ಜನರ ರಕ್ಷಣೆಗೆ ಹೋದ NDRF ಸಿಬ್ಬಂದಿಯೇ ನೀರಲ್ಲಿ ಮಿಸ್...

ಸಂತ್ರಸ್ತರ ರಕ್ಷಣೆಗೆ ಬಂದು ಅಪಾಯದಲ್ಲಿ ಸಿಲುಕಿದ NDRF ಸಿಬ್ಬಂದಿ| ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿದ NDRF ತಂಡದ ಬೋಟ್| ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಜನರ ರಕ್ಷಣೆ ವೇಳೆ ಘಟನೆ| ತುಂಗಭದ್ರಾ ನದಿ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ನಡುಗಡ್ಡೆಯಾದ ವಿರುಪಾಪುರ ಗಡ್ಡೆ 

NDRF staffs who went to rescue flood victims in Virupanagadde in Koppal flown away and missed

ಕೊಪ್ಪಳ[ಆ.12]: ಆಶ್ಲೇಷ ಮಳೆಯಬ್ಬರಕ್ಕೆ ಕನ್ನಡಿಗರು ತತ್ತರಿಸಿದ್ದಾರೆ. ಮನೆ, ಜಾನುವಾರುಗಳನ್ನು ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಅನೇಕರು ಇನ್ನೂ ಸುರಕ್ಷಿತ ಪ್ರದೇಶಕ್ಕೆ ತೆರಳಲಾಗದೆ ಪ್ರವಾಹದಲ್ಲಿ ಸಿಲುಕಿಕೊಂಡು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಹೀಗಿರುವಾಗ ವಾಯುಪಡೆ, NDRF ಸೇರಿದಂತೆ ಅನೇಕ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯ್ಕಕಿಳಿದಿದ್ದಾರೆ. ಆದರೀಗ ಕೊಪ್ಪಳದಲ್ಲಿ ಜನರ ರಕ್ಷಣೆಯಲ್ಲಿ ತೊಡಗಿದ್ದ NDRF ಸಿಬ್ಬಂದಿಯೇ ಬಂದು ಅಪಾಯದಲ್ಲಿ ಸಿಲುಕಿದ್ದಾರೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಜನರ ರಕ್ಷಣೆ ವೇಳೆ ಈ ಘಟನೆ ನಡೆದಿದೆ. ತುಂಗಭದ್ರಾ ನದಿ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ  ವಿರುಪಾಪುರಗಡ್ಡೆಯಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಅಲ್ಲಿ ಸಿಲುಕಿದ್ದ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ NDRF ತಂಡದ ಬೋಟ್ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೋಟ್ ನಲ್ಲಿ ಐವರು ಸಿಬ್ಬಂದಿಗಳಿದ್ದು, ಎಲ್ಲರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಐವರಿಗೂ ಸುರಕ್ಷಾ ಕವಚವಿದೆ ಎಂದು ತಿಳಿದು ಬಂದಿದೆ. ಕೊಚ್ಚಿ ಹೋದವರಲ್ಲಿ ಮೂವರು ಮರವೊಂದನ್ನು ಹಿಡಿದು ಬದುಕಿಕೊಂಡಿದ್ದರೆ, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ

ಸದ್ಯ ಮತ್ತೊಂದು ತಂಡ ಕೊಚ್ಚಿ ಹೋದ ಐವರ ರಕ್ಷಣೆಗೆ NDRF ಸದಸ್ಯರ ಹುಡುಕಾಟಕ್ಕೆ ಮುಂದಾಗಿದೆ. ಸುರಕ್ಷಾ ಕವಚವಿರುವುದರಿಂದ ಇವರೆಲ್ಲರೂ ಬದುಕಿ ಬರುವ ಭರವಸೆ ಇದೆ. 
 

Latest Videos
Follow Us:
Download App:
  • android
  • ios