*   ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌*   ಹಿಂದೂ ಪರ ಸಂಘಟನೆಗಳಿಂದ ಸ್ಥಳಕ್ಕೆ ಭೇಟಿ*   ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

ಬೆಂಗಳೂರು(ಫೆ.01): ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹಮಾಲರ ವಿಶ್ರಾಂತಿ ಕೊಠಡಿಯೊಂದರಲ್ಲಿ ಮುಸ್ಲಿಂ(Muslim) ಸಮುದಾಯದ ಹಮಾಲಿಗಳ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲಾತಾಣಗಳಲ್ಲಿ(Social Media) ವೈರಲ್‌ ಆಗಿದ್ದು, ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ರೈಲ್ವೆ ನಿಲ್ದಾಣದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣವಾಗುತ್ತಿದ್ದು, ಒಂದು ಸಮುದಾಯದ ಹಮಾಲಿಗಳು ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದಾರೆ. ಯಾವ ಆಧಾರದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದಾರೆ.

Gurgaon: Namaz ಸಲ್ಲಿಕೆಗೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು!

ಅಲ್ಲದೆ, ಈ ಕೃತ್ಯ ರಾಷ್ಟ್ರೀಯ ಸುರಕ್ಷತಾ ದೃಷ್ಟಿಯಿಂದ(National Security Vision) ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಮುಸ್ಲಿಂ ಹಮಾಲರಿಗೆ(Hamali) ಪ್ರಾರ್ಥನೆ ಸಲ್ಲಿಸಲು ನಿಲ್ದಾಣದ ಹೊರ ಭಾಗಗಳಲ್ಲಿ ಹಲವಾರು ಮಸೀದಿಗಳಿವೆ. ಹೀಗಿದ್ದರೂ, ನಿಲ್ದಾಣದ ಫ್ಲಾಟ್‌ಫಾರ್ಮ್‌ಗಳ ಮಧ್ಯದಲ್ಲಿ ಅವಕಾಶ ನೀಡಿರುವುದು ಷಡ್ಯಂತ್ರವಾಗಿದೆ. ಮುಂದೊಂದು ದಿನ ಈ ಸ್ಥಳವನ್ನು ಮಸೀದಿಯನ್ನಾಗಿ(Mosque) ಪರಿವರ್ತಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಕೃತ್ಯಕ್ಕೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಹಿಂದೂ ಜನ ಜಾಗೃತಿ ಸಮಿತಿ, ಭಜರಂಗದಳ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷದ್‌ನ ಸದಸ್ಯರು ಮುಸ್ಲಿಮರ ಪ್ರಾರ್ಥನೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹಳೆಯ ಪದ್ಧತಿ: ರೈಲ್ವೆ ಇಲಾಖೆ ಸ್ಪಷ್ಟನೆ

ರೈಲ್ವೆ ನಿಲ್ದಾಣದ(Railway Station) ಆವರಣದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂಬುದು ಸುಳ್ಳು. ರೈಲ್ವೆಯಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಹಮಾಲರಿದ್ದು, ಅವರು ವಿಶ್ರಾಂತಿ ಪಡೆಯಲು ಕೊಠಡಿಗಳನ್ನು ಒದಗಿಸಲಾಗಿದೆ. ಈ ಕೊಠಡಿಯಲ್ಲಿ ಎಲ್ಲ ಧರ್ಮದವರ ಫೋಟೋ ಈ ಕೊಠಡಿಗಳಲ್ಲಿ ಅಳವಡಿಸಿದ್ದು, ಸಹಬಾಳ್ವೆಯಿಂದ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಅಲ್ಲದೆ, ಫ್ಲಾಟ್‌ಫಾರ್ಮ್‌ ಸಂಖ್ಯೆ 7ರಲ್ಲಿ ಹಿಂದೂ ದೇವರ ದೇವಾಲಯವಿದೆ. ಅಲ್ಲಿ ನಿತ್ಯ ಪೂಜೆಗಳು ನಡೆಯುತ್ತಿವೆ. ರೈಲ್ವೆ ನಿಲ್ದಾಣ ಸರ್ವ ಧರ್ಮಿಯರ ತಾಣವಾಗಿದ್ದು, ಒಂದು ಧರ್ಮದವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ರೈಲ್ವೆ ಇಲಾಖೆಯ(Department of Railways) ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Collegeನಲ್ಲಿ ನಮಾಜ್‌ಗೆ ನಕಾರ: ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕ ಪತ್ರ!

ಜೈಪುರ್‌: ಕಾಲೇಜು ಆವರಣದಲ್ಲಿ ನಮಾಜ್ (Namaz) ಮಾಡಲು ಮುಸ್ಲಿಂ (Muslim) ವಿದ್ಯಾರ್ಥಿಯನ್ನು ತಡೆದ ಕಾಲೇಜು ಉಪಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜೈಪುರ ಶಾಸಕ ಅಮೀನ್ ಕಾಗ್ಜಿ (Amin Kagzi) ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಪತ್ರ ಬರೆದಿದ್ದರು.

ಬಿಜೆಪಿ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ವಾಸುದೇವ್ ದೇವನಾನಿ (Vasudev Devnani) ಅವರು ಕಾಂಗ್ರೆಸ್‌ನ ಕಿಶನ್‌ಪೋಲ್ (Kishnpole) ಶಾಸಕ ಅಮೀನ್ ಕಾಗ್ಜಿ ಅವರು "ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ" ಎಂದು ಆರೋಪಿಸಿ ಬರೆದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಮಸೀದಿ ಬಾಗಿಲು ಮುಚ್ಚಿ ನಮಾಜ್‌: 7 ಮಂದಿ ಮೇಲೆ ಕೇಸ್‌

ಕಳೆದ ವರ್ಷ ರಾಜಸ್ಥಾನದ ಜೈಪುರದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ನಮಾಜ್ ಮಾಡದಂತೆ ಉಪಪ್ರಾಂಶುಪಾಲರು (vice principal) ತಡೆದಿದ್ದರು ಎನ್ನಲಾಗಿದೆ. ಕಾಗ್ಜಿ ಅವರು ತಮ್ಮ ಪತ್ರದಲ್ಲಿ ಕಾಲೇಜು ಪಾರ್ಕಿಂಗ್ (College Parking) ಸ್ಥಳದ ಒಂದು ಮೂಲೆಯಲ್ಲಿ ನಮಾಝ್ ಮಾಡುವುದನ್ನು ತಡೆಯುವ ಘಟನೆಯ ಹಿಂದೆ ಉಪ ಪ್ರಾಂಶುಪಾಲರಾದ ಆರ್.ಎನ್.ಶರ್ಮಾ (R N Sharma) ಅವರ ಕೈವಾಡವಿದೆ ಎಂದು ಉಲ್ಲೇಖಿಸಿದ್ದಾರೆ. ಜತೆಗೆ ಶರ್ಮಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ (Syndicate Member) ಮತ್ತು ಶಾಸಕ ಅಮೀನ್ ಕಾಗ್ಜಿ ಅವರು ಕಾಲೇಜಿನಲ್ಲಿ ನಡೆದ ನಮಾಜ್ ಘಟನೆಯ ಬಗ್ಗೆ ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ," ಇಂತಹ ಕ್ರಮಗಳು ಶಿಕ್ಷಣ ಸಂಸ್ಥೆಗಳನ್ನು "ಮೂಲಭೂತವಾದಿ ಚಿಂತನೆ" ಯಿಂದ ಕಲುಷಿತಗೊಳಿಸುತ್ತವೆ ಎಂದು ದೇವನಾನಿ ಹೇಳಿದ್ದರು.