ಉಡುಪಿ ಪೇಜಾವರ ಶ್ರೀಗಳಿಗೆ ಪಿತೃವಿಯೋಗ, ಉತ್ತರ ಭಾರತ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥರು
ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತೀರ್ಥರೂಪರೂ, ಹಿರಿಯ ಸಂಸ್ಕೃತ ಮತ್ತು ತುಳು ಭಾಷಾ ವಿದ್ವಾಂಸ, ಶತಾಯುಷಿ ಅಂಗಡಿಮಾರು ಕೃಷ್ಣ ಭಟ್ಟರು ವಯೋಸಹಜ ಅಸ್ವಾಸ್ಥ್ಯದಿಂದ ನಿಧನರಾಗಿದ್ದಾರೆ.
ಉಡುಪಿ (ನ.6): ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತೀರ್ಥರೂಪರೂ , ಹಿರಿಯ ಸಂಸ್ಕೃತ ಮತ್ತು ತುಳು ಭಾಷಾ ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ರಾತ್ರಿ ವಯೋಸಹಜ ಅಸ್ವಾಸ್ಥ್ಯದಿಂದ ನಿಧನರಾಗಿದ್ದಾರೆ ಅವರಿಗೆ 105 ವರ್ಷ ವಯಸ್ಸಾಗಿತ್ತು ತುಳು ಭಾಷೆಯ ಸೌರ ಪಂಚಾಂಗವನ್ನು ಅತ್ಯಂತ ಶ್ರದ್ಧೆಯಿಂದ ಅನೇಕ ವರ್ಷಗಳಿಂದ ರಚಿಸಿ ಪ್ರಕಟಿಸುತ್ತಿದ್ದರು .
ಸಂಪ್ರದಾಯ ಸದಾಚಾರ ನಿಷ್ಠರೂ ಅಪಾರ ದೈವಭಕ್ತರೂ ಆಗಿದ್ದ ಅವರಿಗೆ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಮಠಾಧೀಶರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ . ಐವರು ಸುಪುತ್ರರು ಮತ್ತು ಆರು ಪುತ್ರಿಯರನ್ನು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ನರಸಿಂಹ ಸ್ವಾಮಿ ದರ್ಶನ ಪಡೆದು ಬೀದರ್ ಜಿಲ್ಲೆಯ ಪ್ರವಾಸ ಆರಂಭಿಸಿದ ಸಚಿವ ಎಚ್.ಕೆ.ಪಾಟೀಲ್
ಉತ್ತರ ಭಾರತ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥರು:
ದೆಹಲಿಯಲ್ಲಿ ಇತ್ತೀಚಿಗಷ್ಟೇ ತಮ್ಮ 60ನೇ ವರ್ಷದ ಷಷ್ಟ್ಯಬ್ದ ಕಾರ್ಯಕ್ರಮಗಳನ್ನು ಪೂರೈಸಿದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ತೀರ್ಥಕ್ಷೇತ್ರಗಳ ಸಂದರ್ಶನ ಕೈಗೊಂಡಿದ್ದಾರೆ. ತೀರ್ಥರೂಪರು ಅಸುನೀಗಿರುವ ವಿಚಾರ ತಿಳಿದು, ಅಲ್ಲಿಂದಲೇ ಸಂತಾಪ ಹೇಳಿದ್ದಾರೆ. ಪರಂಪರೆಯಲ್ಲಿ ಸ್ವಾಮೀಜಿಯೊಬ್ಬರು ತಾನು ಸನ್ಯಾಸ ಸ್ವೀಕರಿಸಿದ ನಂತರ ಕೇವಲ, ಜನ್ಮ ನೀಡಿದ ತಾಯಿಯ ಜೊತೆ ಕರುಳಬಳ್ಳಿಯ ಸಂಬಂಧ ಮುಂದುವರಿಸಲು ಅವಕಾಶವಿದೆ. ಹೆತ್ತ ತಾಯಿಗೆ ಮಾತ್ರ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಪದ್ಧತಿ ಇದೆ. ಉಳಿದಂತೆ ಕುಟುಂಬದಿಂದ ಪ್ರತ್ಯೇಕಗೊಳ್ಳುವ ಕಟುವಾದ ನಿಷ್ಠೆ ಮುಂದುವರೆದಿದೆ.
ಕೆಇಎ ಪರೀಕ್ಷೆ ಬ್ಲೂಟೂತ್ ಅಕ್ರಮ ಪೊಲೀಸರಿಗೆ ಮಹತ್ವದ ಸುಳಿವು, ಯಾರು ಈ ಸರ್ಕಾರ್
ಸಂತಾಪ: ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರು ,ಪಲಿಮಾರು ಉಭಯಶ್ರೀಗಳು ,ಶ್ರೀ ಸೋದೆ ಶ್ರೀಗಳು, ಕಾಣಿಯೂರು ಶ್ರೀ ,ಭಂಡಾರಕೆರೆ ಶ್ರೀಗಳು , ಮೂಡಬಿದ್ರೆ ಜೈನ ಮಠಾಧೀಶರು , ವಜ್ರದೇಹಿ ಸ್ವಾಮೀಜಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ,ಶಾಸಕರಾದ ಯಶ್ಪಾಲ್ ಸುವರ್ಣ ಗುರ್ಮೆ ಸುರೇಶ ಶೆಟ್ಟಿ , ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ ರಘುಪತಿ ಭಟ್ , ಪೇಜಾವರ ಮಠದ ಆಡಳಿತ ವರ್ಗ , ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಮೊದಲಾದವರು ಶ್ರೀ ಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.