ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬಟ್ಟೆಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಟ್ಟೆಗಳಿಗೆ ತೆರಳಿ ಲಕ್ಷಾಂತ ರು. ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗಿದ್ದ ನೆರೆರಾಜ್ಯದ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಆ.24): ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬಟ್ಟೆಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಟ್ಟೆಗಳಿಗೆ ತೆರಳಿ ಲಕ್ಷಾಂತ ರು. ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗಿದ್ದ ನೆರೆರಾಜ್ಯದ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮತ್ತಪತಿ ರಾಣಿ(33), ಈಟಾ ಸುನೀತಾ(45), ರತ್ನಲು(46), ಶಿವರಾಮ್‌ ಪ್ರಸಾದ್‌(34), ವೆಂಕಟೇಶ್‌ (42), ತಣ್ಣೀರ್‌ ಶಿವಕುಮಾರ್‌(33), ತೊತ್ತುಕ್ಕ ಭರತ್‌(30) ಬಂಧಿತರು. ಆರೋಪಿಗಳಿಂದ 4 ಲಕ್ಷ ರು. ಮೌಲ್ಯದ 22 ಸೀರೆ ಮತ್ತು ಒಂದು ಬ್ಲೌಸ್‌ ಪೀಸ್‌ ಜಪ್ತಿ ಮಾಡಲಾಗಿದೆ. 

ಆರೋಪಿಗಳು ಇತ್ತೀಚೆಗೆ ನಗರದ ಸ್ಯಾಂಕಿ ರಸ್ತೆ ರೈನ್‌ ಟ್ರೀ ಹೋಟೆಲ್‌ನ ಪೆನ್‌ರಿವ್‌ ಎಂಟರ್‌ ಪ್ರೈಸಸ್‌ನಲ್ಲಿ ಸಾವಿರಾರು ರು. ಮೌಲ್ಯದ ನಾಲ್ಕು ಸೀರೆ ಮತ್ತು ಬ್ಲೌಸ್‌ ಪೀಸ್‌ಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರುಗಳಲ್ಲಿ ಎಂಟ್ರಿ!: ಆರೋಪಿಗಳು ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬಟ್ಟೆಖರೀದಿಸುವ ಗ್ರಾಹಕರ ಸೋಗಿನಲ್ಲಿ ಆಂಧ್ರಪ್ರದೇಶದಿಂದ ಕಾರುಗಳಲ್ಲಿ ನಗರಕ್ಕೆ ಬರುತ್ತಿದ್ದರು. 

ಇದು ನನ್ನ ಕೊನೆಯ ಬಸ್‌ ಸ್ಟಾಪ್‌, ಇಂದು ಬೆಂಗಳೂರಲ್ಲಿ ಕಾಂಗ್ರೆಸ್‌ ಸೇರುವೆ: ಆಯ​ನೂರು

ಮೊದಲಿಗೆ ಮಹಿಳೆಯರು ಪ್ರತಿಷ್ಠಿತ ಬಟ್ಟೆಅಂಗಡಿಗಳಿಗೆ ತೆರಳುತ್ತಿದ್ದರು. ವಿವಿಧ ವಿನ್ಯಾಸ ಸೀರೆಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳುತ್ತಿದ್ದರು. ಇದೇ ಸಮಯಕ್ಕೆ ಪುರುಷರು ಬಟ್ಟೆ ಅಂಗಡಿಗೆ ಪ್ರವೇಶ ಪಡೆದು ಬಟ್ಟೆಗಳನ್ನು ತೋರಿಸುವಂತೆ ಸಿಬ್ಬಂದಿಯ ಗಮನ ಬೇರೆಡೆ ಸೆಳೆಯುತ್ತಿದ್ದರು. ಈ ವೇಳೆ ಮಹಿಳೆಯರು ದುಬಾರಿ ಮೌಲ್ಯದ ಸೀರೆಗಳನ್ನು ಕದ್ದು ತಮ್ಮ ಬಟ್ಟೆಯೊಳಗೆ ಬಚ್ಚಿಟ್ಟುಕೊಳ್ಳುತ್ತಿದ್ದರು. ಹೀಗೆ ನೂರಾರು ಸೀರೆ ತೆಗೆಸಿ ನೋಡಿ ಕೊನೆಗೆ ಕಡಿಮೆ ದರದ ಒಂದೆರೆಡು ಸೀರೆ ಖರೀದಿಸಿ ಜಾಗ ಖಾಲಿ ಮಾಡುತ್ತಿದ್ದರು. 

ಇಸ್ರೋ ವಿಜ್ಞಾನಿಗಳ ಸಾಧನೆ: ನೆಹರು ತಾರಾಲಯದಲ್ಲಿ ಹರ್ಷೋದ್ಘಾರ

ಆರೋಪಿಗಳು ಬೆಂಗಳೂರಿನಲ್ಲಿ ಕದ್ದ ಸೀರೆಗಳನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಗಿರಾಕಿಗಳನ್ನು ಹುಡುಕಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸ್ಯಾಂಕಿ ರಸ್ತೆಯ ಬಟ್ಟೆಅಂಗಡಿಯಲ್ಲಿ ನಡೆದ ಸೀರೆ ಕಳವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಅಂಗಡಿ ಮಾಲೀಕರು ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.