ಬೀಜಿಂಗ್‌[ಫೆ.12]: ಕೊರೋನಾ ವೈರಸ್‌ಗೆ ತುತ್ತಾಗಿದ್ದ ಚೀನಾದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವುಹಾನ್‌ನಲ್ಲಿ ಭಾರೀ ಪ್ರಮಾಣದ ಸಲ್ಫರ್‌: ಕೊರೋನಾಗೆ ಅಸಂಖ್ಯಾತ ಬಲಿ?

ಚೀನಾದ ವಾಯುವ್ಯ ಭಾಗದಲ್ಲಿರುವ ಶಾಂಕ್ಸಿ ಪ್ರಾಂತ್ಯದಲ್ಲಿ 33 ವರ್ಷದ ಮಹಿಳೆಯೊಬ್ಬರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಮಹಿಳೆ ಕೊರೋನಾ ಸೋಂಕು ಪೀಡಿತೆಯಾಗಿದ್ದರಿಂದ, ಮಗುವಿಗೂ ಈ ಕಾಯಿಲೆ ಅಂಟಿಕೊಂಡಿರಬಹುದು ಎಂಬ ಆತಂಕವಿತ್ತು. ಸುದೈವಶಾತ್‌ ಮಗುವು ಆರೋಗ್ಯಪೂರ್ಣವಾಗಿದೆ.

ಆದಾಗ್ಯೂ, ಐಸಿಯುನಲ್ಲೇ ಇರುವ ಮಗುವನ್ನು ಕೆಲ ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕೊರೋನಾಗೆ ಹೋಮಿಯೋಪತಿ ಔಷಧ ಇಲ್ಲ: ಸರ್ಕಾರ ಸ್ಪಷ್ಟನೆ!