ನೈಸ್ ಜತೆ ಡಿಕೆ ಸಹೋದರರ ವ್ಯವಹಾರ ದಾಖಲೆಗಳಿವೆ: ಮಾಜಿ ಶಾಸಕ ಮಂಜುನಾಥ್ ಆರೋಪ
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನೈಸ್ ಕಂಪನಿ ಜೊತೆ ಯಾವ ವ್ಯವಹಾರವೂ ನಡೆದಿಲ್ಲ. ಇನ್ನು ನೀವು ಆ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿಯಿಂದ ಎನ್‌ಒಸಿ ಪಡೆದು ರಿಜಿಸ್ಟರ್ ಮಾಡಿಸಿಕೊಂಡಿರುವ ಹಾಗೂ ಷೇರ್ ಹೋಲ್ಡರ್ ಆಗಿರುವ ದಾಖಲೆಗಳಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ ಮಾಡಿದರು.
ರಾಮನಗರ (ಆ.19): ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನೈಸ್ ಕಂಪನಿ ಜೊತೆ ಯಾವ ವ್ಯವಹಾರವೂ ನಡೆದಿಲ್ಲ. ಇನ್ನು ನೀವು ಆ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿಯಿಂದ ಎನ್‌ಒಸಿ ಪಡೆದು ರಿಜಿಸ್ಟರ್ ಮಾಡಿಸಿಕೊಂಡಿರುವ ಹಾಗೂ ಷೇರ್ ಹೋಲ್ಡರ್ ಆಗಿರುವ ದಾಖಲೆಗಳಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಕಂಪನಿಯೊಂದಿಗೆ ಡಿಕೆ ಸಹೋದರರು ಹೇಗೆ ಸೇರಿಕೊಂಡರು. ಇಬ್ಬರ ನಡುವೆ ಎಲ್ಲೆಲ್ಲಿ, ಏನೆಲ್ಲ ವ್ಯವಹಾರ ನಡೆದಿದೆ ಎಂಬುದರ ದಾಖಲೆಗಳಿವೆ.
ಸಹೋದರರು ಒಪ್ಪಿಗೆ ನೀಡಿದರೆ ಅದೆಲ್ಲವನ್ನು ಬಹಿರಂಗ ಪಡಿಸುತ್ತೇವೆ. 1994-96ನೇ ಸಾಲಿನಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದ್ದು ಸತ್ಯ. ನಾವೇನು ಇಲ್ಲ ಅನ್ನುತ್ತಿಲ್ಲ. ಆದರೆ, ಒಪ್ಪಂದ ಸರಿಯಿಲ್ಲ ಎಂದು ಹೋರಾಟ ಮಾಡಿ ಅದನ್ನು ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇ ಹೋರಾಟ ಮಾಡಿ ನ್ಯಾಯಾಲಯದ ಮಟ್ಟಕ್ಕೆ ಹೋಗುವಂತೆ ಮಾಡಿದರು. ಆದರೀಗ ನೀವೇಕೆ ವಕಾಲತ್ತು ವಹಿಸುತ್ತಿದ್ದೀರಿ. ನೀವು ಆ ಕಂಪನಿಯೊಂದಿಗೆ ಪಾಟ್ನರ್ ಶಿಪ್ ತೆಗೆದುಕೊಂಡಿರುವುದು ಜನರು ಮತ್ತು ಸರ್ಕಾರಕ್ಕೂ ಗೊತ್ತಿದೆ. ಯಾರು ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ ಎಂದು ಹೇಳಿದರು.
ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಿಂದ ಸರ್ಕಾರದ ಇಮೇಜ್ ಹೆಚ್ಚಳ: ಬಸವರಾಜ ಹೊರಟ್ಟಿ
ನೈಸ್ ವಿಚಾರದಲ್ಲಿ ಡಿಕೆ ಸೋದರರಿಗೆ ಆಗಿಲ್ಲದ ಕಾಳಜಿ ಈಗೇಕೆ ಬಂದಿದೆ. ತಮ್ಮ ಪಟಾಲಂ ಬಿಟ್ಟು ಭೂ ಪರಿಹಾರ ಪಡೆದುಕೊಳ್ಳಿ, ಇಲ್ಲದಿದ್ದರೆ ಕೋರ್ಟಿನಲ್ಲಿ ಡಿಪಾಸಿಟ್ ಮಾಡುತ್ತೇವೆ. ಜಾಗ ಖಾಲಿ ಮಾಡಿಸುತ್ತೇವೆಂದು ರೈತರ ಮೇಲೆ ಒತ್ತಡ ಹೇರಿ ಧಮಕಿ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಡದಿಯಲ್ಲಿ ಕೆಐಎಡಿಬಿರವರು ಎಕರೆಗೆ 1.30 ಕೋಟಿ ಕೊಡುತ್ತಾರೆ. ಕೆಂಗೇರಿ, ಕುಂಬಳಗೂಡ ಬಳಿ 4ರಿಂದ 6 ಕೋಟಿ ಬೆಲೆ ಬಾಳುವ ಜಮೀನಿಗೆ 46ರಿಂದ 56 ಲಕ್ಷ ಭೂ ಪರಿಹಾರ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ಅಷ್ಟೊಂದು ಕಡಿಮೆ ಪರಿಹಾರ ಪಡೆಯಲು ಅಲ್ಲಿನ ರೈತರು ಏನು ಪಾಪ ಮಾಡಿದ್ದಾರೆ.
ನೀವು ರೈತರನ್ನು ಉದ್ಧಾರ ಮಾಡಲು ಬಂದಿದ್ದೀರಿ. ನಿಮ್ಮದೆ ಸರ್ಕಾರ ಇದೆ. ರೈತರಿಗೆ ಮಾರುಕಟ್ಟೆಬೆಲೆ ಕೊಡಿಸಿ ನಿಮ್ಮ ಸಾಮಥ್ಯರ್ ಪ್ರದರ್ಶಿಸಿ. ನಿಮಗು ನೈಸ್‌ಗೂ ಸಂಬಂಧ ಇಲ್ಲದ್ದಿದರೆ ನೀವೇಕೆ ರೈತರನ್ನು ಬಲವಂತ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ನೈಸ್ ರಸ್ತೆ ಯೋಜನೆ ಕಾಲದಲ್ಲಿ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ.ಶಿವಕುಮಾರ್ರವರು ಸಚಿವರಾಗಿದ್ದರು. ಕುಮಾರಸ್ವಾಮಿ ಸರ್ಕಾರದಲ್ಲಿಯೂ ಸಚಿವರಾಗಿದ್ದರು. ಈ ಬಗ್ಗೆ ನೀವು ಎಂದಾದರು ಸಂಸತ್ತಿನಲ್ಲಿ, ನಿಮ್ಮಣ್ಣ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಹೋರಾಟ ಮಾಡಿದ್ದೀರಾ.
ಈಗ ಕುಮಾರಸ್ವಾಮಿಯವರು ನೈಸ್ ಅಕ್ರಮ ವರದಿಯನ್ನು ಪ್ರಧಾನಿಯವರಿಗೆ ಒಪ್ಪಿಸುತ್ತೇನೆ ಎಂದು ಹೇಳಿರುವುದರಲ್ಲಿ ತಪ್ಪೇನಿದೆ. ಕೇಂದ್ರ ಸರ್ಕಾರ ತನಿಖೆ ಮಾಡಿಸುವುದಾದರೆ ಮಾಡಿಸಲಿ ನಿಮಗೇಕೆ ಭಯ ಎಂದು ಡಿಕೆ ಸಹೋದರರನ್ನು ಪ್ರಶ್ನೆ ಮಾಡಿದರು. ನೈಸ್ ರಸ್ತೆ ಹೋಗುವ ಭಾಗದಲ್ಲಿ ನೀವು ಜಮೀನು ಖರೀದಿಸಿರುವುದು, ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಬಳಿ ಎನ್‌ಒಸಿ ಪಡೆದು ರಿಜಿಸ್ಟರ್ ಮಾಡಿಸಿಕೊಂಡಿರುವ ದಾಖಲೆಗಳಿವೆ. ನಿಮ್ಮ ಹುಳುಕನ್ನು ಮುಚ್ಚಿಕೊಳ್ಳಲು ನಮ್ಮ ನಾಯಕರ ವಿರುದ್ಧ ಮಾತನಾಡಿದರೆ ಸಹಿಸಿಕೊಳ್ಳಲು ಆಗಲ್ಲ ಎಂದರು.
ಮೂಲಭೂತ ಸೌಲಭ್ಯವಿಲ್ಲದೆ ಮಂಕಾದ ಮಲೆನಾಡ ಕುಗ್ರಾಮ: ಮನನೊಂದ ಗ್ರಾಮಸ್ಥರಿಂದ ಪ್ರಧಾನಿ ಮೋದಿಗೆ ಪತ್ರ
ನೈಸ್ ಜೊತೆ ಕುಮಾರಸ್ವಾಮಿರವರಿಗೆ ವ್ಯವಹಾರ ನಡೆದಿದೆ ಅಂತ ಹೇಳಿದ್ದೀರಿ. ಯಾವ ವ್ಯವಹಾರ ನಡೆದಿತ್ತು ಎಂಬುದನ್ನು ಬಹಿರಂಗ ಪಡಿಸಿ ನೋಡೋಣ. ಈಗ ಯಾವ ವ್ಯವಹಾರ ನಡೆಯುತ್ತಿದೆ ಎಂಬುದರ ದಾಖಲೆ ಇದೆ. ಅದನ್ನು ಬೇಕಾದರೆ ನಾನು ಬಹಿರಂಗ ಪಡಿಸುತ್ತೇವೆ ಎಂದು ಎ.ಮಂಜುನಾಥ್ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರಾಜಶೇಖರ್, ರೈಡ್ ನಾಗರಾಜ್, ನರಸಿಂಹಮೂರ್ತಿ, ದೊರೆಸ್ವಾಮಿ, ಶಿವಲಿಂಗಯ್ಯ, ವೆಂಕಟೇಶ್ , ಸುಗ್ಗನಹಳ್ಳಿ ರಾಮಕೃಷ್ಣಯ್ಯ ಇದ್ದರು.