ಬೆಂಗಳೂರು(ಫೆ.12): ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್ಫ್‌ ಲಿಂಕ್ಸ್‌ ಬ್ಯುಜಿನೆಸ್‌ ಪಾರ್ಕ್‌ವರೆಗೂ ಸಹ ಪ್ರಯಾಣಿಕರೊಂದಿಗೆ ದರ ಹಂಚಿಕೊಂಡು ಸಂಚರಿಸಲು ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೊ ಪ್ರಯಾಣಿಕರಿಗಾಗಿ ‘ನಮ್ಮ ಆಟೋ’ ಎಂಬ ಶೇರಿಂಗ್‌ ಆಟೋ ಸೌಲಭ್ಯ ಆರಂಭಗೊಂಡಿದೆ.

ಯುರೋಪಿಯನ್‌ ಯೂನಿಯನ್‌ ಯೋಜನೆಯಡಿ ಎಚ್‌ಎಐಎಲ್‌ ಸಂಸ್ಥೆ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ‘ನಮ್ಮ ಆಟೋ’ ಸಂಘದ ಸಹಭಾಗಿತ್ವದಲ್ಲಿ ಮೆಟ್ರೋ ಪ್ರಯಾಣಿಕರಿಗೆ ನಿರ್ದಿಷ್ಟಮಾರ್ಗ ಮತ್ತು ನಿರ್ದಿಷ್ಟದರದಲ್ಲಿ ಆಟೋ ರಿಕ್ಷಾ ಸೌಲಭ್ಯ ಆರಂಭಿಸಲಾಗಿದೆ.

ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪೀಡಿತ ಮಹಿಳೆ!

ಪ್ರತಿ ದಿನ ಇಂದಿರಾ ನಗರದಿಂದ ಎಂಬೆಸ್ಸಿ ಗಾಲ್‌್ಫ ಲಿಂಕ್ಸ್‌ಗೆ ತೆರಳುವ ಮತ್ತು ಆಗಮಿಸುವ ನಮ್ಮ ಮೆಟ್ರೋ ಪ್ರಯಾಣಿಕರು ‘ನಮ್ಮ ಆಟೋ’ ಸೇವೆ ಪಡೆಯಬಹುದಾಗಿದೆ. ಆದರೆ ಅದಕ್ಕೂ ಮೊದಲು ನಮ್ಮ ಆಟೋ ಸೇವೆ ಪಡೆಯಲು ಇಚ್ಛಿಸುವವರು ‘ಎಚ್‌ಎಐಎಲ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಮೊಬೈಲ್‌ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.

ಒಂದೇ ರೀತಿಯ ದರ:

ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಕೆಎಫ್‌ಸಿ ಸಿಗ್ನಲ್‌, ಸೋನಿ ಸೆಂಟರ್‌, ದೂಪನಹಳ್ಳಿ ಬಸ್‌ ನಿಲ್ದಾಣ, ದೊಮ್ಮಲೂರು ಫ್ಲೈಓವರ್‌(ಬಿಬಿಕ್ಯೂ ಎದುರು), ಹೀರೋಹೋಂಡಾ ಶೋರೂಮ್‌, ಓಪನ್‌ ಟೆಕ್ಸ್ಟ್‌, ಐಬಿಎಂ ಸಿ.ಬ್ಲಾಕ್‌, ಎಂಬೆಸ್ಸಿ ಗಾಲ್‌್ಫ ಲಿಂಕ್ಸ್‌ ವೃತ್ತ, ಎಂಬೆಸ್ಸಿ ಗಾಲ್‌್ಫ ಲಿಂಕ್ಸ್‌ ಹೀಗೆ 12 ನಿಲ್ದಾಣಗಳಲ್ಲಿ ನಮ್ಮ ಆಟೋ ನಿಲುಗಡೆ ವ್ಯವಸ್ಥೆ ಇದೆ. ಇಂದಿರಾ ನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್‌್ಫ ಲಿಂಕ್ಸ್‌ ವರೆಗೂ ನಾಲ್ಕೂವರೆ ಕಿ.ಮೀ. ಇದ್ದು, ಈ ಮಾರ್ಗದಲ್ಲಿ ಬರುವ ಯಾವುದೇ ನಿಲ್ದಾಣದಲ್ಲಿ ಇಳಿದರೂ ಒಂದೇ ರೀತಿಯ ದರ (.30) ನಿಗದಿಪಡಿಸಲಾಗಿದೆ. ಶೇರಿಂಗ್‌ ಆಟೋ ರಿಕ್ಷಾ ಸೇವೆಯನ್ನು ಶೀಘ್ರವೇ ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸುವುದಾಗಿ ‘ನಮ್ಮ ಆಟೋ’ ಮಾಹಿತಿ ನೀಡಿದೆ.

ಮಾಲಿನ್ಯ ಮುಕ್ತ ಆಟೋರಿಕ್ಷಾ:

ಪ್ರಸ್ತುತ ನಮ್ಮ ಆಟೋ ಸಂಘ ಪರಿಸರ ಮಾಲಿನ್ಯ ಮುಕ್ತ ಸೇವೆ ಒದಗಿಸಲು ಆದ್ಯತೆ ನೀಡಿದೆ. ನಮ್ಮ ಆಟೋ ಚಾಲಕರು ಎಲ್‌ಪಿಜಿ ಆಟೋ ರಿಕ್ಷಾಗಳನ್ನು ಬಳಸುತ್ತಿದ್ದಾರೆ. ಇದುವರೆಗೂ 35ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳನ್ನು ಕೊಡಿಸಲಾಗಿದೆ ಎಂದು ‘ನಮ್ಮ ಆಟೋ’ ಉಪಾಧ್ಯಕ್ಷ ಜಯರಾಂ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

'ದೇವಸ್ಥಾನದಲ್ಲಿ ಡೊಳ್ಳು, ತಮಟೆ ಬಾರಿಸ್ಬೇಡಿ'..!

ಕಳೆದ ಎರಡು ತಿಂಗಳ ಹಿಂದೆ ಎಚ್‌ಎಐಎಲ್‌ ಸಂಸ್ಥೆಯೊಂದಿಗೆ ನಮ್ಮ ಆಟೋ ಸಂಘದ ಕೆಲವರು ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್‌್ಫ ಲಿಂಕ್ಸ್‌ವರೆಗೂ ಶೇರಿಂಗ್‌ ಆಟೋ ಸೇವೆ ನೀಡುತ್ತಿದ್ದಾರೆ. ಅದು ಯಶಸ್ವಿಯಾದರೆ ನಮ್ಮ ಮೆಟ್ರೋದ ಇತರ ನಿಲ್ದಾಣಕ್ಕೂ ‘ನಮ್ಮ ಆಟೋ’ ಶೇರಿಂಗ್‌ ಸೇವೆ ವಿಸ್ತರಿಸುವ ಗುರಿ ಇದೆ ಎಂದು ನಮ್ಮ ಆಟೋ ಸಂಘ ಅಧ್ಯಕ್ಷ ರಘು ತಿಳಿಸಿದ್ದಾರೆ.