ಬೆಂಗಳೂರು(ಫೆ.12): ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿರುವ ಸಪ್ತಮಾತೃಕೆ ಆದಿಶಕ್ತಿ ದೇವಸ್ಥಾನದ ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸದಂತೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ದೇವಸ್ಥಾನದ ಅರ್ಚಕರಿಗೆ ಸೂಚಿಸಿದ್ದಾರೆ.

ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸುವುದರಿಂದ ಕಚೇರಿ ಕೆಲಸಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಕಚೇರಿ ಅವಧಿಯಲ್ಲಿ ತಮಟೆ,ಡೊಳ್ಳು ಸೇರಿದಂತೆ ಇನ್ನಿತರ ವಾದ್ಯಗಳನ್ನು ಬಾರಿಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಜಾಲಹಳ್ಳಿ ಕ್ರಾಸ್‌ ಅಂಡರ್‌ಪಾಸ್‌ ಕಾಮಗಾರಿ 4 ತಿಂಗಳು ವಿಳಂಬ!

ಬಿಬಿಎಂಪಿ ಆವರಣದಲ್ಲಿರುವ ಸಪ್ತಮಾತೃಕ ಆದಿಶಕ್ತಿ ದೇವಸ್ಥಾನ ಪಾರಂಪರಿಕ ಹಿನ್ನೆಲೆ ಹೊಂದಿರುವುದರಿಂದ ನಾನಾ ಸಂಪ್ರದಾಯಕ ಹಾಗೂ ಧಾರ್ಮಿಕ ಆಚರಣೆ ನಿರಂತರವಾಗಿ ನಡೆಯುತ್ತಿರುತ್ತವೆ. ಹೀಗಾಗಿ, ಭಕ್ತರು ಮೆರವಣಿಗೆ ನಡೆಸುತ್ತಾರೆ. ಈ ವೇಳೆ ತಮಟೆ ಹಾಗೂ ಡೊಳ್ಳು ಬಾರಿಸಲಾಗುತ್ತದೆ. ಇದರಿಂದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಅಧಿಕಾರಿ ಸಿಬ್ಬಂದಿಗೆ ಕೆಲಸ ಮಾಡುವುದಕ್ಕೆ ತೊಂದರೆ ಉಂಟಾಗಲಿದೆ. ಹಾಗಾಗಿ, ಇನ್ನು ಮುಂದೆ ಕಚೇರಿ ಅವಧಿಯಲ್ಲಿ ಡೊಳ್ಳು ಮತ್ತು ತಮಟೆ ಬಾರಿಸದಂತೆ ದೇವಸ್ಥಾನದ ಅರ್ಚಕರಿಗೆ ಆಯುಕ್ತರು ಖಡಕ್‌ ಸೂಚನೆ ನೀಡಿದ್ದಾರೆ.

ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್‌ ಕಡ್ಡಾಯವಲ್ಲ: ಸ್ಪಷ್ಟನೆ

ದೇವಸ್ಥಾನ ಅಭಿವೃದ್ಧಿಗೆ 50 ಲಕ್ಷ ಅನುದಾನವನ್ನು ಬಿಬಿಎಂಪಿ ನೀಡಿದ್ದು, ಕೆಆರ್‌ಐಡಿಎಲ್‌ನಿಂದ ಕಾಮಗಾರಿಗೆ ನಡೆಸಲಾಗುತ್ತಿದೆ. ದುರಸ್ತಿ ಕಾಮಗಾರಿಗೆ ಚಾಲನೆ ನೀಡುವುದಕ್ಕೆ ದೇವಸ್ಥಾನದ ಅರ್ಚಕರು ಆಯುಕ್ತರನ್ನು ಆಹ್ವಾನಿಸುವುದಕ್ಕೆ ಹೋದ ಸಂದರ್ಭದಲ್ಲಿ ಆಯುಕ್ತರು ಈ ಸೂಚನೆ ನೀಡಿದ್ದಾರೆ. ಜತೆಗೆ ದುರಸ್ತಿ ಕಾಮಗಾರಿಗೆ ಅನುಮತಿ ನೀಡಿದ ಅಧಿಕಾರಿ ಯಾರು? ಆ ಕಡತವನ್ನು ಪರಿಶೀಲನೆ ಮಾಡಿ ಎಂದೂ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ನಮಾಜ್‌ ವೇಳೆ ಮಿತಿ ಮೀರಿದ ಶಬ್ದ: ಲೈಸೆನ್ಸ್ ಕೇಳಿದ ಕೋರ್ಟ್‌

ಈ ಕುರಿತು ಪ್ರತಿಕ್ರಿಯೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ‘ಬಿಬಿಎಂಪಿ ಆವರಣದಲ್ಲಿ ಪಾರಂಪರಿಕ ಹಿನ್ನೆಲೆ ಹೊಂದಿರುವ ದೇವಸ್ಥಾನ ಇದೆ. ಆದರೆ, ಡೊಳ್ಳು, ತಮಟೆ ಬಾರಿಸಿದರೆ ಕೆಲಸ ಮಾಡುವುದಕ್ಕೆ ತೊಂದರೆ ಅಗಲಿದೆ. ಈಗಾಗಲೇ ಹೆಚ್ಚು ಶಬ್ದ, ಜನದಟ್ಟಣೆ ಉಂಟು ಮಾಡದಂತೆ ಸೂಚಿಸಲಾಗಿದೆ. ಇನ್ನು ದೇವಸ್ಥಾನ ಅಭಿವೃದ್ಧಿಗೆ ಯಾವುದೇ ಆಕ್ಷೇಪಣೆ ಇಲ್ಲ. ಜನಸಂದಣೆ ಹೆಚ್ಚಾಗದಂತೆ ಈಗ ಇರುವ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ನನ್ನ ಕಳಕಳಿಯಾಗಿದೆ’ ಎಂದು ಹೇಳಿದ್ದಾರೆ.

ಕರಗ ವಿಶೇಷದ ಧರ್ಮರಾಯ ದೇವಸ್ಥಾನ ನಮ್ಮ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಇರುವುದು ನಮಗೆ ಶಕ್ತಿಪೀಠವಿದ್ದಂತೆ. ದೇವಸ್ಥಾನದ ಜೀರ್ಣೋದ್ಧಾರ ಮಾಡುವುದು ಅವಶ್ಯವಾಗಿದೆ. ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಈ ಹಿಂದಿನಿಂದಲೂ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ ಎಂದು ಮೇಯರ್ ಗೌತಮ್ ತಿಳಿಸಿದ್ದಾರೆ.