ಪ್ರಪ್ರಥಮ ಬಾರಿಗೆ ಯಾದಗಿರಿಗೆ ಪಿಎಂ ನರೇಂದ್ರ ಮೋದಿ ಆಗಮನ: ಸ್ಕಾಡಾ ಗೇಟ್ ಉದ್ಘಾಟನೆ
ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಕಾಡಾ ಗೇಟ್ ಅಳವಡಿಕೆ ಮಾಡಲಾಗಿರುವ ನಾರಾಯಣಪುರದ ಬಸವಸಾಗರ ಜಲಾಶಯದ ಸ್ಕಾಡಾ ಗೇಟ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲು ಪ್ರಪ್ರಥಮ ಬಾರಿಗೆ ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಜ.11): ರೈತರು ಬೆಳೆ ಬೆಳೆಯಲು ಸರಿಯಾಗಿ ನೀರು ಬೇಕು. ನೀರಿದ್ದರೆ ಮಾತ್ರ ರೈತ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯ ಹಾಗಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲಾ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸಲು ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಕಾಡಾ (SCADA) ತಂತ್ರಜ್ಞಾನದ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮದ ಎಡದಂಡೆ ಕಾಲುವೆಗಳಿಗೆ ಗೇಟ್ ಗಳನ್ನು ಅಳವಡಿಸಲಾಗಿದೆ. ಸ್ಕಾಡಾ ತಂತ್ರಜ್ಞಾನ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜ.19 ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮಕ್ಕೆ ಆಗಮಿಸಲಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ನಾರಾಯಣಪುರದ ಬಸವಸಾಗರ ಜಲಾಶಯವನ್ನು ಯಾದಗಿರಿ, ವಿಜಯಪುರ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ರೈತರ ಜೀವನಾಡಿ ಆಗಿದೆ. ಈ ನಾಲ್ಕು ಜಿಲ್ಲೆಯ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯಾದ ಸ್ಕಾಡಾ ಗೇಟ್ ಗಳನ್ನು ಅಳವಡಿಕೆ ಮಾಡಿದೆ. ಜೊತೆಗೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ (Multi village Drinking water plan) ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪಿಎಂ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಪಿಎಂ ಮೋದಿ ಉದ್ಘಾಟನೆ ಸಮಾವೇಶಕ್ಕೆ ಅಧಿಕಾರಿಗಳ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮೋ ಆಗಮನಕ್ಕೆ ಗಿರಿನಾಡು ಯಾದಗಿರಿ ಸಜ್ಜಾಗುತ್ತಿದೆ.
ಆಸೆಯಿರುವ ಹಿರಿಯರನ್ನೇ ಸಚಿವರನ್ನಾಗಿಸಿ: ಶಾಸಕ ರಾಜೂಗೌಡ
'ಸ್ಕಾಡಾ' ದಿಂದ ರೈತರ ಸಮರ್ಪಕ ನೀರು ಹರಿವು:
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯವು (Narayanapura Basavasagara dam) ಎಡ ಮತ್ತು ಬಲದಂಡೆಯ ಕಾಲುವೆಗಳನ್ನು ಹೊಂದಿದೆ. ಡ್ಯಾಂ. ಜಲಾಶಯದ ಎಡದಂಡೆ ಕಾಲುವೆಯ ಮೂಲಕ ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. ಸರ್ಕಾರ ಈ ಹಿಂದೆ ಸಾಮಾನ್ಯ ಗೇಟ್ ಗಳನ್ನು ಅಳವಡಿಕೆ ಮಾಡಿತ್ತು. ಆದ್ರೆ ಸಾಮಾನ್ಯ ಗೇಟ್ ಗಳ ಸರಿಯಾದ ಸಮಯಕ್ಕೆ ಸಮರ್ಪಕ ನೀರು ಒದಗಿಸಲು ಆಗುತ್ತಿರಲಿಲ್ಲ. ಇದರಿಂದ ರೈತರು ಹಗಲು ರಾತ್ರಿ ಎನ್ನದೇ ತಮ್ಮ ಜೀವ ಸವೆಸುವಂತ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ರೈತರ ಹಲವು ಜಮೀನುಗಳು ಒಣಗಿ ಹೋಗುತ್ತಿದ್ದವು ಜೊತೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿತ್ತು. ಇದನ್ನು ತಪ್ಪಿಸಲು ಕೆಬಿಜೆಎನ್ಎಲ್ ಸಖತ್ ಫ್ಲಾನ್ ಮಾಡಿದೆ. ಅದುವೇ ಈ ಸ್ಕಾಡಾ ಅಂದರೆ ಸ್ವಯಂಚಾಲಿತ ನೀರು ಹೊರಹರಿವು- ಒಳಹರಿವಿನ ಮಾಹಿತಿ ಹೊಂದಿರುವ ತಂತ್ರಜ್ಞಾನ. ಇದನ್ನು ನಾರಾಯಣಪುರದಲ್ಲಿ ಅಪರೇಟ್ ಮಾಡಲಾಗುತ್ತದೆ. ಜಿಐಎಸ್ ಆಧಾರಿತ ಸ್ಕಾಡಾ ಸ್ವಯಂಚಾಲಿತ ನೀರಾವರಿ ತಂತ್ರಜ್ಞಾನ ಅಳವಡಿಕೆಯು ಹೊಸ ಮಾದರಿಯಾಗಿದೆ.
ಶಾಸಕ ರಾಜೂಗೌಡ ಹುಟ್ಟೂರಿಗೆ ನಮೋ ಆಗಮನ:
ಸುರಪುರ ಶಾಸಕ ರಾಜೂಗೌಡ ಅವರ ಹೂಟ್ಟಾರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮ. ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರ ಜನ್ಮಭೂಮಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮವೂ ಕೊಡೇಕಲ್ ಗ್ರಾಮದ ಹೊರ ಭಾಗದಲ್ಲಿ ಸುಮಾರು 300 ಎಕರೆಯಲ್ಲಿ ಕಾರ್ಯಕ್ರಮ ಆಯೋಜನೆಗೆ ಸಿದ್ಧಗೊಳ್ಳುತ್ತಿದೆ. ವೇದಿಕೆ ನಿರ್ಮಾಣಕ್ಕೆ 60 ಎಕರೆ ಮೀಸಲಿಡಲಾಗಿದೆ. ಶಾಸಕ ರಾಜೂಗೌಡ ವಿಶೇಷ ಮುತುವರ್ಜಿ ವಹಿಸುವ ಮೂಲಕ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಿನ್ನೆ ಕಾರ್ಯಕ್ರಮದ ಸ್ಥಳವನ್ನು ಖುದ್ದು ಪರಿಶೀಲಿಸಿದ ಶಾಸಕ ರಾಜೂಗೌಡ ತಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮವಾಗುತ್ತಿದ್ದು, ಅವರ ಮುಂದೆ ನಿಂತು ಕಾರ್ಯಕ್ರಮ ಆಯೋಜನೆ ಮುಂದಾಗಿದ್ದಾರೆ.
8 ದಿನದಲ್ಲಿ 2 ಬಾರಿ ಕರ್ನಾಟಕಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ
6 ಹೆಲಿಪ್ಯಾಡ್ ಗಳ ನಿರ್ಮಾಣ: ಶಾಸಕ ರಾಜೂಗೌಡ
ಇದು ದೊಡ್ಡ ಕಾರ್ಯಕ್ರಮವಾಗುತ್ತಿದ್ದು 110 ಎಕರೆ ಪ್ರದೇಶದಲ್ಲಿ 6 ಹೆಲಿಪ್ಯಾಡ್ ಹಾಗೂ ವೇದಿಕೆ ಸೇರಿದಂತೆ ಕಾರ್ಯಕ್ರಮಕ್ಕೆ ಬಂದ ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 300 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡಲಾಗುತ್ತದೆ. ಜೊತೆಗೆ ಕಾರ್ಯಕ್ರಮಕ್ಕೆ ಬಂದ ಜನರಿಗೆ ಊಟದ ವ್ಯವಸ್ಥೆನ್ನು ಸಹ ಮಾಡಲು ಜಾಗವನ್ನ ರೆಡಿ ಮಾಡಿಕೊಂಡಿದ್ದಾರೆ. ಇನ್ನು ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಯ ಜನರು ಈ ಕಾರ್ಯಕ್ರಮಕ್ಕೆ ಆಗಮಿಲಿದ್ದು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಇನ್ನು ಇದರ ಜೊತೆಗೆ ಇದೆ ವೇಳೆ 2,054 ಕೋಟಿ ಅನುದಾನದಲ್ಲಿ ಬಹು ಗ್ರಾಮ ಕುಡಿಯುವ ನೀರಿಯ ಯೋಜನೆ ಕಾಮಗಾರಿಗೆ ಅಡಿಗಲ್ಲು ಕೂಡ ಮೋದಿ ನೆರವೇರಿಸಲಿದ್ದಾರೆ ಅಂತ ಶಾಸಕ ರಾಜುಗೌಡ ಮಾಹಿತಿ ನೀಡಿದ್ದಾರೆ.