ಆಷಾಢ ಮಾಸದ ಕೊನೆಯ ಸೋಮವಾರ: ನಂದಿಗಿರಿ ಪ್ರದಕ್ಷಿಣೆ ಮಾಡುತ್ತಿರುವ ಭಕ್ತರು

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರದಂದು ಹಮ್ಮಿಕೊಳ್ಳುವ ನಂದಿ ಗಿರಿ ಪ್ರದಕ್ಷಿಣೆಯಲ್ಲಿ ನೂರಾರು ಭಕ್ತರು ಸೋಮವಾರ ಬೆಳಗ್ಗೆ ದೇವರ ನಾಮ ಸ್ಮರಣೆಯೊಂದಿಗೆ ಪ್ರಾಕೃತಿಕ ರಮ್ಯತಾಣ ನಂದಿ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸುತ್ತಿದ್ದಾರೆ. 

nandigiri pradakshine and participating in thousand of devotees at chikkaballapur gvd

ಚಿಕ್ಕಬಳ್ಳಾಪುರ (ಜು.10): ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರದಂದು ಹಮ್ಮಿಕೊಳ್ಳುವ ನಂದಿ ಗಿರಿ ಪ್ರದಕ್ಷಿಣೆಯಲ್ಲಿ ನೂರಾರು ಭಕ್ತರು ಸೋಮವಾರ ಬೆಳಗ್ಗೆ ದೇವರ ನಾಮ ಸ್ಮರಣೆಯೊಂದಿಗೆ ಪ್ರಾಕೃತಿಕ ರಮ್ಯತಾಣ ನಂದಿ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸುತ್ತಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಕಳವಾರ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದು. ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಭಕ್ತರು ನಂದಿಯ ಭೋಗನಂಧೀಶ್ವರ ದೇವಾಲಯದಿಂದ ನಂದಿಗಿರಿ ಪ್ರದಕ್ಷಿಣೆ ಶುರು ಮಾಡಿದ್ದಾರೆ.

ಶ್ರೀ ಚಾಮುಂಡೇಶ್ವರಿ, ಲಕ್ಷ್ಮೀದೇವಿಗೆ ವಿಶೇಷ ಪೂಜೆ: ಆಷಾಢ ಮಾಸದ 3ನೇ ಶುಕ್ರವಾರ ಅಂಗವಾಗಿ ಪಟ್ಟಣದ ಚಾಮುಂಡೇಶ್ವರಿ ಹಾಗೂ ಶ್ರೀಲಕ್ಷ್ಮೀದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನಡೆದು ಸಾವಿರು ಭಕ್ತರು ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀಚಾಮುಂಡೇಶ್ವರಿ ದೇವಿಯನ್ನು ವಿಶೇಷವಾಗಿ ಮಾವಿನ ಹಣ್ಣುಗಳಿಂದ ಅಲಂಕರಿಸಲಾಗಿತ್ತು. 

ಗೃಹಜ್ಯೋತಿ ಎಫೆಕ್ಟ್: ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಲಕ್ಷ್ಮೀ ದೇವಿಗೆ ವಿವಿಧ ಬಗೆಯ ಹೂಗಳಿಂದ ದೇವಿ ಹಾಗೂ ದೇವಾಲಯದ ಪರಾಂಗಣವನ್ನು ಅಲಂಕರಿಸಲಾಗುತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಬೆಳಗ್ಗಿನಿಂದ ರಾತ್ರಿ ವರೆವಿಗೂ ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಬೆಲ್ಲದನ್ನ, ಬಾತು, ಮೊಸರನ್ನ ಸೇರಿದಂತೆ ಇತರೆ ಪ್ರಸಾದ ವಿನಿಯೋಗ ನಡೆಯಿತು.

ಶ್ರೀ ನಿಮಿಷಾಂಭ ದೇವಿಗೆ ವಿಶೇಷ ಪೂಜೆ: ಪಟ್ಟಣ ಸಮೀಪದ ಗಂಜಾಂನ ಶ್ರೀನಿಮಿಷಾಂಭ ದೇವಾಲಯದಲ್ಲಿ ಆಷಾಡ ಶುಕ್ರವಾರ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನಡೆದವರು. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಂದ ಆಗಮಿಸಿ ಪೂಜೆ ಸಲ್ಲಿಸಿದರು.

ಬೆಟ್ಟಳ್ಳಿ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ: ಆಷಾಢ ಮಾಸದ ಮೂರನೇ ಮಂಗಳವಾರ ಬೆಟ್ಟಳ್ಳಿ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಆದಿಪರ ಶಕ್ತಿ ಗ್ರಾಮ ದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಆಶಾಢ ಮಾಸದ ಮೂರನೇ ಮಂಗಳವಾರ ಭಕ್ತರಿಂದ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.  ಆಷಾಢ ಮಾಸದ ಮೂರನೇ ಮಂಗಳವಾರ ಬೆಟ್ಟಳ್ಳಿ ಮಾರಮ್ಮನಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ದೇವಿಗೆ ಅಭಿಷೇಕ ವಿಶೇಷ ಪೂಜೆ ನಡೆಯಿತು. 

ಈ ಬಾರಿ ಅದ್ದೂರಿಯಾಗಿ ನಡೆಯುತ್ತಾ ಮಹಿಷಾ ದಸರಾ?: ಸುಳಿವು ನೀಡಿದ ಸಚಿವ ಮಹದೇವಪ್ಪ

ಬೆಳಗ್ಗೆಯಿಂದಲೂ ಗ್ರಾಮಗಳಿಂದಲೂ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಹರಕೆ ಕಾಣಿಕೆ ಸಲ್ಲಿಸಿ ಪುನೀತರಾದರು. ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆಯನ್ನು ಸಹ ಕಲ್ಪಿಸುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆದರು. ದೇವಾಲಯದಲ್ಲಿ ಮುಂಭಾಗ ವಿಶೇಷ ಹೂವಿನ ಅಲಂಕಾರ ತಳಿರು ತೋರಣ ಹಾಗೂ ಮಾವಿನಕಾಯಿ ತೋರಣಗಳನ್ನು ಸಹ ಮಾಡಲಾಗಿತ್ತು. ವಿಶೇಷವಾಗಿ ಆಷಾಢ ಮಾಸದ ವಿಶೇಷ ಪೂಜೆಗೆ ಅಪಾರ ಸಂಖ್ಯೆಯ ಭಕ್ತರು ಬಂದು ದೇವಿಯ ದರ್ಶನ ಪಡೆದು ಪುನೀತರಾದರು.

Latest Videos
Follow Us:
Download App:
  • android
  • ios