ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ
ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿನಲ್ಲಿ ಶರನ್ನವರಾತ್ರಿಯ ಅದ್ದೂರಿ ಆಚರಣೆ, ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದೆ. ಶೃಂಗೇರಿಯ ಶಾರದಾ ಪೀಠದಲ್ಲಿ ಶಾರದಾದೇವಿ ವೃಷಭ ವಾಹನ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದ್ರೆ ಹೊರನಾಡಿನಲ್ಲಿ ಅನ್ನಪೂಣೇಶ್ವರಿ, ಸಿಂದರೂಢಾ ಚಂದ್ರಘಂಟಾ ರೂಪದಲ್ಲಿ ಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಾಳೆ.
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿನಲ್ಲಿ ಶರನ್ನವರಾತ್ರಿಯ ಅದ್ದೂರಿ ಆಚರಣೆ, ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದೆ. ಶೃಂಗೇರಿಯ ಶಾರದಾ ಪೀಠದಲ್ಲಿ ಶಾರದಾದೇವಿ ವೃಷಭ ವಾಹನ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದ್ರೆ ಹೊರನಾಡಿನಲ್ಲಿ ಅನ್ನಪೂಣೇಶ್ವರಿ, ಸಿಂದರೂಢಾ ಚಂದ್ರಘಂಟಾ ರೂಪದಲ್ಲಿ ಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಾಳೆ.
ಶಾರದಾದೇವಿಗೆ ವೃಷಭ ವಾಹನ ಅಲಂಕಾರ
ನವರಾತ್ರಿಯ (Navaratri) ಮೂರನೇ ದಿನವಾದ ಇಂದು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿಯ (Shrungeri) ಶಾರದಾದೇವಿಯು ವೃಷಭ ವಾಹನ ಅಲಂಕಾರದಲ್ಲಿ ಅಂದರೆ ಮಾಹೇಶ್ವರಿ ಅಲಂಕಾರದಲ್ಲಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ . ವೃಷ ಎಂದರೆ ಪುಣ್ಯ, ಕೈಯಲ್ಲಿ ತ್ರಿಶೂಲ ಧರಿಸಿ ವೃಷಭ ವಾಹನದ ಮೇಲೆ ಚಂದ್ರಕಲಾ ವಿಭೂಷಿತಳಾಗಿ ಅಲಂಕೃತಗೊಂಡಿರುವ ಮಹೇಶ್ವರನ ಅರ್ಧಾಂಗಿ ದೇವಿಯು ಭಕ್ತರಿಗೆ ಪುಣ್ಯ ಲಭಿಸುವಂತೆ ಅನುಗ್ರಹಿಸುತ್ತಾಳೆ ಎಂಬ ಪ್ರತೀತಿಯಿದೆ. ಜಗನ್ಮಾತೆ ಶಾರದೆಯ ಪ್ರತಿದಿನದ ಅಲಂಕಾರವನ್ನು ನೋಡುವ ಸಲುವಾಗಿ ಅನೇಕ ಸಂಖ್ಯೆಯಲ್ಲಿ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಪ್ರತಿದಿನ ಸಂಜೆ ಶೃಂಗೇರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಕ್ತರು ಭಜನಾ ತಂಡಗಳ ಜೊತೆಗೆ ಸಂಜೆ ರಾಜಬೀದಿ ಉತ್ಸವದಲ್ಲಿ ಭಾಗಿಯಾಗುತ್ತಿದ್ದು, ಉತ್ಸವದ ನಂತರದಲ್ಲಿ ದೇವಿಗೆ ಪೂಜೆ ನೆರವೇರುತ್ತದೆ. ನಂತರ ದೇಗುಲದಲ್ಲಿ ದರ್ಬಾರ್ ಕಾರ್ಯಕ್ರಮ ಜರುಗುತ್ತದೆ.
ನವರಾತ್ರಿ ವಿಷಯಕ್ಕೆ ಗುಜರಾತಿಗಳು ಪ್ರತಿಭಟನೆ ಮಾಡ್ಬೋದು; ಆನಂದ್ ಮಹೀಂದ್ರಾ ಹೀಗಂದಿದ್ದೇಕೆ?!
ಸಿಂಹರೂಢಾಳಾದ ಹೊರನಾಡ ಅನ್ನಪೂರ್ಣೇಶ್ವರಿ
ನವರಾತ್ರಿಯ ಮೂರನೆಯ ದಿನ ಶ್ರೀ ಕ್ಷೇತ್ರ ಹೊರನಾಡಿನ (Horanadu) ಅನ್ನಪೂರ್ಣೇಶ್ವರಿಯು ಸಿಂಹರೂಢಾ ಚಂದ್ರಘಂಟಾ ರೂಪದಲ್ಲಿ ಅಲಂಕಾರಗೊಂಡಿದ್ದಾಳೆ. ಬೆಳಗ್ಗೆ ಸಪ್ತಶತಿ ಪಾರಾಯಣ,ವೇದ ಪಾರಾಯಣ, ಸುಂದರ ಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪುರುಷ ಸೂಕ್ತ ಹೋಮ ನಡೆದಿದೆ. ದೇವಿಯು ಸಿಂಹರೂಢಾ ಚಂದ್ರಘಂಟಾ ಸ್ವರೂಪವೂ ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ದ ಚಂದ್ರನಿದ್ದಾನೆ. ದೇವಿಯ ವಾಹನ ಸಿಂಹವಾಗಿದೆ. ಇದರಿಂದಲೆ ದೇವಿಯನ್ನು ಸಿಂಹರೂಢ ಚಂದ್ರಘಂಟಾ ಎಂದು ಹೇಳಲಾಗುತ್ತದೆ. ದೇವಿಯ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ ದೇವರಿಗೆ ಹತ್ತು ಕೈಗಳಿದ್ದೂ ಹತ್ತೂ ಕೈಗಳಲ್ಲಿ ಖಡ್ಗ ಶಸ್ತ್ರಗಳು ಹಾಗೂ ಬಾಣ ಇತ್ಯಾದಿ ಅಸ್ತ್ರಗಳು ವಿಭೂಷಿತವಾಗಿದೆ. ಮುದ್ರೆಯು ಯುದ್ದಕ್ಕಾಗಿ ಹೊರಟಂತಿದೆ.
Navratri 2022: ಬೆಂಗಳೂರಿನ ಈ ದೇವಿ ದೇವಾಲಯಗಳಿಗೆ ಭೇಟಿ ತಪ್ಪಿಸ್ಬೇಡಿ!
ಇಂದು ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಂ.ಬಿ. ಶಾಂತ ಕುಮಾರಿ ಮೈಸೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಮತ್ತು ಭಕ್ತಿಗೀತೆ ಸಂಜೆ ವಿಭಾ ದಿವಾಕರ್ ತಂಡ ಬೆಂಗಳೂರು ಇವರಿಂದ ಭರತನಾಟ್ಯ (Baratanatyam) ನಡೆಯಿತು. ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ನಡೆದ ಶ್ರೀ ಪುರುಷಸೂಕ್ತ ಹೋಮದ ಪೂರ್ಣಾಹುತಿಯನ್ನು ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.