ಯಾದಗಿರಿ: ಬಸಸಾಗರಕ್ಕೆ ಭೇಟಿ ನೀಡುತ್ತಿರುವ 2ನೇ ಪ್ರಧಾನಿ ಮೋದಿ
ಸ್ಕಾಡಾ ತಂತ್ರಜ್ಞಾನ ಯೋಜನೆ ಉದ್ಘಾಟನೆ, ಜಲಧಾರೆ ಯೋಜನೆಗೆ ಅಡಿಗಲ್ಲು, ಬಸವಸಾಗರ ಜಲಾಶಯಕ್ಕೆ ಭೇಟಿ ನೀಡುತ್ತಿರುವ 2ನೇ ಪ್ರಧಾನಿ ಮೋದಿ, 1964ರಲ್ಲಿ ದಿ. ಲಾಲಬಹದ್ದೂರ್ ಶಾಸ್ತ್ರೀ ಜಲಾಶಯ ನಿರ್ಮಾಣ ಅಡಿಗಲ್ಲು ನೇರವೇರಿಸಿದ್ದರು.
ಬಸವರಾಜ ಎಂ. ಕಟ್ಟಿಮನಿ/ಅನಿಲ್ ಬಿರಾದಾರ್
ಹುಣಸಗಿ/ಕೊಡೇಕಲ್(ಜ.17): ಸ್ಕಾಡಾ ಗೇಟ್‌ಗಳ ಉದ್ಘಾಟನೆ ಮತ್ತು 2054 ಕೋಟಿ ರು.ಗಳ ಮಂಜೂರಾಗಿರುವ ಜಲಧಾರೆ ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜ.19 ರಂದು ಯಾದಗಿರಿ ಜಿಲ್ಲೆ ಹುಣಸಗಿ ರಾಲೂಕಿನ ಕೊಡೇಕಲ್ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕೊಡೇಕಲ್ ಹೊರವಲಯದ ನಾರಾಯಣಪುರ-ಹುಣಸಗಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸ್ಥಳ ನಿಗದಿಪಡಿಸಿದ್ದು, ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಥಮ ಬಾರಿಗೆ ಮೋದಿ ಅವರು ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದ್ದು, ಅದರಲ್ಲೂ ಸುರಪುರ ಶಾಸಕ ನರಸಿಂಹನಾಯಕ (ರಾಜೂಗೌಡ) ಅವರ ಸ್ವಗ್ರಾಮಕ್ಕೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಜನತೆಯ ಉತ್ಸಾಹಕ್ಕೆ ಕಾರಣವಾಗಿದೆ.
ಸ್ಕಾಡಾ ತಂತ್ರಜ್ಞಾನ ಎಂದರೇನು?
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಹಿನ್ನೆಲೆ ದೇಶದಲ್ಲಿ ಮೊದಲ ಬಾರಿಗೆ ಕೃಷ್ಣಾ ಕಾಡಾ ವ್ಯಾಪ್ತಿ ಸ್ಕಾಡಾ ತಂತ್ರಜ್ಞಾನ ಅಳವಡಿಸಲಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯ ಕಂಟ್ರೋಲ್ ರೂಂನಲ್ಲಿ ಅಳವಡಿಸಲಾಗಿರುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ ತಂತ್ರಜ್ಞಾನದಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನಗತ್ಯ ನೀರು ಪೋಲಾಗದಂತೆ ಮತ್ತು ಎಲ್ಲರಿಗೂ ಸಮಾನವಾಗಿ ನೀರು ತಲುಪಿಸುವಲ್ಲಿ ಈ ನೂತನ ತಂತ್ರಜ್ಞಾನದ ಯೋಜನೆ ಇದಾಗಿದೆ. ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ.
ಪ್ರಪ್ರಥಮ ಬಾರಿಗೆ ಯಾದಗಿರಿಗೆ ಪಿಎಂ ನರೇಂದ್ರ ಮೋದಿ ಆಗಮನ: ಸ್ಕಾಡಾ ಗೇಟ್ ಉದ್ಘಾಟನೆ
ಬರಪೀಡಿತ ಪ್ರದೇಶದಲ್ಲಿ ಹರಿಯುವ ಕೃಷ್ಣೆಗೆ ಆಣೆಕಟ್ಟು ನಿರ್ಮಿಸಿ ನೀರಾವರಿ ಸೌಲಭ್ಯ ಒದಗಿಸಬೇಕು, ಜನರ ಬದುಕು ಬದಲಿಸಬೇಕು ಎಂಬ ಉದ್ದೇಶದಿಂದ ಕೃಷ್ಣಾ ಮೇಲ್ದಂಡೆ ಯೋಜನೆಗೆ 1964 ರಲ್ಲಿ ಅಂದಿನ ಪ್ರಧಾನಿ ದಿ. ಲಾಲ್ ಬಹಾದ್ದೂರ ಶಾಸ್ತ್ರೀಯವರು ಅಡಿಗಲ್ಲು ಹಾಕಿದ್ದರು.
ಜಲಾಶಯಕ್ಕೆ ಭೇಟಿ ನೀಡುತ್ತಿರುವ 2ನೇ ಪ್ರಧಾನಿ:
ಬಸವಸಾಗರದ ಜಲಾಶಯದ ಅಡಿಗಲ್ಲನ್ನು 1964ರಲ್ಲಿ ದಿ. ಲಾಲ ಬಹದ್ದೂರ ಶಾಸ್ತ್ರೀ ನೇರವೇರಿಸಿದ ಬಳಿಕ, 59ವರ್ಷದ ನಂತರ ನಾರಾಯಣಪುರದ ಬಸವಸಾಗರ ಜಲಾಶಯದ ಸ್ಕಾಡಾ ತಂತ್ರಜ್ಞಾನದ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಸವಸಾಗರ ಜಲಾಶಯಕ್ಕೆ ಬೇಟಿ ನೀಡುತ್ತಿರುವ 2ನೇ ಪ್ರಧಾನಿ ಮಂತ್ರಿಗಳಾಗಲಿದ್ದು ಇದೊಂದು ಮಹತ್ತರ ಮೈಲುಗಲ್ಲಾಗಲಿದೆ.
PSI Recruitment Scam: ಪಿಎಸ್ಐ ಮರುಪರೀಕ್ಷೆ ರದ್ದತಿ ಕೋರಿದ್ದ ಅರ್ಜಿ ಕೆಎಟಿಯಿಂದ ವಜಾ
ಸ್ಕಾಡಾ ಗೇಟ್‌ಗಳ ಮಾಹಿತಿ:
ಸ್ಕಾಡಾ ಸ್ವಯಂಚಾಲಿತ ಗೇಟುಗಳು ಜಿಪಿಎಸ್ ಮಾದರಿ ತಂತ್ರಜ್ಞಾನವನ್ನು ಅಳವಡಿಸಿ ನಾರಾಯಣಪೂರ ಎಡದಂತೆ ಕಾಲುವೆ ಮೇಲಿನ 25 ಸಂಖ್ಯೆ ವಿತರಣಾ ಕಾಲುವೆ ಗೇಟುಗಳು ಹಾಗೂ ಹುಣಸಗಿ ಶಾಖಾ ಕಾಲುವೆ ಮೇಲಿನ 5 ಸಂಖ್ಯೆ ವಿತರಣಾ ಕಾಲುವೆ ಗೇಟ್ 335 ಸಂಖ್ಯೆ ಲ್ಯಾಟರಲ್/ಡಿಪಿಓ ಗೇಟುಗಳಿಗೆ ಸ್ಕಾಡಾ ಯಾಂತ್ರೀಕೃತ ಸ್ವಯಂಚಾಲಿತ ಗೇಟ್‌ಗಳನ್ನು ನಾರಾಯಣಪೂರದ ಮುಖ್ಯ ಸ್ಕಾಡಾ ಕೇಂದ್ರದಿಂದ ಕಾರ್ಯಚರಣೆ ಮಾಡಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ರೈತರ ಮಾಹಿತಿ ಕಿಯೋಸ್ಕ್ ಯಂತ್ರ:
ಅಣೆಕಟ್ಟು ಪ್ರದೇಶದ ಸುಮಾರು 2.78 ಲಕ್ಷ ರೈತರ ಮಾಹಿತಿ, ಕಾಲುವೆ ಜಗದ ಮುಂಗಾರು/ಹಿಂಗಾರು ಹಂಗಾಮಿಗೆ ನೀರು ಹರಿಸುವ ಅವಧಿ ಮತ್ತು ಅಧಿಸೂಚನೆ ಮಾಹಿತಿ, ರೈತರು ಈ ಯಂತ್ರದ ಮುಖಾಂತರ ನೀರಿನ ಬೇಡಿಕೆ ಸಲ್ಲಿಸುವ ಅವಕಾಶ, ರೈತರು ಬೆಳೆದ ಬೆಳೆಗಳಿಗೆ ನೀರಿನ ಕರ ದಾಖಲೆ, ಹವಾಮಾನ ವರದಿ, ಆಣೆಕಟ್ಟು ಪ್ರದೇಶದ 2.78 ಲಕ್ಷ ಸರ್ವೇ ನಂಬರಗಳ ಮಣ್ಣಿನ ಮಾದರಿ ಪರೀಕ್ಷಾ ವರದಿ, ರೈತರು ಇದರ ಸಹಾಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾಹಿತಿ ಕಲೆಹಾಕಬಹುದಾಗಿದೆ.