BJP ಅಂದ್ರೆ ಯಾಕಿಷ್ಟು ದ್ವೇಷ..? JDS ಏನ್ ಮಾಡೋಕೆ ಹೊರಟಿದೆ: ನಾರಾಯಣ ಗೌಡ
ಬಿಜೆಪಿ ಎಂದರೆ ನಿಮಗೆ ಯಾಕಿಷ್ಟು ದ್ವೇಷ..? ಇಡೀ ದೇಶದಲ್ಲಿ ಬಿಜೆಪಿಯನ್ನು, ಮೋದಿಯನ್ನು ಜನ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಏನು ಮಾಡೋದಕ್ಕೆ ಹೊರಟಿದೆ ಎಂದು ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪ್ರಶ್ನಿಸಿದ್ದಾರೆ.
ಮಂಡ್ಯ(ನ.20): ಬಿಜೆಪಿ ಎಂದರೆ ನಿಮಗೆ ಯಾಕಿಷ್ಟು ದ್ವೇಷ..? ಇಡೀ ದೇಶದಲ್ಲಿ ಬಿಜೆಪಿಯನ್ನು, ಮೋದಿಯನ್ನು ಜನ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಏನು ಮಾಡೋದಕ್ಕೆ ಹೊರಟಿದೆ ಎಂದು ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪ್ರಶ್ನಿಸಿದ್ದಾರೆ.
ನಾಮಪತ್ರ ಸಲ್ಲಿಸುವ ದಿನ ದಿನ ನಾವು ಸ್ವಲ್ಪ ತಾಳ್ಮೆ ತೆಗೆದುಕೊಳ್ಳಲಿಲ್ಲ ಎಂದಾಗಿದ್ದರೆ ದೊಡ್ಡ ಗಲಾಟೆಯಾಗುತ್ತಿತ್ತು ಎಂದು ಜೆಡಿಎಸ್ ಗಲಾಟೆ ನೆನೆದು ನಾರಾಯಣ ಗೌಡ ಆಕ್ರೋಶ ಹೊರ ಹಾಕಿದ್ದಾರೆ.
ಕೆ. ಆರ್. ಪೇಟೆ: ಜಾತಿ ರಾಜಕಾರಣಕ್ಕೆ ಮುಂದಾದ್ರಾ ಅಭ್ಯರ್ಥಿಗಳು..?
ಬಿಜೆಪಿ ಎಂದರೆ ನಿಮಗೆ ಯಾಕಿಷ್ಟು ದ್ವೇಷ.? ನಮ್ಮ ಬಿಜೆಪಿ ಬಾವುಟ ಕಿತ್ತು ಹಾಕಿ ತುಳಿದಿದ್ದೀರಿ. ಇಡೀ ದೇಶದಲ್ಲಿ ಬಿಜೆಪಿಯನ್ನು, ಮೋದಿಯನ್ನು ಜನರು ಒಪ್ಪಿಕೊಂಡಿದ್ದಾರೆ. ನಾನೂ ಹತ್ತು ವರ್ಷ ಜೆಡಿಎಸ್‌ನಲ್ಲಿದ್ದೆ. ಆದರೆ ಈ ರೀತಿ ಗಲಾಟೆಯಾಗಲು ಬಿಟ್ಟಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನೊಬ್ಬ ಬಿಜೆಪಿ ಸೇರದಿದ್ರೆ ಸರ್ಕಾರ ಉಳಿಯುತ್ತಿರಲಿಲ್ಲ
ಸಚಿವ ಮಾಧುಸ್ವಾಮಿಯವರನ್ನು ಕೆಳಗೆ ಬೀಳಿಸಿ ಬಟ್ಟೆ ಎಳೆದಿದ್ದಾರೆ. ಜೆಡಿಎಸ್ ಏನು ಮಾಡಲು ಹೊರಟಿದೆ..? ನಾನೊಬ್ಬ ಬಿಜೆಪಿಗೆ ಹೋಗದಿದ್ರೆ ಸರ್ಕಾರವೇನೂ ಉಳಿಯುತ್ತಿರಲಿಲ್ಲ. ನನ್ನ ಮಗಳು ಕೆ. ಆರ್. ಪೇಟೆಗೆ ಬರಲು ಸಿಕ್ಕಾಬಟ್ಟೆ ಹೆದರಿಕೊಂಡಿದ್ದಾಳೆ. ನಾಮಪತ್ರ ಸಲ್ಲಿಕೆ ದಿನ ಪೊಲೀಸರು ನನ್ನನ್ನು ಬಚ್ಚಿಟ್ಟುಕೊಂಡು ಕರೆದುಕೊಂಡು ಬಂದರು.
ಕೆ. ಆರ್. ಪೇಟೆ ಉಪಚುನಾವಣೆ ಬಂದೋಬಸ್ತಿಗೆ ಪ್ಯಾರಾ ಮಿಲಿಟರಿ
ನನಗೆ 50 ಜನದಷ್ಟು ಚೆಪ್ಪಲಿಯಲ್ಲಿ ಹೊಡೆದರು. ನನ್ನ ಮಗಳು ಕೆ. ಆರ್. ಪೇಟೆಗೆ ಬರಲು ಸಿದ್ಧಳಿಲ್ಲ. ಬಿಎಸ್‌ಪಿಯಲ್ಲಿ ಚುನಾವಣೆ ಮಾಡಿದಾಗಲೂ ಮನೆಗೆ ಕಲ್ಲು ಹೊಡೆದಿದ್ರು. ಅಂದು ಪೊಲೀಸರು ಬಿಟ್ಟಿದ್ದರೆ ನನ್ನ ಒಂದು ಮೂಳೆನೂ ಉಳಿಯುತ್ತಿರಲಿಲ್ಲ. ಆ ರೀತಿ ಟ್ರೈನಿಂಗ್ ನೀಡಿ ಕರೆತರಲಾಗಿತ್ತು. ಚಿನಕುರಳಿ, ಹೊಳೆನರಸೀಪುರ ಸೇರಿದಂತೆ ಹಲವು ಕಡೆಗಳಿಂದ ಜನರನ್ನ ಕರೆಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಸರ್ಕಾರದ ರಕ್ಷಣೆಗೆ ಸ್ನೇಹಿತರು ಬರ್ತಾರೆಂಬ ವಿಶ್ವಾಸವಿದೆ: ಮಾಧುಸ್ವಾಮಿ