ಹಾಸನ [ಫೆ.07]:  ರಾಜ್ಯದಲ್ಲಿ ಮರಳು ಲೂಟಿ ತಪ್ಪಿಸಿ ಸುವ್ಯವಸ್ಥಿತವಾಗಿ ಮರಳು ವಿತರಣೆ ಮಾಡುವ ದೃಷ್ಟಿಯಿಂದ ತೆಲಂಗಾಣ ಮಾದರಿಯ ಮರಳು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ಬಜೆಟ್ ಪೂರ್ವದಲ್ಲೇ ಮುಖ್ಯ ಮಂತ್ರಿಗಳೊಡನೆ ಚರ್ಚಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಜೀವಶಾಸ್ತ್ರ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಪರಿಸರ ಸ್ನೇ ಹಿ ವ್ಯವಸ್ಥೆ ಜಾರಿಗೆ ತರಲು ಯೋಜಿಸಿದ್ದು. ಅದಕ್ಕೆ ಪೂರಕವಾಗಿ ಸರಣಿ ಸಭೆ ನಡೆಸಲಾಗಿದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಕಟ್ಟುನಿಟ್ಟಿ ನ ಸೂಚನೆ ನೀಡಲಾಗಿದೆ ಎಂದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಪ್ರಕರಣ ದಾಖಲಿಸಿ, ದಂಡ ಹಾಕಲಾಗುತ್ತಿದೆ.  3 ನೇಬಾರಿಗೆ ಸಿಕ್ಕದಲ್ಲಿ ವಾಹನಗಳನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುವುದು ಎಂದರು.

ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್...

ಇಲಾಖೆಗೆ ಹೊಸದೊಂದು ಆಯಾಮ ನೀಡಲು ಮುಂದಾಗಿದ್ದು, ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲ ಲೂಟಿಕೋರರ ವಶವಾಗದಂತೆ ಕ್ರಮವಹಿಸಲಾಗುತ್ತಿದೆ.ತಪ್ಪು ಮರಳು ನೀತಿಯಿಂದ ಹೆಚ್ಚಿನ ದರಕ್ಕೆ ನೀಡುವಂತಾಗಿದೆ ಎಂದರು. ಜಿಲ್ಲೆಯಲ್ಲಿ ಆನೆ ಹಾವಳಿ ಹೆಚ್ಚಾಗಿದೆ, ಇದರಿಂದ ಜೀವಹಾನಿ ಹಾಗೂ ರೈತರ ಬೆಳೆ ಹಾನಿಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೇಲಿ ನಿರ್ಮಿಸಲು ಮೂರು ವರ್ಷದಲ್ಲಿ 400 ಕೋಟಿ ರು.ಗಳ ಯೋಜ ನೆ ರೂಪಿಸಲಾಗಿದೆ. ಈಗಾಗಲೇ 100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು. 

ಇಲ್ಲಿನ ಸ್ಟಾಲ್ ಗಳಲ್ಲಿ ಖೋಟಾ ನೋಟುಗಳದ್ದೇ ಹಾವಳಿ : ವ್ಯಾಪಾರಸ್ಥರು ಕಂಗಾಲು...

ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ ಎಂದ ಅವರು, ಬೇಲಿ ನಿರ್ಮಿಸುವುದರಿಂದ ರೈತರಿಗೆ ಸಹಕಾರಿಯಾಗಲಿದೆ. ಆನೆ ಕಾರಿಡಾರ್ ಯೋಜನೆ ಜಾರಿ ಪ್ರಯತ್ನವೂ ಪ್ರಗತಿಯಲ್ಲಿದೆ ಎಂದರು.