ದುಬಾರಿ ವಿದ್ಯುತ್‌ ಬಿಲ್‌ ನೋಡಿ ದಂಗಾದ ಇಬ್ಬರು ವ್ಯಕ್ತಿ​ಗಳು ಬೆಸ್ಕಾಂ ಸಿಬ್ಬಂದಿ ಮೇಲೆ ಕೂಗಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಗ​ರದ ಟಿಪ್ಪು ನಗರ ಬಡಾ​ವ​ಣೆ​ಯಲ್ಲಿ ಭಾನುವಾರ ನಡೆದಿದೆ. 

ರಾಮನಗರ (ಜು.10): ದುಬಾರಿ ವಿದ್ಯುತ್‌ ಬಿಲ್‌ ನೋಡಿ ದಂಗಾದ ಇಬ್ಬರು ವ್ಯಕ್ತಿ​ಗಳು ಬೆಸ್ಕಾಂ ಸಿಬ್ಬಂದಿ ಮೇಲೆ ಕೂಗಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಗ​ರದ ಟಿಪ್ಪು ನಗರ ಬಡಾ​ವ​ಣೆ​ಯಲ್ಲಿ ಭಾನುವಾರ ನಡೆದಿದೆ. ಲೈನ್‌ ಮ್ಯಾನ್‌ ರಫೀಕ್‌ ಮತ್ತು ಮೀಟರ್‌ ರೀಡರ್‌ ಚಿನ್ಮಯ್‌ ಇಬ್ಬರೂ ಟಿಪ್ಪು ನಗರದ ಶಹಬಾಜ್‌ ಖಾನ್‌ ಮತ್ತು ತೌಸಿಫ್‌ ಭಾಷಾ ಅವರ ಮನೆಗೆ ಬೆಳಿಗ್ಗೆ ಜೂನ್‌ ತಿಂಗಳ ವಿದ್ಯುತ್‌ ಬಿಲ್‌ ಕೊಟ್ಟಿದ್ದಾರೆ. 

ಬಿಲ್‌ ನಲ್ಲಿ ದುಬಾರಿ ಮೊತ್ತ ನಮುದಾಗಿರುವುದನ್ನು ಕಂಡು ದಂಗಾದ ಇಬ್ಬರೂ, ಸರ್ಕಾರ ಫ್ರೀಯಾಗಿ ಕರಂಟ್‌ ಕೊಟ್ಟಿದ್ರೂ ಬಿಲ್‌ ನೀಡಲು ಬಂದಿದ್ದೀರಾ ಎಂದು ರಫೀಕ್‌ ಮತ್ತು ಚಿನ್ಮಯ್‌ ಜೊತೆ ಕೂಗಾಡಿ ಜಗ​ಳಕ್ಕೆ ಇಳಿ​ದಿದ್ದಾರೆ. ನಿಮಗೆ ಬಂದಿರುವ ಬಿಲ್‌ ಕೊಟ್ಟಿದ್ದೇವೆ. ನಮ್ಮ ಮೇಲೆ ಯಾಕೆ ಕೂಗಾಡು​ತ್ತೀರಾ ಎಂದು ಪ್ರಶ್ನಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆಸಿ ಹಲ್ಲೆಗೆ ಮುಂದಾಗಿದ್ದಾರೆ. ಘಟನೆ ಕುರಿತು ಬೆಸ್ಕಾಂನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಬಾರಿ ಅದ್ದೂರಿಯಾಗಿ ನಡೆಯುತ್ತಾ ಮಹಿಷಾ ದಸರಾ?: ಸುಳಿವು ನೀಡಿದ ಸಚಿವ ಮಹದೇವಪ್ಪ

ಕಾರೇಕುರದಲ್ಲಿ ಮುಸ್ಲಿಂ ಯುವಕರಿಂದ ದೌರ್ಜನ್ಯ: ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಬಳಿ ಇರುವ ಕಾವೇರಿ ನದಿ ತೀರದಲ್ಲಿ ಐದಾರು ಮಂದಿ ಇದ್ದ ಮುಸ್ಲಿಂ ಯುವಕರ ಗುಂಪು ಮೋಜು-ಮಸ್ತಿ ನಡೆಸಿದ್ದು, ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.

ಕಾರೇಕುರ ಗ್ರಾಮದ ಸಮೀಪವಿರುವ ನದಿ ತೀರ ಪ್ರದೇಶದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದ ಕಾರಣ ತಾಲೂಕು ಆಡಳಿತ ಆ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದೆ. ಈ ಪ್ರದೇಶಕ್ಕೆ ಮುಸ್ಲಿಂ ಯುವಕರ ಗುಂಪು ಪ್ರವೇಶಿಸಿ ಮೋಜು-ಮಸ್ತಿ ನಡೆಸಿ, ರೈತರ ಜಮೀನಿನಲ್ಲಿ ಓಡಾಡಿದ್ದರು. ಇವರ ವರ್ತನೆಯನ್ನು ಕಂಡ ಗ್ರಾಮದ ಇಬ್ಬರು ಇದು ನಿಷೇಧಿತ ಪ್ರದೇಶ. ಇಲ್ಲಿಗೆ ಬರಬಾರದು. ಜಮೀನಿನಲ್ಲಿ ಹೀಗೆಲ್ಲಾ ಮಾಡುವುದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದರು ಎನ್ನಲಾಗಿದೆ.

ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಬಿಜೆಪಿ ಹೋರಾಟ: ಬೊಮ್ಮಾಯಿ ಘೋಷಣೆ

ಆ ಸಮಯದಲ್ಲಿ ಬುದ್ಧಿಮಾತು ಹೇಳಿದವರ ವಿರುದ್ಧವೇ ತಿರುಗಿಬಿದ್ದ ಮುಸ್ಲಿಂ ಯುವಕರು ಇಬ್ಬರ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಕಾರಿನಲ್ಲಿ ಹೊರಟರು. ಹಲ್ಲೆಯಿಂದ ಕ್ರೋಧಗೊಂಡ ಇಬ್ಬರು ಗ್ರಾಮಸ್ಥರು ಊರಿನವರಿಗೆ ಮೊಬೈಲ್‌ ಕರೆ ಮಾಡಿ ವಿಷಯ ಮುಟ್ಟಿಸಿದರು. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಕಾರಿನಲ್ಲಿ ಬಂದ ಮುಸ್ಲಿಂ ಯುವಕರನ್ನು ಅಡ್ಡಗಟ್ಟಿಪ್ರಶ್ನಿಸಿದರು. ಆಗ ಕಾರಿನಲ್ಲಿದ್ದ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ಗ್ರಾಮಸ್ಥರು ಅವುಗಳನ್ನು ಕಿತ್ತುಕೊಂಡು ಚೆನ್ನಾಗಿ ಥಳಿಸಿ ಕಳುಹಿಸಿದ್ದಾರೆ.