ಕನಕಪುರ (ನ.11):  ತಾಲೂಕಿನ ಮರಳವಾಡಿ ಹೋಬಳಿಯ ವಿವಿಧ ಹಳ್ಳಿಗಳಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ​ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಿದರು.

ಶಿವನಹಳ್ಳಿದೊಡ್ಡಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿ​ರುವ ಸೇತುವೆ ಕಾಮ​ಗಾರಿ ವೀಕ್ಷಿಸಿದ ನಿಖಿಲ್‌ ಅವ​ರು, ಆದಷ್ಟುಬೇಗ ಸೇತುವೆ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿ​ಕೊ​ಡು​ವು​ದಾಗಿ ತಿಳಿ​ಸಿ​ದರು.

 ಸೇತುವೆ ಬಳಿ ಭೇಟಿ ನೀಡಿದ ನಿಖಿಲ್ ಅವರನ್ನು ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಬೇಕೆಂದು ಪಟ್ಟುಹಿಡಿದು ನಾವು ದಿನನಿತ್ಯ ಪಡುವ ಕಷ್ಟವನ್ನು ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ಜನರ ಮನವಿಗೆ ಸ್ಪಂದಿಸಿದ ನಿಖಿಲ್ ಹಳ್ಳವನ್ನು ದಾಟಿ ಸುಮಾರು 1 ಕಿ.ಮೀ. ನಡೆದುಕೊಂಡು ಹೋಗಿ ಗ್ರಾಮದ ಜನರ ಸಮಸ್ಯೆ ಆಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.