ಗುಡುಗಿನ ಅಬ್ಬರಕ್ಕೆ ಕೊಡಗಿನಲ್ಲಿ ಹುಟ್ಟಿದ್ದ ಚಂದದ ಅಣಬೆಗಳು ಹೀಗಿವೆ..!
ಕೊಡಗಿನಲ್ಲಿ ಭಾರೀ ಗುಡುಗು ಸಹಿತ ಮಳೆಗೆ ಸುಂದರ ಅಣಬೆಗಳು ಹುಟ್ಟಿಕೊಂಡಿವೆ. ನಾಪೋಕ್ಲು ಪರಿಸರದಲ್ಲಿ ಕಂಡ ಕೆಲ ಅಣಬೆಗಳು ದುಗ್ಗಳ ಸದಾನಂದ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗಿ
ಮಳೆಗಾಲದಲ್ಲಿ ಮೊದಲ ಮಳೆಯಿಂದ ನೆಲ ತೇವಗೊಂಡಾಗ ಅಲ್ಲಿ ಹುಟ್ಟುವ ವಿವಿಧ ಆಕಾರದ ಅಣಬೆಗಳು ಮನಸೂರೆಗೊಳ್ಳುತ್ತವೆ
ಪ್ರಕೃತಿಗಯ ವಿಶಿಷ್ಟ ಸೌಂದರ್ಯ ಮೇಳೈಸುತ್ತದೆ.
ಮಳೆಗಾಲದಲ್ಲಿ ಅರಳುವ ನಾನಾ ನಮೂನೆಯ ಅಣಬೆಗಳು ಪ್ರಕೃತಿಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.
ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ ಆಕಾರ ಹಾಗೂ ರೂಪಗಳಿವೆ. ಕೆಲವು ಆಹಾರಕ್ಕೆೆ ಬಳಕೆಯಾದರೆ ಮತ್ತೆೆ ಕೆಲವು ನೋಟಕ್ಕಷ್ಟೇ ಚೆನ್ನ.
ಕಾಫಿಯ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕುತ್ತಾರೆ.