ರಾಮನಗರದ ಜಲದಾಹ ನೀಗಿಸಲಿದೆ ನೆಟ್ಕಲ್ ಯೋಜನೆ!
ಜಿಲ್ಲಾ ಕೇಂದ್ರವಾದ ರೇಷ್ಮೆನಗರಿ ರಾಮನಗರದ ಪ್ರತಿ ಮನೆಗೆ ಕಾವೇರಿ ನೀರು ಪೂರೈಸುವ ನೆಟ್ಕಲ್ ಕುಡಿಯುವ ನೀರಿನ ಯೋಜನೆ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ದಶಕಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಆ.20): ಜಿಲ್ಲಾ ಕೇಂದ್ರವಾದ ರೇಷ್ಮೆನಗರಿ ರಾಮನಗರದ ಪ್ರತಿ ಮನೆಗೆ ಕಾವೇರಿ ನೀರು ಪೂರೈಸುವ ನೆಟ್ಕಲ್ ಕುಡಿಯುವ ನೀರಿನ ಯೋಜನೆ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ದಶಕಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ. 2018-19ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನೆಟ್ಕಲ್ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. 2022ರೊಳಗೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಕೊರೋನಾ ಕಾರಣ ವಿಳಂಬವಾಯಿತು. ಐದು ವರ್ಷಗಳ ಬಳಿಕ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಈಗ ಹಾಲಿ ಶಿಂಷಾ ನದಿ ನೀರನ್ನು ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ)ಯಿಂದ ರಾಮನಗರ ಮತ್ತು ಚನ್ನಪಟ್ಟಣ ಎರಡೂ ನಗರಗಳಿಗೆ 18 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ರಾಮನಗರಕ್ಕೆ ಕೇವಲ 6 - 7 ಎಂಎಲ್‌ಡಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಆದರೀಗ 1.40 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲಾ ಕೇಂದ್ರ ರಾಮನಗರಕ್ಕೆ 18 ರಿಂದ 20 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ವೃಷಭಾವತಿ, ಅರ್ಕಾವತಿ, ಕಾವೇರಿ ಜಲಮೂಲ ಹಾಗೂ ಕೊಳವೆ ಬಾವಿಗಳ ಮೂಲ ಸೇರಿ ಕೇವಲ 12 ಎಂಎಲ್‌ಡಿಯಷ್ಟುನೀರಿನ ಲಭ್ಯತೆ ಮಾತ್ರ ಇದೆ.
ತಮಿಳುನಾಡಿನ ಹೊಸೂರು ಉದ್ಧಾರ ಆಗಲು ಎಚ್‌ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್
ದೂರದೃಷ್ಟಿಯ ಯೋಜನೆ: ಮುಂದಿನ 30 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಾಮನಗರಕ್ಕಾಗಿ ಪ್ರತ್ಯೇಕವಾಗಿ ನೆಟ್ಕಲ್ ಯೋಜನೆ ರೂಪಿಸಲಾಗಿದೆ. ಇದರ ಯೋಜನಾ ವೆಚ್ಚ 456 ಕೋಟಿ ರುಪಾಯಿಗಳಾಗಿದೆ. ಈ ಯೋಜನೆ ಜಾರಿಯಾದ ಮೇಲೆ ಹಾಲಿ ಯೋಜನೆಯನ್ನು ಚನ್ನಪಟ್ಟಣಕ್ಕೆ ಸೀಮಿತಗೊಳಿಸುವ ಚಿಂತನೆ ನಡೆದಿದೆ. ಕನಕಪುರ ಮತ್ತು ಮಳವಳ್ಳಿ ಗಡಿ ಪ್ರದೇಶದಲ್ಲಿರುವ ನೆಟ್ಕಲ್(ಬ್ಯಾಲೆನ್ಸಿಂಗ್ ರಿಸವ್‌ರ್ ವೈರ್) ಸಮತೋಲನ ಜಲಾಶಯದಿಂದ ರಾಮನಗರ ಸುಮಾರು 68 ಕಿ.ಮೀ ದೂರದಲ್ಲಿದೆ. ನೆಟ್ಕಲ್ ಜಲಾಶಯಕ್ಕೆ ಶಿವ ಸಮುತೋಲನ ಜಲಾಶಯದಿಂದ ನೀರು ಹರಿದು ಬರಲಿದೆ. ಆನಂತರ ನೆಟ್ಕಲ್ ಜಲಾಶಯದಿಂದ ಗುರುತ್ವಾಕರ್ಷಣೆ ಬಲದ ಆಧಾರದಲ್ಲಿ 10 ಕಿ.ಮೀ. ದೂರದ ಟಿ.ಕೆ.ಹಳ್ಳಿಯಲ್ಲಿರುವ ಶುದ್ಧೀಕರಣ ಘಟಕಕ್ಕೆ ಬೃಹತ್ ಗಾತ್ರದ ಪೈಪ್‌ಲೈನ್ ಮೂಲಕ ಹರಿಯಲಿದೆ.
ಟಿ.ಕೆ.ಹಳ್ಳಿಯಲ್ಲಿ ಸಂಸ್ಕರಿಸಿದ ನೀರನ್ನು ಸದ್ಯಕ್ಕೆ 800 ಎಚ್‌ಪಿನಲ್ಲಿ ಪಂಪ್ ಮಾಡುವ ಮೂಲಕ ಗುರುವಿನಪುರ ಮತ್ತು ಅಲ್ಲಿಂದ ಅರಳಾಲುಸಂದ್ರದವರೆಗೆ 29 ಕಿ.ಮೀ ಉದ್ದದ 813 ಎಂಎಂ ಅಳತೆಯ ಬೃಹತ್ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಅರಳಾಳುಸಂದ್ರದಲ್ಲಿ 37 ಎಂಎಲ್‌ಡಿ ಸಾಮಥ್ಯರ್ದ ನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದ್ದು, ಅಲ್ಲಿಂದ ರಾಮನಗರಕ್ಕೆ ಪೈಪ್‌ಲೈನ್ ಮೂಲಕ ತಂದ ನೀರನ್ನು ಕೊತ್ತಿಪುರ 200 ಲಕ್ಷ ಮತ್ತು ಬೋಳಪ್ಪನಹಳ್ಳಿ 100 ಲಕ್ಷ ಲೀಟರ್ ನೀರು ಬಳಿ ನಿರ್ಮಿಸಿರುವ ಟ್ಯಾಂಕ್ ಗಳಲ್ಲಿ ಸಂಗ್ರಹವಾಗಲಿದೆ. ಅಲ್ಲಿಂದ ರಾಮನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಆಗಲಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕನಸಿನ ಕೂಸಾಗಿರುವ ನೆಟ್ಕಲ್ ಯೋಜನೆಯನ್ನು ಕಾರ್ಯಗತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ , ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಕಾರ್ಯಗತವಾದರೆ 2024ರ ಜನವರಿ ತಿಂಗಳಿಂದಲೇ ರಾಮನಗರ ಜನರ ಕುಡಿಯುವ ನೀರಿನ ಬವಣೆ ನೀಗಲಿದ್ದು, ದಿನದ 24 ಗಂಟೆಯೂ ನೀರು ಪೂರೈಕೆಯಾಗಲಿದೆ.
2050ರ ವೇಳೆಗೆ 62 ಎಂಎಲ್‌ಡಿಗೆ ಹೆಚ್ಚಳ!: ನೆಟ್ಕಲ್ ಕುಡಿಯುವ ನೀರಿನ ಯೋಜನೆ ಸದ್ಯಕ್ಕೆ 25 ಎಂಎಲ್‌ಡಿ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ. 2050ರ ವೇಳೆಗೆ ಇದೇ ಯೋಜನೆಯನ್ನು 62 ಎಂಎಲ್‌ಡಿಗೆ ಹೆಚ್ಚಳ ಮಾಡಿಕೊಳ್ಳಲು ಅವಕಾಶವಿದೆ. 2ಸಾವಿರ ಎಚ್‌ಪಿ ವರೆಗೂ ನೀರನ್ನು ಪಂಪ್ ಮಾಡಬಹುದಾಗಿದೆ. ಅಲ್ಲದೆ, ಪೈಪ್ ಲೈನ್ ಹಾದು ಹೋಗಿರುವ ಮಾರ್ಗ ಮಧ್ಯದಲ್ಲಿನ ಚನ್ನಪಟ್ಟಣದ 12 ಹಳ್ಳಿಗಳಿಗೂ ನೀರು ಪೂರೈಕೆಯಾಗಲಿದೆ.
ನೈಸ್ ಜತೆ ಡಿಕೆ ಸಹೋದರರ ವ್ಯವಹಾರ ದಾಖಲೆಗಳಿವೆ: ಮಾಜಿ ಶಾಸಕ ಮಂಜುನಾಥ್ ಆರೋಪ
ಈಗ ವಾರಕ್ಕೊಮ್ಮೆ ನೀರು!: ಪ್ರಸ್ತುತ ರಾಮನಗರ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಸರಾಸರಿ 4ರಿಂದ 5 ದಿನಕ್ಕೊಮ್ಮೆ ಜಲ ಮಂಡಳಿ ನೀರು ಸರಬರಾಜು ಮಾಡುತ್ತಿದೆ. ಕೆಲವೊಮ್ಮೆ 15 ದಿನಗಳಿಗೊಮ್ಮೆ ನೀರು ಪೂರೈಸುತ್ತಿದೆ. ಟಿ.ಕೆ.ಹಳ್ಳಿ ಜಲಾಶಯದಿಂದ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ 18 ಎಂಎಲ್ ಡಿ ನೀರು ಸರಬರಾಜು ಆಗುತ್ತಿದೆ. ರಾಮನಗರಕ್ಕೆ ನೀರು ಕೊರತೆ ಇರುವ ಕಾರಣ 1 ರಿಂದ 10ನೇ ವಾರ್ಡುಗಳಿಗೆ ಅರ್ಕಾವತಿ ನದಿ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ.