Asianet Suvarna News Asianet Suvarna News

ನೆಲಮಂಗಲ ಕುಟುಂಬದ ಆತ್ಮಹತ್ಯೆ ಕೇಸ್ : ಸರ್ಕಾರಕ್ಕೆ ಸಾರಾ ಪತ್ರ

  • ನೆಲಮಂಗಲ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ
  •  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ  ಶಾಸಕ ಸಾ ರಾ ಮಹೇಶ್ ಪತ್ರ
Nelamangala family suicide Case Sa ra mahesh writes letter to Govt snr
Author
Bengaluru, First Published Oct 3, 2021, 11:53 AM IST
  • Facebook
  • Twitter
  • Whatsapp

 ಬೆಂಗಳೂರು (ಅ.03):  ನೆಲಮಂಗಲ (Nelamangala ) ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ  ಶಾಸಕ ಸಾ ರಾ ಮಹೇಶ್ (SaRa Mahesh) ಪತ್ರ ಬರೆದಿದ್ದಾರೆ.

ಮೈಸೂರಿನ (Mysuru) ಕೆ ಆರ್ ನಗರ ಶಾಸಕ ಸಾ ರಾ ಮಹೇಶ್ ಮೃತರ ಕುಟುಂಬಕ್ಕೆ ಬಾಕಿಯಿರುವ ಪರಿಹಾರ ಶೀಘ್ರ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮಾಸ್‌ ಸೂಸೈಡ್... ದೊಡ್ಡ ಸಾಕ್ಷ್ಯ.. ಶಂಕರ್ ಮತ್ತು ಅಳಿಯ ಪೊಲೀಸರ ವಶಕ್ಕೆ

ಪತ್ರದಲ್ಲಿ ಪ್ರಕರಣದ ಸಂಪೂರ್ಣ ವಿವರ ನೀಡಿದ ಸಾ ರಾ ಮಹೇಶ್, ಕೋವಿಡ್‌ನಿಂದ (Covid) ಮೃತಪಟ್ಟಿದ್ದ ಪ್ರಸನ್ನ ಕುಮಾರ್ ಅವರ ಕುಟುಂಬಕ್ಕೆ ಪರಿಹಾರ ಸಕಾಲದಲ್ಲಿ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದ್ದರೆ ಅಮಾಯಕ ಜೀವಗಳು ಉಳಿಯುತ್ತಿದ್ದವು. ಈ ಕೂಡಲೇ ಬಾಕಿಯಿರುವ ಹಣ ಕೊಡಿಸಿ. ಜೊತೆಗೆ ಬಿಪಿಎಲ್ ಕುಟುಂಬದವರಿಗೆ ನೀಡುವ 1 ಲಕ್ಷ ಪರಿಹಾರವನ್ನು ನೀಡಿ ಎಂದಿದ್ದಾರೆ.

ಒಂದು ಕಡೆ ಪ್ರಾಮಾಣಿಕ ನೌಕರರು ಈ ರೀತಿ ಬಲಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಕೆಲವು ಭ್ರಷ್ಟ ನೌಕರರು ಪ್ರತಿನಿತ್ಯ ಹಣ ಲೂಟಿ ಮಾಡುತ್ತಿದ್ದಾರೆ. ಪ್ರಾಮಾಣಿಕ ನೌಕರರ ಹಿತ ಕಾಯುತ್ತಿಲ್ಲ ಎಂದು ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜೆಡಿಎಸ್ (JDS) ಶಾಸಕ ಸಾ ರಾ ಮಹೇಶ್.

ಮಕ್ಕಳೊಂದಿಗೆ ಆತ್ಮಹತ್ಯೆ

ಪತಿ ಸಾವಿನಿಂದ ಮನನೊಂದು ಇಬ್ಬರ ಮಕ್ಕಳ ಜತೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಹೊರವಲಯದ ನೆಲಮಂಗಲದಲ್ಲಿ ನಡೆದಿತ್ತು. ತೋಟದ ಗುಡ್ಡದಹಳ್ಳಿ ಹತ್ತಿರದ ಪ್ರಕೃತಿ ಲೇಔಟ್‌ನ ವಸಂತ(40), ಯಶವಂತ್‌ (15) ಹಾಗೂ ನಿಶ್ಚಿತಾ (8) ಮೃತ ದುರ್ದೈವಿಗಳು. ಮನೆಯಲ್ಲಿ ತನ್ನ ಇಬ್ಬರು ಮಕ್ಕಳ ಜತೆ ವಸಂತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮನೆಗೆ ಸಂಬಂಧಿಕರು ರಾತ್ರಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಿಎಂಟಿಸಿ(BMTC) ಚಾಲಕ ಕಂ ನಿರ್ವಾಹಕರಾಗಿದ್ದ ವಸಂತ ಅವರ ಪತಿಯು ಕಳೆದ ವರ್ಷ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಇದರಿಂದ ಖಿನ್ನತೆಗೊಳಗಾಗಿದ್ದ ಅವರು, ಈ ಯಾತನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಾಸ್‌ ಸೂಸೈಡ್... ದೊಡ್ಡ ಸಾಕ್ಷ್ಯ.. ಶಂಕರ್ ಮತ್ತು ಅಳಿಯ ಪೊಲೀಸರ ವಶಕ್ಕೆ

ಒಂದೇ ಫ್ಯಾನ್‌ಗೆ ಮಗಳು ನಿಶ್ಚಿತಾ ಜತೆ ವಸಂತ ನೇಣು ಹಾಕಿಕೊಂಡಿದ್ದರೆ, ಯಶವಂತ್‌ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಂಭತ್ತು ತಿಂಗಳ ಗಂಡು ಮಗು ಕೊಂದು ಪತ್ರಕರ್ತ ಶಂಕರ್‌ ಕುಟುಂಬದ ಪತ್ನಿ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ದುರಂತ ಮರೆಯುವ ಮುನ್ನವೇ ನಗರದ ಹೊರ ವಲಯದಲ್ಲಿ ತಾಯಿ ಮತ್ತು ಮಕ್ಕಳ ಆತ್ಮಹತ್ಯೆ ಘಟನೆ ನಡೆದಿದೆ.

Follow Us:
Download App:
  • android
  • ios