Yadgir: ಸರ್ಕಾರಿ ವೈದ್ಯೆಯ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು?: ವೈದ್ಯೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ
ವೈದ್ಯೋ ನಾರಾಯಣ ಹರಿ ಅಂತ ಕರೆಯುತ್ತಾರೆ. ದೇವರಿಗಿಂತ ಹೆಚ್ಚಾಗಿ ನಾವೆಲ್ಲ ವೈದ್ಯರು ಮುಖ್ಯ ಅಂತ ಭಾವಿಸುತ್ತೇವೆ. ಆದ್ರೆ ಅದೇ ಸರ್ಕಾರಿ ವೈದ್ಯಯೊಬ್ಬರು ಹಣದಾಸೆಗೆ ಒಂದು ನವಜಾತ ಶಿಶುವಿನ ಪ್ರಾಣಕ್ಕೆ ಕುತ್ತು ತಂದಿರುವ ಆರೋಪ ಕೇಳಿ ಬಂದಿದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಮಾ.16): ವೈದ್ಯೋ ನಾರಾಯಣ ಹರಿ ಅಂತ ಕರೆಯುತ್ತಾರೆ. ದೇವರಿಗಿಂತ ಹೆಚ್ಚಾಗಿ ನಾವೆಲ್ಲ ವೈದ್ಯರು ಮುಖ್ಯ ಅಂತ ಭಾವಿಸುತ್ತೇವೆ. ಆದ್ರೆ ಅದೇ ಸರ್ಕಾರಿ ವೈದ್ಯಯೊಬ್ಬರು ಹಣದಾಸೆಗೆ ಒಂದು ನವಜಾತ ಶಿಶುವಿನ ಪ್ರಾಣಕ್ಕೆ ಕುತ್ತು ತಂದಿರುವ ಆರೋಪ ಕೇಳಿ ಬಂದಿದೆ. ಕೇಳಿದಷ್ಟು ಹಣ ಕೊಡದಕ್ಕೆ ಸೀಜೆರಿಯನ್ ಮಾಡದೇ ನವಜಾತ ಶಿಶುವನ್ನು ಸಾಯಿಸಿದ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಹಣದಾಯಿ ಸರ್ಕಾರಿ ವೈದ್ಯಯಿಂದ ನವಜಾತ ಶಿಶು ಸಾವು?: ಯಾದಗಿರಿ ನಗರದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ಪ್ರಸೂತಿ ವೈದ್ಯ ಡಾ.ಪಲ್ಲವಿ ಅವರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವಿಗೀಡಾಗಿದೆ ಎಂದು ಹೆರಿಗೆಗೆಂದು ಬಂದಿದ್ದ ಸಂಗೀತಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರಿ ವೈದ್ಯೆ ಡಾ.ಪಲ್ಲವಿ ಕೇಳಿದಷ್ಟು ಹಣ ಕೊಡದಿದ್ದ ಕಾರಣಕ್ಕೆ ಹೆರಿಗೆ ನೋವಿನಿಂದ ಬಳಲುತಿದ್ದ ತುಂಬು ಗರ್ಭಿಣಿಗೆ ಸಿಜೇರಿಯನ್ ಮಾಡದೇ ವಿಳಂಭ ಮಾಡಿ, ಮಗುವಿನ ಸಾವಿಗೆ ಕಾರಣವಾಗಿರುವ ವೈದ್ಯೆಯ ಹಣದದಾಹಕ್ಕೆ ಮಗು ಕಳೆದುಕೊಂಡ ಪೋಷಕರ ಆಕ್ರೋಶ ಕಟ್ಟೆಯೊಡೆದಿದೆ. ವೈದ್ಯೆ ಡಾ.ಪಲ್ಲವಿ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಕಾರು ಅಪಘಾತ: ತಲೆ ಹಾಗೂ ಬಲಗಾಲಿಗೆ ಸಣ್ಣಪುಟ್ಟ ಗಾಯ
ಹಣದಾಯಿ ವೈದ್ಯ ಡಾ.ಪಲ್ಲವಿ ಪಾಪಿ ಎಂದು ಪೋಷಕರ ಆಕ್ರೋಶ: ಸಂಗೀತಾ ಎಂಬ ಬಾಣಂತಿ ಯಾದಗಿರಿ ನಗರದ ರಾಜೀವ್ ಗಾಂಧಿ ಏರಿಯಾದ ನಿವಾಸಿ. ಸಂಗೀತಾ ತನ್ನ ತವರೂ ಮನೆ ಸುರಪುರಕ್ಕೆ ಹೆರಿಗೆಗೆಂದು ಹೋಗಿದ್ದಳು. ಹೆರಿಗೆ ನೋವು ಕಾಣಿಸಿಕೊಂಡಿರುವುದರಿಂದ ನಿನ್ನೆ ಸಂಜೆ ಸುರಪುರದಿಂದ ಯಾದಗಿರಿ ನಗರದಲ್ಲಿರುವ ತಾಯಿ-ಮಕ್ಕಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ಆಗ ಸಂಗೀತಾ ಆಸ್ಪತ್ರೆಗೆ ದಾಖಲಾದಾಗ ವೈದ್ಯೆ ಪಲ್ಲವಿ ಪೂಜಾರಿ ಡ್ಯೂಟಿಯಲ್ಲಿದ್ರು. ಸಂಗೀತಾ ತೀವ್ರ ನೋವಿನಿಂದ ಬಳಲುತಿದ್ರೂ ವೈದ್ಯೆ ಪಲ್ಲವಿಗೆ ಮಾತ್ರ ಹಣದ್ದೇ ಡಿಮ್ಯಾಂಡ್ ಮಾಡ್ತಾರೆ. ಹೆರಿಗೆ ನೋವು ಹೆಚ್ಚಾಗಿದ್ರಿಂದ ಸಿಜೇರಿಯನ್ ಮಾಡಬೇಕಿದೆ.
ನೀವು 10 ಸಾವಿರ ಕೊಟ್ರೆ ಮಾತ್ರ ಹೆರಿಗೆ ಮಾಡ್ತಿನಿ ಅಂತ ಹೇಳಿದ್ರಂತೆ. ಸಂಗೀತಾ ಕುಟುಂಬಸ್ಥರು ಅವಸರದಲ್ಲಿ ದುಡ್ಡು ತೆಗೆದುಕೊಂಡು ಬಂದಿಲ್ಲ. ಆಯ್ತು ಪೋನ್ ಪೇ ಮಾಡ್ತೀವಿ ಅಂತ ಹೇಳಿದ್ರಂತೆ. ಸಮಯ ಕೇಳಿದ್ರೂ ಒಪ್ಪದ ವೈದ್ಯೆ ಪಲ್ಲವಿ, ಹಣ ಕೊಡೋತನಕ ಸಿಜೇರಿಯನ್ ಮಾಡಿಕೊಳ್ಳಲು ಒಪ್ಪಲಿಲ್ವಂತೆ. ಏನೇ ಕನ್ವೆನ್ಸ್ ಮಾಡಿದ್ರೂ ವೈದ್ಯ ಪಲ್ಲವಿ ಕೇರ್ ಮಾಡಲೇ ಇಲ್ವಂತೆ. ವೈದ್ಯೆ ಬರೋಬ್ಬರಿ ಒಂದು ಗಂಟೆ ಕಾಯಿಸಿದ್ದಾಳೆ. ಇದ್ರಿಂದ ಕಂಗಾಲಾದ ಕುಟುಂಬಸ್ಥರು ಶಾಸಕರ ಕಡೆಯಿಂದ ಕರೆ ಮಾಡಿಸಿದಾಗ ಸಿಜೇರಿಯನ್ ಮಾಡಿಕೊಂಡ್ರೂ, ಅಷ್ಟರಲ್ಲಾಗಲೇ ಮಗು ಸಾವಾಗಿದೆ ಎಂದು ಅದೇ ವೈದ್ಯ ಹೇಳ್ತಾಳೆ. ಈ ವಿಷಯ ಕೇಳಿ ಕುಟುಂಬಸ್ಥರಿಗೆ ದಿಗ್ಬ್ರಮೆ ಉಂಟಾಗಿದೆ. ಅಕ್ಷರಶಃ ಬರ ಸಿಡಿಲು ಬಡಿದಂತಾಗಿದೆ.
ಡಾ.ಪಲ್ಲವಿ ಅಮಾನತಿಗೆ ಪೋಷಕರ ಆಗ್ರಹ: ನವಜಾತ ಶಿಶುವಿನ ಸಾವು ಕುಟುಂಬಸ್ಥರನ್ನು ಸಂಪೂರ್ಣ ಕಂಗಾಲಾಗುವಂತೆ ಮಾಡಿದೆ. ಇದರಿಂದ ಸಂಗೀತಾ ಕುಟುಂಬಸ್ಥರ ಆಕ್ರೋಶಗೊಂಡಿದ್ದಾರೆ. ಹೆರಿಗೆ ಆಸ್ಪತ್ರೆ ಮುಂಭಾಗ ಮೃತ ನವಜಾತ ಶಿಶುವಿನ ಪೋಷಕರ ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆ ತೀವ್ರವಾಗ್ತಿದ್ದಂತೆ ಜಿಲ್ಲಾ ಸರ್ಜನ್ ಡಾ.ರಿಜ್ವಾನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆ ಮುಂದಾದ್ರೂ ಆದ್ರೆ ಪೋಷಕರು ಯಾವುದಕ್ಕೂ ಬಗ್ಗಲಿಲ್ಲ. ನವಜಾತ ಶಿಶುವಿನ ಸಾವಿಗೆ ಕಾರಣವಾಗಿರುವ ವೈದ್ಯೆ ಡಾ.ಪಲ್ಲವಿಯನ್ನ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.
ಭಾರತವನ್ನು ಸಂಪೂರ್ಣ ಹಿಂದುತ್ವ ಶಾಲೆಯಾಗಿ ಪರಿವರ್ತಿಸಬೇಕಿದೆ: ಸಿ.ಟಿ.ರವಿ
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ, ಜಿಲ್ಲಾ ಸರ್ಜನ್ ಡಾ.ರಿಜ್ವಾನಾ ವೈದ್ಯೆ ಪಲ್ಲವಿ 10 ಸಾವಿರಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಕೇಳಿ ಬಂದಿದೆ. ಆರೋಪಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ನಾನು ನಮ್ಮ ವೈದ್ಯರನ್ನ ಕೇಳಿದಾಗ ಅವರು ನಾನು ದುಡ್ಡು ಕೇಳಿಲ್ಲ ಅಂತಾ ಹೇಳ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಕಲೆಹಾಕಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಈಗಾಗಲೇ ಡಿಪಾರ್ಟ್ಮೆಂಟ್ ತನಿಖೆ ಆರಂಭವಾಗಿದೆ. ಆಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.