ರಾ​ಮ​ನ​ಗರ(ಫೆ.13): ಪುತ್ರ ನಿಖಿಲ್‌ ವಿವಾಹಕ್ಕೆಂದು ನಿಗದಿಪಡಿಸಿರುವ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಈಗಾಗಲೇ ಒಂದು ಬಾರಿ ಪರಿಶೀಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬುಧವಾರದಂದು ತಮ್ಮ ಬೀಗರಾದ ಮಂಜುನಾಥ್‌ ಅವರೊಂದಿಗೆ ಮತ್ತೊಮ್ಮೆ ನೋಡಿದ್ದಾರೆ.

ಈ ಸ್ಥಳ​ವನ್ನು ಕುಮಾ​ರ​ಸ್ವಾ​ಮಿ ಕುಟುಂಬ​ದ​ವರು ಮೊದ​ಲೇ ಒಪ್ಪಿ​ಕೊಂಡಿ​ದ್ದರು. ಬೀಗ​ರಿಗೆ ಸ್ಥಳ ತೋರಿ​ಸ​ಬೇ​ಕೆಂಬ ಉದ್ದೇ​ಶ​ದಿಂದ ಎರ​ಡನೇ ಬಾರಿಗೆ ಕುಮಾ​ರ​ಸ್ವಾಮಿ ಭೇಟಿ ನೀಡಿ​ದ​ರು. ಈ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಕುಮಾ​ರ​ಸ್ವಾಮಿ, ಇದು ನಮ್ಮ ಮನೆಯ ಮೊದಲ ಹಾಗೂ ಕೊನೆಯ ವಿವಾಹ ಕಾರ್ಯಕ್ರಮ.

ನಿಖಿಲ್ ನಿಶ್ಚಿತಾರ್ಥ; ಥೈಲ್ಯಾಂಡ್‌ ಹೂವು, ಶ್ವೇತ ವರ್ಣದ ಮಂಟಪ ರೆಡಿ!

ಹೀ​ಗಾಗಿ ಶಾಸ್ತ್ರೋಕ್ತವಾಗಿ ಹಾಗೂ ವಾಸ್ತು ಪ್ರಕಾರವಾ​ಗಿ ನೆರವೇರಿಸಲಾಗುವುದು. ಈ ಜಾಗಕ್ಕೆ ಶಕ್ತಿ ತುಂಬಲು ನಮ್ಮ ಜ್ಯೋತಿಷಿಗಳು, ಅರ್ಚಕರು ಇ​ನ್ನೆ​ರೆಡು ದಿ​ನ​ದಲ್ಲಿ ಪೂಜೆ ಸಲ್ಲಿಸುವರು. ಎಲ್ಲಿ ಕ​ಲ್ಯಾಣ ಮಂಟಪ ಬ​ರ​ಬೇಕು, ಎಲ್ಲೆಲ್ಲಿ ಧಾ​ರ್ಮಿಕ ಕಾ​ರ್ಯ​ಗಳನ್ನು ನ​ಡೆ​ಸ​ಬೇಕು ಎಂಬು​ದನ್ನು ವಾಸ್ತುಪ್ರಕಾರವಾಗಿ ಗು​ರು​ತಿ​ಸಲಿದ್ದಾರೆ ಎಂದು ಹೇಳಿ​ದ​ರು.

ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು

ಏ.17ರಂದು ಬೆಳಗ್ಗೆ 9:15ರಿಂದ 9:30ರ ಶುಭಲಗ್ನದಲ್ಲಿ ನಿಖಿಲ್‌ ಮತ್ತು ರೇವತಿ ವಿವಾಹ ಕಾರ್ಯ ನೆರ​ವೇ​ರ​ಲಿದೆ. ಮದುವೆಗೆ 5 ರಿಂದ 6 ಲಕ್ಷ ಜನ ಬರುವ ನಿರೀಕ್ಷೆ ಇದೆ. ಇದು ಅ​ದ್ಧೂರಿ ಮ​ದುವೆ ಅಲ್ಲ. ಆ​ದರೆ ಗ​ಣ್ಯರು ಆ​ಗ​ಮಿ​ಸು​ವು​ದರಿಂದ ವಿ​ಶಾಲ​ವಾದ ಪ್ರ​ದೇಶ ಆಯ್ಕೆ ಮಾ​ಡಿ​ಕೊಂಡಿದ್ದೇವೆ. ನ​ನ್ನೆಲ್ಲ ಜ​ನ​ರಿಗೆ ಆ​ಮಂತ್ರಣ ಪ​ತ್ರಿಕೆ ನೀ​ಡ​ಲಾ​ಗುವುದು. ಪ​ತ್ರಿ​ಕೆಯು ಸಹ ಸ​ರ​ಳ​ವಾ​ಗಿಯೇ ಇ​ರ​ಲಿದೆ ಎಂದು ಹೇಳಿದ​ರು.

"