇದೆಯೋ ಅದೆ​ಲ್ಲವು ಸಿಗ​ಲಿ​ದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂಜಾ​ವ​ಧೂತ ಸ್ವಾಮೀಜಿ ಮಾತ​ನಾಡಿ, ಡಿ.ಕೆ. ​ಶಿ​ವ​ಕು​ಮಾರ್‌ ಒಬ್ಬ ವ್ಯಕ್ತಿ​ಯಾಗಿಲ್ಲ, ಶಕ್ತಿ​ಯಾ​ಗಿ​ದ್ದಾರೆ. ಕುಮಾ​ರ​ಸ್ವಾಮಿ ಅವ​ರನ್ನು ಎರ​ಡನೇ ಬಾರಿಗೆ ಮುಖ್ಯ​ಮಂತ್ರಿ ಮಾಡಲು ಡಿ.ಕೆ. ​ಶಿ​ವ​ಕು​ಮಾರ್‌ ಪಟ್ಟಪರಿ​ಶ್ರಮ ಎಲ್ಲ​ರಿಗೂ ಗೊತ್ತಿದೆ. ಕುಮಾ​ರ​ಸ್ವಾ​ಮಿ​ರ​ವರು ಡಿ.ಕೆ. ​ಶಿ​ವ​ಕು​ಮಾರ್‌ ಅವ​ರನ್ನು ಮುಖ್ಯ​ಮಂತ್ರಿ ಮಾಡು​ತ್ತಾರೊ ಅಥವಾ ಡಿ.ಕೆ.​ ಶಿ​ವ​ಕು​ಮಾರ್‌, ಕುಮಾ​ರ​ಸ್ವಾಮಿ ಅವ​ರನ್ನು ಮತ್ತೆ ಮುಖ್ಯ​ಮಂತ್ರಿ ಮಾಡಿ ಆನಂತರ ಮುಖ್ಯ​ಮಂತ್ರಿ​ಯಾ​ಗು​ತ್ತಾರೊ ಗೊತ್ತಿಲ್ಲ ಎಂದು ಹೇಳಿ​ದರು.