ಶಿವಮೊಗ್ಗ(ಮಾ.19): ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ಭಯೋತ್ಪಾದಕರ ಮನೆಗಳನ್ನ ತಪಾಸಣೆ ನಡೆಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಮತೀನ್ ಹಾಗೂ ಸಾಜಿದ್ ಎಂಬ ಶಂಕಿತ ಭಯೋತ್ಪಾದಕರ ಮನೆಗಳನ್ನ ರಾಷ್ಟ್ರೀಯ ತನಿಖಾ ದಳ ತಪಾಸಣೆ ನಡೆಸಿದೆ. 

ಇಂದು ಬೆಳಿಗ್ಗೆ 6 ಗಂಟೆಯಿ೦ದ 9ರ ವರೆಗೆ ರಾಷ್ಟ್ರೀಯ ತನಿಖಾ ದಳ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ. ಕೇಂದ್ರ ತನಿಖಾ ತ೦ಡ ಮತ್ತು ಶಿವಮೊಗ್ಗ ತನಿಖಾ ತ೦ಡ, ತೀರ್ಥಹಳ್ಳಿ ಪೊಲೀಸ್ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಒಟ್ಟು 8 ವಾಹನಗಳಲ್ಲಿ ಆಗಮಿಸಿ ಇಬ್ಬರು ಶ೦ಕಿತ ಟೆರೆರಿಸ್ಟ್‌ಗಳ ಮನೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತೀರ್ಥಹಳ್ಳಿ ಪಟ್ಟಣದ ಮೀನು ಮಾರ್ಕೆಟ್ ರಸ್ತೆಯಲ್ಲಿರವ ಎರಡೂ ಮನೆಗಳನ್ನ ರಹಸ್ಯವಾಗಿ ಪರಿಶೀಲನೆ ನಡೆಸಿ ರಾಷ್ಟ್ರೀಯ ತನಿಖಾ ದಳ ತೆರಳಿದೆ ಎಂದು ತಿಳಿದು ಬಂದಿದೆ.