ಉಡುಪಿ: ಚಪ್ಪಲಿ ಸಂಗ್ರಹ ಅಭಿಯಾನಕ್ಕೆ ಭೇಷ್ ಎಂದ ಬಿ.ಎಲ್. ಸಂತೋಷ್..!
ದಾನದಲ್ಲಿ ದೊಡ್ಡ ದಾನ ಯಾವುದು ಅಂದ್ರೆ ಕೆಲವರು ಅನ್ನದಾನ ಅಂತಾರೆ. ಮತ್ತೆ ಕೆಲವರು ನೇತ್ರದಾನ ರಕ್ತದಾನ ಅಂತ ಹೇಳ್ತಾರೆ. ಈ ಎಲ್ಲಾ ದಾನಗಳ ನಡುವೆ ಉಡುಪಿಯಲ್ಲೊಂದು ಸ್ಪೆಷಲ್ ದಾನ ಮಾಡುವ ಕ್ಯಾಂಪೇನ್ ನಡೆಯಲಿದೆ. ಡೊನೇಟಿಂಗ್ ವಾಕ್ಸ್ ಇದರ ಹೆಸರು. ಅಂದ್ರೆ ಚಪ್ಪಲಿ ದಾನ.
ಉಡುಪಿ(ನ.07): ನಾವು ಎಷ್ಟೇ ಮುಂದುವರಿದಿದ್ದೇವೆ ಬಡತನ ಅನ್ನೋದು ಇನ್ನೂ ಜೀವಂತವಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಭಾರತೀಯರು ಪಾರಮ್ಯ ಮೆರೆಯುತ್ತಿದ್ದಾರೆ. ದೇಶ ಎಷ್ಟೇ ಅಭಿವೃದ್ಧಿಯಾಗುತ್ತಿದ್ದರೂ, ಬಡತನ ಮಾತ್ರ ಹಾಗೆಯೇ ಮುಂದುವರೆದಿದೆ. ದೇಶದ 35 ಲಕ್ಷ ಜನಕ್ಕೆ ಕಾಲಿಗೆ ಚಪ್ಪಲಿ ಇಲ್ವಂತೆ. ಪಾದರಕ್ಷೆ ರಹಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಉಡುಪಿಯಲ್ಲಿ ನಡಿಗೆ ಅಭಿಯಾನ ಆರಂಭವಾಗಿದೆ.
ದಾನದಲ್ಲಿ ದೊಡ್ಡ ದಾನ ಯಾವುದು ಅಂದ್ರೆ ಕೆಲವರು ಅನ್ನದಾನ ಅಂತಾರೆ. ಮತ್ತೆ ಕೆಲವರು ನೇತ್ರದಾನ ರಕ್ತದಾನ ಅಂತ ಹೇಳ್ತಾರೆ. ಈ ಎಲ್ಲಾ ದಾನಗಳ ನಡುವೆ ಉಡುಪಿಯಲ್ಲೊಂದು ಸ್ಪೆಷಲ್ ದಾನ ಮಾಡುವ ಕ್ಯಾಂಪೇನ್ ನಡೆಯಲಿದೆ. ಡೊನೇಟಿಂಗ್ ವಾಕ್ಸ್ ಇದರ ಹೆಸರು. ಅಂದ್ರೆ ಚಪ್ಪಲಿ ದಾನ.
ಉಡುಪಿ ಪೇಜಾವರ ಶ್ರೀಗಳಿಗೆ ಪಿತೃವಿಯೋಗ, ಉತ್ತರ ಭಾರತ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥರು
ಉಡುಪಿಯ ಈವೆಂಟ್ ಪ್ಲ್ಯಾನರ್, ಆಂಕರ್ ಅವಿನಾಶ್ ಕಾಮತ್ ವಿನೂತನ ಕಾನ್ಸೆಪ್ಟ್ ರೆಡಿ ಮಾಡಿದ್ದಾರೆ. ಈಗಾಗಲೇ ಉಡುಪಿಯಲ್ಲಿ ಪ್ರಚಾರ ಶುರು ಮಾಡಿರುವ ಅವಿನಾಶ್, ಬೇರೆ ಸಂಘ ಸಂಸ್ಥೆಗಳನ್ನು ಭೇಟಿಯಾಗುತ್ತಿದ್ದಾರೆ. ಬಳಕೆ ಮಾಡಿದ ಸುಮಾರು 10 ಸಾವಿರ ಜೊತೆ ಪಾದರಕ್ಷೆಗಳನ್ನು ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ. ನವೆಂಬರ್ 29,30 ಮತ್ತು ಡಿಸೆಂಬರ್ 1ರಂದು ಚಪ್ಪಲಿ ಸಂಗ್ರಹ ಅಭಿಯಾನ ನಡೆಯಲಿದೆ.
ಮುಂಬೈನ ಗ್ರೀನ್ ಸೋಲ್ ಫೌಂಡೇಶನ್ ಈ ಅಭಿಯಾನಕ್ಕೆ ಸಹಾಯ ಮಾಡಲಿದೆ. ಶ್ರೇಯಾಂಸ್ ಭಂಡಾರಿ ಮತ್ತು ರಮೇಶ್ ಧಾಮಿ ಗೆಳೆಯರು. ಕ್ರೀಡಾಪಟುಗಳಾಗಿರುವ ಅವರು, ಗ್ರೀನ್ ಸೋಲ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಬಳಸಿದ ಕ್ರೀಡಾ ಪಾದರಕ್ಷೆಯಿಂದ ಹೊಸ ಪಾದರಕ್ಷೆಯನ್ನು ತಯಾರು ಮಾಡಿ ಬಡ ಮಕ್ಕಳಿಗೆ ದಾನ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಸಂಗ್ರಹಿಸಿದ ಚಪ್ಪಲಿಗಳನ್ನು ಮುಂಬೈಯ ಸಂಸ್ಥೆಗೆ ರವಾನೆ ಮಾಡಲಾಗುತ್ತದೆ. ಅಲ್ಲಿ ಹೊಸ ಪಾದರಕ್ಷೆಯಾಗಿ ಮಾರ್ಪಾಟು ಮಾಡಲಾಗುತ್ತದೆ. ಉಡುಪಿಯಲ್ಲಿ ರಾಜ್ಯದ ಮೊದಲ ಡೊನೇಶನ್ ಡ್ರೈವ್ ನಡೆಯಲಿದೆ. ಮೂರು ದಿನ ಕಾಲೇಜು ಆವರಣದಲ್ಲಿ ಪಾದರಕ್ಷೆ ಸಂಗ್ರಹವಾಗಲಿದೆ. ಪಾದ ರಕ್ಷೆ ಕೊಡಿ -ನಡಿಗೆ ಜೊತೆ ಸೆಲ್ಫಿ ತೆಗೆಯಿರಿ ಎಂಬ ಥೀಮ್ ಇರಿಸಿಕೊಳ್ಳಲಾಗಿದೆ.
ಉಡುಪಿ: ಗೃಹಿಣಿ ಯುಪಿಎಸ್‌ಸಿ ತೇರ್ಗಡೆ, ಪುಟ್ಟ ಮಗುವಿನ ತಾಯಿಯ ದೊಡ್ಡ ಸಾಧನೆ..!
ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ಪಾದರಕ್ಷೆ ಸಂಗ್ರಹಿಸಲಾಗುತ್ತದೆ. ಶ್ರೇಯಾಂಸ್ ಭಂಡಾರಿ ರಮೇಶ್ ಧಾಮಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ ಬಿಜೆಪಿ ಪ್ರಮುಖರಾದ ಬಿ.ಎಲ್.ಸಂತೋಷ್ ಅವರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಸುಮಾರು 150 ವಿದ್ಯಾರ್ಥಿಗಳಿಗೆ ಹೊಸ ಪಾದರಕ್ಷೆಗಳನ್ನು ಅಂದೇ ಕೊಡಿಸಲಾಗುತ್ತದೆ. ಮನೆ ಶುಚಿತ್ವದ ಜೊತೆ ದಾನ ಮಾಡಿದ ಪುಣ್ಯ ಕಟ್ಟಿಕೊಳ್ಳಿ ಅಂತ ಉಡುಪಿ ಜನಕ್ಕೆ ಕರೆ ನೀಡಲಾಗಿದೆ. ಕಸದ ಬುಟ್ಟಿಗೆ ಎಸೆದು ಪರಿಸತ ಕಲುಷಿತ ಆಗೋದನ್ನು ತಪ್ಪಿಸಲು ಇಂತಹ ಅಭಿಯಾನ ದೇಶದ ರಾಜ್ಯದ ಅಲ್ಲಲ್ಲಿ ನಡೆಯಬೇಕು.