ರಾಜ್ಯದಲ್ಲಿ ಎನ್‌ಇಪಿ ಜಾರಿ ಮಾಡುವುದಿಲ್ಲ: ಸಚಿವ ಮಧು ಬಂಗಾರಪ್ಪ

ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಒಪ್ಪುವ ಮಾತೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ೨೯ ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ೧೨ ಹಾಸಿಗೆಗಳ ಐಸೋಲೇಷನ್ ವಾರ್ಡ್ ನ್ನು ಉದ್ಘಾಟನೆ ಮಾಡಿದ ನಂತರ ಪತ್ರಕರ್ತರೂಡನೆ ಮಾತನಾಡಿದ ಅವರು, ನಮ್ಮ ಮಕ್ಕಳ ಭವಿಷ್ಯದ ಹಿತರಕ್ಷಣೆ ನಮಗೆ ಮುಖ್ಯ ಎಂದರು.

NEP will not be implemented in the state Says Minister Madhu Bangarappa gvd

ಮಾಲೂರು (ಮಾ.07): ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಒಪ್ಪುವ ಮಾತೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ೨೯ ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ೧೨ ಹಾಸಿಗೆಗಳ ಐಸೋಲೇಷನ್ ವಾರ್ಡ್ ನ್ನು ಉದ್ಘಾಟನೆ ಮಾಡಿದ ನಂತರ ಪತ್ರಕರ್ತರೂಡನೆ ಮಾತನಾಡಿದ ಅವರು, ನಮ್ಮ ಮಕ್ಕಳ ಭವಿಷ್ಯದ ಹಿತರಕ್ಷಣೆ ನಮಗೆ ಮುಖ್ಯ ಎಂದರು.

ಲಗಾಮು ಹಿಡಿಯಲು ಕೇಂದ್ರದ ಯತ್ನ: ಪ್ರತಿ ರಾಜ್ಯವು ತನ್ನದೇ ಆದ ಸಂಸ್ಕೃತಿ, ಭಾಷೆ, ಪದ್ಧತಿ ಹೊಂದಿವೆ. ಶಿಕ್ಷಣವು ಸ್ಥಳೀಯ ಸಂಸ್ಕೃತಿಗೆ ಹೊಂದುವಂತಿರಬೇಕು. ಇಲ್ಲಿನ ಸಂಸ್ಕೃತಿಯನ್ನು ಉತ್ತರ ಪ್ರದೇಶದ ಶಿಕ್ಷಣದಲ್ಲಿ ಆಳವಡಿಸಿದರೆ ಏನು ಪ್ರಯೋಜನ ಅಲ್ವವೇ ಎಂದ ಸಚಿವರು, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ನಮ್ಮ ಲಗಾಮು ಹಿಡಿಯುವ ಪ್ರಯತ್ನ ಮಾಡುತ್ತಿದೆ. ಅವರ ನಿಯಂತ್ರಣಕ್ಕೆ ನಾವು ಸಿಗುವುದಿಲ್ಲ ಎಂದರು.

ನಮ್ಮ ಸರ್ಕಾರದಿಂದ ಮಹಿಳೆಯರ ಸುರಕ್ಷತೆಗೆ ಆದ್ಯತೆ: ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಪೂರ್ತಿಯಾಗಿದ್ದು, ಅದನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲ್ಲೇ ಆಳವಡಿಸಲು ಜಿ.ಓ.ಮಾಡಲಾಗಿದೆ. ಪಠ್ಯ ಪರಿಷ್ಕರಣೆಯಲ್ಲಿ ಸಮಿತಿ ತೀರ್ಮಾನದಂತೆ ಸಲ್ಪ ಮಟ್ಟಿನ ಬದಲಾವಣೆ ತಂದಿದ್ದು, ನಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದರು.

ಮೇಲ್ಮನವಿ ಸಲ್ಲಿಸಲು ಸಿದ್ಧತೆ: ರಾಜ್ಯ ಉಚ್ಚ ನ್ಯಾಯಲಯವು ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಜಾರಿ ತಂದಿದ್ದ ಕೆಲವು ಹಂತದ ಬೋರ್ಡ್ ಎಕ್ಸಾಂ ಅನ್ನು ರದ್ದು ಪಡಿಸಿರುವ ಬಗ್ಗೆ ಪ್ರತಿಕ್ರಿಸಿದ ಸಚಿವರು, ತಾವು ಪ್ರವಾಸದಲ್ಲಿದ್ದು, ಈ ಬಗ್ಗೆ ಬೆಳಿಗ್ಗೆ ತಿಳಿಯಿತು. ಅದೆನೂ ದೊಡ್ಡ ವಿಷಯ ಅಲ್ಲ. ಮಕ್ಕಳಿಗೆ ಬೋರ್ಡ್ ಎಕ್ಸಾಂ ಬಗ್ಗೆ ಧೈರ್ಯ ಸಿಗಲಿ ಎಂಬ ಉದ್ದೇಶದಿಂದ ಬೋಡ್ ಎಕ್ಸಾಂ ಜಾರಿಗೆ ತರಲಾಗಿತ್ತು. ಅದರಲ್ಲಿ ಎಲ್ಲ ಮಕ್ಕಳು ಪಾಸ್ ಮಾಡುವ ವ್ಯವಸ್ಥೆ ಸಹ ಇತ್ತು. ಈ ಬಗ್ಗೆ ಅಫೀಲ್ ಹೋಗುವುದಾಗಿ ತಿಳಿಸಿದರು.

ರಾಜ್ಯದಲ್ಲಿ ತೀವ್ರ ಬರಗಾಲ ಕಾಡುತ್ತಿದ್ದು. ಕೇಂದ್ರ ಸರ್ಕಾರದ ಅಸಹಕಾರ ನಡುವೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಶಾಸಕ ನಂಜೇಗೌಡರು ಜನರ ಮಧ್ಯೆ ಬಾಳುತ್ತಿರುವ ಶಾಸಕರಾಗಿದ್ದು, ಮುಂದಿನ ನಾಲ್ಕು ವರ್ಷದಲ್ಲಿ ಪಟ್ಟಣದಲ್ಲಿ ಮಾದರಿ ಬಸ್ ನಿಲ್ದಾಣ, ೨ ಕಿ.ಮೀ.ಉದ್ದದ ಮೇಲ್ಸೇತುವೆ, ಸುಸಜ್ಜಿತ ಆಸ್ಪತ್ರೆ ಸೇರಿದಂತೆ ಹಲಾವರು ಅಭಿವೃದ್ಧಿ ಕಾಮಗಾರಿ ಮಾಡಿ ತೋರಿಸಲಿದ್ದಾರೆ ಎಂದರು.

ಆಸ್ಪತ್ರೆಗೆ ಮುಂದಿನ ಬಜೆಟ್‌ನಲ್ಲಿ ಹಣ: ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ಇಲ್ಲಿನ ಆಸ್ಪತ್ರೆಯು ೬೦ ವರ್ಷದ ಹಿಂದಿನ ಕಟ್ಟಡವಾಗಿದೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಯಲ್ಲೇ ಕೋಲಾರದ ಎಸೆನಾರ್ ಬಿಟ್ಟರೆ ಎರಡನೇ ಅತಿ ಹೆಚ್ಚು ಹೊರರೋಗಿಗಳು ನಿತ್ಯ ಭೇಟಿ ನೀಡುತ್ತಿದ್ದು, ಮೂಲಭೂತ ಸೌಕರ್ಯ ಇಲ್ಲದೆ ಕ್ಷೇತ್ರದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ,ಆರೋಗ್ಯ ಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಮುಂದಿನ ಬಜೆಟ್‌ನಲ್ಲಿ ಖಂಡಿತವಾಗಿ ಪಟ್ಟಣದಲ್ಲಿ ನೂತನ ಸಾರ್ವಜನಿಕ ಆಸ್ವತ್ರೆಗೆ ಹಣ ಮೀಸಲಿಡುವುದಾಗಿ ತಿಳಿಸಿದ್ದಾರೆ ಎಂದರು.

ಬಿಎಸ್‌ವೈ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್‌ ಸ್ಫೋಟಗಳಾಗಿರಲಿಲ್ಲವೆ?: ಸಚಿವ ಸಂತೋಷ್‌ ಲಾಡ್‌

ಎಂ.ಎಲ್.ಸ್ಸಿ. ಆನಿಲ್ ಕುಮಾರ್,ತಹಸೀಲ್ದಾರ್ ರಮೇಶ್,ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್ ಬಾಬು,ಸಾರ್ವಜನಿಕ ಆಸ್ವತ್ರೆ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್, ಡಾ.ಶ್ರೀನಿವಾಸ್,ಡಾ.ರಾಮಕೃಷ್ಣಯ್ಯ,ಡಾ.ಮಧುಸೂಧನ್,ಡಾ.ರಾಮ್ ನರೇಶ್,ಪುರಸಭೆ ಉಪಾಧ್ಯಕ್ಷೆ ಭಾರತಮ್ಮ ಶಂಕರಪ್ಪ, ಸದಸ್ಯರಾದ ಮಯರಳಿಧರ್, ಇನ್ನಿತರರು ಇದ್ದರು.

Latest Videos
Follow Us:
Download App:
  • android
  • ios